More

    ಪ್ರತಿಭೆ ಗುರುತಿಸುವಲ್ಲಿ ಇರಲಿ ನ್ಯಾಯ

    ಚಿತ್ರದುರ್ಗ: ಶಿಕ್ಷಕರು, ಪಾಲಕರು ಪ್ರತಿಭಾವಂಥ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸ ಬೇಕೆಂದು ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಕೆ.ಅನ್ವರ್ ಬಾಷಾ ಹೇಳಿದರು.
    ಜಿಲ್ಲಾಡಳಿತ, ಜಿಪಂ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಗರದ ಮಹಾರಾಣಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಉದ್ಘಾಟಿಸಿ ಮಾತನಾಡಿದರು.
    ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಯಾವುದೇ ತಾರತಮ್ಯ ಆಗಬಾರದು. ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿರುವ ವಿದ್ಯಾರ್ಥಿಗಳಿಗೆ ತೀರ್ಪುಗಾರರು, ನ್ಯಾಯಬದ್ಧ ತೀರ್ಪು ನೀಡಬೇಕು ಎಂದು ಸಲಹೆ ನೀಡಿದರು.
    ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಚಿತ್ರದುರ್ಗ ಜಿಲ್ಲೆ ಕಲೆ, ಸಾಹಿತ್ಯಕ್ಕೆ ಹೆಸರಾಗಿದೆ ಎಂದು ತಿಳಿಸಿದ ಅವರು, ಮಕ್ಕಳ ಸಾಮರ್ಥ್ಯವನ್ನು ಅಂಕಪಟ್ಟಿಯಿಂದ ಅಳೆಯುವಂತಾಗಬಾರದು ಎಂದರು.
    ಎಎಸ್‌ಪಿ ಎಸ್.ಜೆ.ಕುಮಾರಸ್ವಾಮಿ, ಡಿಡಿಪಿಐ ಕೆ.ರವಿಶಂಕರ್ ರೆಡ್ಡಿ ಮಾತನಾಡಿದರು.
    ಕಂಠಪಾಠ, ಕವನ, ಪದ್ಯ, ವಾಚನ, ಕಥೆ ಹೇಳುವುದು, ಆಶು ಭಾಷಣ, ಧಾರ್ಮಿಕ ಪಠಣ, ಅಭಿನಯ ಗೀತೆ, ಲಘು ಸಂಗೀತ, ಭಕ್ತಿಗೀತೆ, ಛದ್ಮವೇಷ, ಮಿಮಿಕ್ರಿ ಸ್ಪರ್ಧೆಗಳಲ್ಲಿ 5ರಿಂದ 7 ತರಗತಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.
    ಭಾಷಣ, ಕವನ, ಪದ್ಯ, ವಾಚನ, ಚರ್ಚಾಸ್ಪರ್ಧೆ, ಆಶುಭಾಷಣ, ಧಾರ್ಮಿಕ ಪಠಣ, ಭರತನಾಟ್ಯ, ಗಝಲ್, ಭಾವಗೀತೆ, ಜಾನಪದ ಗೀತೆ, ಜಾನಪದ ನೃತ್ಯ, ಛದ್ಮವೇಷ, ಮಿಮಿಕ್ರಿ ಹಾಗೂ ಕ್ಷಿಜ್ ಸ್ಪರ್ಧೆಗಳಲ್ಲಿ 8, 9, 10ನೇ ತರಗತಿ ಹಾಗೂ ಪಪೂ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
    ಮದಕರಿ ವಿದ್ಯಾಸಂಸ್ಥೆ ಅಧ್ಯಕ್ಷ ಸಂದೀಪ್, ಬಿಇಒ ಎಸ್.ನಾಗಭೂಷಣ್, ಸಮಗ್ರ ಶಿಕ್ಷಣ ಅಭಿಯಾನದ ಸಮನ್ವಯಾಧಿಕಾರಿ ವೆಂಕಟೇಶ್, ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಎನ್.ಆರ್.ತಿಪ್ಪೇಸ್ವಾಮಿ, ಶಾಲಾ ಶಿಕ್ಷಣ ಇಲಾಖೆ ವಿದ್ಯಾಧಿಕಾರಿ ಸಿದ್ದಪ್ಪ, ಜಿಲ್ಲಾ ಸಹ ಶಿಕ್ಷಕ ಸಂಘದ ಅಧ್ಯಕ್ಷ ಶಿವಣ್ಣ, ಸಹ ಶಿಕ್ಷಕ ಸಂಘದ ತಾಲೂಕಾಧ್ಯಕ್ಷ ಬಸವರಾಜಪ್ಪ, ವಿಷಯ ಪರಿವೀಕ್ಷಕರಾದ ಗೋವಿಂದಪ್ಪ, ಸವಿತಾ, ಶಿವಣ್ಣ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts