More

    ಪ್ರತಿ ಗ್ರಾಪಂಗೆ ಸ್ವಚ್ಛತಾಗಾರರ ನೇಮಕ ಮಾಡಿ

    ಚಿಕ್ಕಬಳ್ಳಾಪುರ : ಸ್ಥಳೀಯ ಆಡಳಿತ ಸಂಸ್ಥೆಗಳ ಸಾಮೂಹಿಕ ಶೌಚಗೃಹ ಟೆಂಡರ್‌ಗಳನ್ನು ಸಾಯಿ ಕರ್ಮಚಾರಿ ಅವಲಂಬಿತರಿಗೆ ಮೀಸಲಿಡಬೇಕು ಮತ್ತು ಪ್ರತಿ ಗ್ರಾಮಪಂಚಾಯ್ತಿಗೆ ಕನಿಷ್ಠ ವೇತನದಡಿ ಸ್ವಚ್ಛತಾಗಾರರೊಬ್ಬರ ನೇಮಕಾತಿ ಮಾಡಬೇಕು ಎಂದು ರಾಷ್ಟ್ರೀಯ ಸಾಯಿ ಕರ್ಮಚಾರಿಗಳ ಆಯೋಗದ ಸದಸ್ಯ ಜಗದೀಶ್ ಹಿರೇಮಣಿ ಜಿಲ್ಲಾಡಳಿತಕ್ಕೆ ಸೂಚಿಸಿದರು.

    ಜಿಲ್ಲಾಡಳಿತ ಭವನದಲ್ಲಿ ಬುಧವಾರ ಸಾಯಿ ಕರ್ಮಚಾರಿಗಳ ಕಾರ್ಯಕ್ರಮ ಅನುಷ್ಠಾನ ಮತ್ತು ಕುಂದು ಕೊರತೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಪ್ರತಿ ಗ್ರಾಪಂಗೆ ಸ್ವಚ್ಛತಾಗಾರರೊಬ್ಬರನ್ನು ನೇಮಿಸಿಕೊಂಡು ಕನಿಷ್ಠ ವೇತನ ನೀಡಬೇಕು. ಅಗತ್ಯವಿದ್ದಲ್ಲಿ ಸ್ಥಳೀಯ ಅನುದಾನದಲ್ಲಿ ಹೆಚ್ಚುವರಿಯಾಗಿ ಮತ್ತೊಂದು ಹುದ್ದೆ ಭರ್ತಿ ಮಾಡಿಕೊಳ್ಳಬಹುದು. ಆದರೆ, ಇದರಲ್ಲಿ ಅರ್ಹ ವ್ಯಕ್ತಿಗೆ ಅವಕಾಶ ನೀಡಬೇಕು ಎಂದು ತಿಳಿಸಿದರು.

    ಹಿಂದೆ ಸ್ಥಳೀಯ ಆಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಸಾಮೂಹಿಕ ಶೌಚಗೃಹಗಳ ಟೆಂಡರ್ ಅನ್ನು ದೊಡ್ಡ ಗುತ್ತಿಗೆದಾರರಿಗೆ ನೀಡಲಾಗುತ್ತಿತ್ತು. ಈಗ ಅವಕಾಶವಿಲ್ಲ. ಸರ್ಕಾರದ ಹೊಸ ಸುತ್ತೋಲೆ ಆದೇಶದನ್ವಯ ಸಾಯಿ ಕರ್ಮಚಾರಿ ಆವಲಂಬಿತರಿಗೆ ಮೀಸಲಿಟ್ಟು, ಟೆಂಡರ್ ಕರೆಯಬೇಕು ಎಂದು ತಿಳಿಸಿದರು.

    ನಗರಾಭಿವೃದ್ಧಿ ಯೋಜನಾ ನಿರ್ದೇಶಕಿ ಎನ್.ರೇಣುಕಾ ಮಾತನಾಡಿ, ಜಿಲ್ಲೆಯ ನಗರ ಸ್ಥಳೀಯ ಆಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಾಯಂ 159, ದಿನಗೂಲಿ 80, ಹೊರಗುತ್ತಿಗೆ 191, ಸಮಾನ ಕೆಲಸಕ್ಕೆ ಸಮಾನ ವೇತನದಡಿ 4 ಮತ್ತು ಕ್ಷೇಮಾಭಿವೃದ್ಧಿ ನೌಕರರು 12 ಸೇರಿ 446 ಪೌರ ಕಾರ್ಮಿಕರಿದ್ದಾರೆ. ನಿಯಮಾನುಸಾರ ವೇತನ, ಇಎಸ್‌ಐ, ಪಿಎ್ ಪಾವತಿಯಾಗುತ್ತಿದೆ. ಸ್ವಚ್ಛತೆಗಾಗಿ ಸುರಕ್ಷತಾ ಗಮ್ ಬೂಟ್ಸ್, ಗ್ಲೌಸ್, ಮಾಸ್ಕ್, ಎ್ರಾನ್ ನೀಡಲಾಗಿದೆ. ಪ್ರತಿಯೊಬ್ಬರಿಗೂ 1 ಸಾವಿರ ರೂ.ಗಳ ಅಪಘಾತ ವಿಮೆ ಮತ್ತು 330 ರೂ.ಗಳ ಪಿಎಂಜೆಜೆಬಿವೈ, 12 ರೂ.ಗಳ ಪಿಎಂಎಸ್‌ಬಿವೈ ವಿಮೆ ಪಾಲಿಸಿಗಳನ್ನು ಮಾಡಿಸಿದ್ದು 3 ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಕೈಗೊಳ್ಳಲಾಗುತ್ತಿದೆ ಎಂದರು.

    ಗೃಹಭಾಗ್ಯ ಯೋಜನೆಯಡಿ ಅನುಮೋದಿತ 144 ಪೌರ ಕಾರ್ಮಿಕರ ಪೈಕಿ 54 ಮಂದಿಗೆ ಸ್ವಂತ ನಿವೇಶನದಲ್ಲಿ ಮತ್ತು ಸ್ವಂತ ನಿವೇಶನ ಹೊಂದಿಲ್ಲದ 90 ಕಾರ್ಮಿಕರಿಗೆ ನಗರಸಭೆಯ ಆಶ್ರಯ ಜಾಗದಲ್ಲಿ ಮನೆ ನಿರ್ಮಿಸಿಕೊಡಲಾಗುತ್ತಿದೆ. ಈಗಾಗಲೇ 65 ಮನೆಗಳ ಕಾಮಗಾರಿ ಮುಗಿದಿದೆ ಎಂದರು.

    ಜಿಲ್ಲಾಧಿಕಾರಿ ಆರ್.ಲತಾ, ಜಿಪಂ ಉಪ ಕಾರ್ಯದರ್ಶಿ ಕೆ.ಗಿರಿಜಾ ಶಂಕರ್ ಮತ್ತಿತರರು ಇದ್ದರು.

    ಮತ್ತೊಮ್ಮೆ ಅರ್ಜಿ ಸ್ವೀಕರಿಸಿ: ಜಿಲ್ಲೆಯಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮ ಸಮೀಕ್ಷೆಯಂತೆ 14 ಸಾಯಿ ಕರ್ಮಚಾರಿಗಳನ್ನು ಗುರುತಿಸಿದ್ದು ಇವರಿಗೆ ಸವಲತ್ತು ಒದಗಿಸಲು ಜಿಲ್ಲಾಧಿಕಾರಿಗಳ ಮೂಲಕ ಆಯೋಗಕ್ಕೆ ಪಟ್ಟಿ ಸಲ್ಲಿಸಬೇಕು. ಸಾಯಿ ಕರ್ಮಚಾರಿ ಪುನರ್ವಸತಿ ಯೋಜನೆಯಡಿ ಇಲ್ಲಿನ 3 ಸಾವಿರ ಲಾನುಭವಿಗಳ ಪೈಕಿ ಸಾವಿರ ಮಂದಿಗೆ ಸ್ವಯಂ ಉದ್ಯೋಗಕ್ಕಾಗಿ ಸಾಲ ಸೌಲಭ್ಯ ಕಲ್ಪಿಸಲಾಗಿದೆ. ಉಳಿದವರ ಗತಿ ಏನು? ಎರಡು ವಾರದೊಳಗೆ ಹಳಬರಿಂದ ವಿವಿಧ ಇಲಾಖೆಗಳ ಮೂಲಕ ಮತ್ತೊಮ್ಮೆ ಅರ್ಜಿ ಸ್ವೀಕರಿಸಿ, ನೆರವು ಒದಗಿಸಬೇಕು ಎಂದು ಜಗದೀಶ್ ಹಿರೇಮಣಿ ತಿಳಿಸಿದರು.

    ಸಿಂಗಾಪುರ ತಂದ ಬದಲಾವಣೆ : ಸಿಂಗಾಪುರ ಅಧ್ಯಯನ ಪ್ರವಾಸ ಕೈಗೊಂಡ ಇಲ್ಲಿನ 18 ಪೌರ ಕಾರ್ಮಿಕರಲ್ಲಿನ ಸಕಾರಾತ್ಮಕ ಬದಲಾವಣೆ ಬಗ್ಗೆ ಮೆಚ್ಚುಗೆ ವ್ಯಕ್ತವಾಯಿತು. ಅಲ್ಲಿನ ಸ್ವಚ್ಛತೆ ನಿರ್ವಹಣೆ, ಆರೋಗ್ಯ ವೈಖರಿ ವೀಕ್ಷಿಸಿದ ಪೌರ ಕಾರ್ಮಿಕರಲ್ಲಿ ಕೆಲವರು ಕುಡಿತದ ಚಟ ಬಿಟ್ಟಿದ್ದಾರೆ. ಸುರಕ್ಷತೆಗಾಗಿ ಗಮನಕೊಡುತ್ತಿದ್ದಾರೆ ಎಂದು ಪೌರಾಯುಕ್ತ ಚಲಪತಿ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಯೋಗದ ಸದಸ್ಯರು, ಪ್ರವಾಸಕ್ಕೆ ಹೋಗಿ ಬಂದ ಕಾರ್ಮಿಕರ ಅಭಿಪ್ರಾಯಗಳನ್ನೊಳಗೊಂಡ ಕಿರುಚಿತ್ರ ವಿಡಿಯೋ ತಯಾರಿಸಿ ಕಳುಹಿಸಬೇಕು. ಇದನ್ನು ರಾಜ್ಯಾದ್ಯಂತ ಪ್ರಚಾರಕ್ಕೆ ಬಳಸಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts