More

    ಪ್ರತಿ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಸೊಳ್ಳೆ ನಿಯಂತ್ರಣ ಅರಿವು

    ಮೈಸೂರು : ರೋಗವಾಹಕ ಆಶ್ರಿತ ರೋಗಗಳನ್ನು ರೋಗ, ವಾಹಕಗಳು ಮತ್ತು ಪರಿಸರಗಳ ತ್ರಿಕೋನೀಯ ಅಂತರ ಸಂಬಂಧವನ್ನು ಆಳವಾಗಿ ಅರಿತುಕೊಳ್ಳುವುದರಿಂದ ಸೋಂಕನ್ನು ನಿಯಂತ್ರಿಸಬಹುದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್ ತಿಳಿಸಿದರು.


    ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ಸರಗೂರು ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ ಸೊಳ್ಳೆ ಪರದೆಗಳಿಗೆ ಔಷ ಲೇಪನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


    ಡೆಂೆ, ಚಿಕೂನ್‌ಗುನ್ಯ, ಮಲೇರಿಯಾ ರೋಗಗಳನ್ನು ಹರಡುವ ಸೊಳ್ಳೆಗಳನ್ನು ನಿಯಂತ್ರಿಸಲು ಸೊಳ್ಳೆ ನಿರೋಧಕ ಔಷಧವನ್ನು ಸೊಳ್ಳೆ ಪರದೆಗೆ ಹಾಕುವ ಪ್ರಾತ್ಯಕ್ಷಿತೆಯನ್ನು ಮಾಡಿ ತೋರಿಸಲಾಗುತ್ತಿದೆ. ಇನ್ನು ಮುಂದೆ ಪ್ರತಿಯೊಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಈ ಬಗ್ಗೆ ಅರಿವು ಮೂಡಿಸಲಾಗುತ್ತದೆ ಎಂದರು.


    ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಪಾರ್ಥಸಾರಥಿ, ತಾಲೂಕು ಆರೋಗ್ಯಾಧಿಕಾರಿ ಮೇಲ್ವಿಚಾರಕರಾದ ನಾಗೇಂದ್ರ, ಸರಳ, ರವಿರಾಜ್, ಸಿಬ್ಬಂದಿ ಜಗದೀಶ್, ಪುಷ್ಪಾ, ಶಾಂತಿ, ಪುಟ್ಟರಾಜು, ಮಹದೇವಸ್ವಾಮಿ ಇತರರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts