More

    ಪ್ರತಿಭೆ ಅನಾವರಣಕ್ಕೆ ಮಕ್ಕಳ ಹಬ್ಬ ಪೂರಕ

    ಚಿತ್ರದುರ್ಗ: ಮಕ್ಕಳಲ್ಲಿರುವ ಸುಪ್ತ ಅನಾವರಣಕ್ಕೆ ಮಕ್ಕಳ ಹಬ್ಬ ಉತ್ತಮ ವೇದಿಕೆಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಭಾರತಿ ಆರ್.ಬಣಕಾರ್ ಹೇಳಿದರು.
    ಕರ್ನಾಟಕ ಬಾಲ ವಿಕಾಸ ಅಕಾಡೆಮಿ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಬಾಲಭವನದಲ್ಲಿ ಆ ಯೋಜಿಸಿದ್ದ ಜಿಲ್ಲಾಮಟ್ಟದ‘ಮಕ್ಕಳಹಬ್ಬ’ಉದ್ಘಾಟಿಸಿ ಅವರು ಮಾತನಾಡಿದರು.
    ಚಿತ್ರಕಲೆ,ಕ್ಲೇಮಾಡ್ಲಿಂಗ್,ಕಥೆ,ಕವನ,ಮಕ್ಕಳ ಸಾಹಿತ್ಯ ಚಟುವಟಿಕೆಗಳು ಮತ್ತು ಪಾರಂಪರಿಕ ಕಲೆಗಳಾದ ಭರತನಾಟ್ಯ,ಛದ್ಮವೇಷ ಮುಂತಾದ ಕ ಲಾ ಪ್ರಕಾರಗಳನ್ನು ಉಳಿಸುವ ನಿಟ್ಟಿನಲ್ಲಿ ಮಕ್ಕಳಿಗೆ ಪ್ರೋತ್ಸಾಹ ನೀಡುವುದು ಕಾರ್ಯಕ್ರಮದ ಮುಖ್ಯಉದ್ದೇಶವಾಗಿದೆ. ಅವರಲ್ಲಿರುವ ಪ್ರತಿಭೆ ಗುರುತಿಸಿ ಅನಾವರಣಗೊಳಿಸಲು ಈ ಹಬ್ಬ ಪೂರಕವಾಗಿದೆ ಎಂದ ಅವರು,ಫೆ.28ರಂದು ನಗರದ ತ.ರಾ.ಸು ರಂಗಮಂದಿರದಲ್ಲಿ ಕಲಾ ತಂಡಗಳ ಪ್ರದರ್ಶನ ಏರ್ಪಡಿಸಲಾಗಿದೆ ಎಂದರು.
    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಪವಿತ್ರಾ ಮಾತನಾಡಿ, ಇಲಾಖೆಯಿಂದ ಬೇಸಿಗೆ ರಜೆಯಲ್ಲಿ ಮಕ್ಕಳಿಗಾಗಿ ವಿವಿಧ ಸೃಜನಾತ್ಮಕ ಚಟು ವಟಿಕೆಗಳನ್ನು ಏರ್ಪಡಿಸಲಾಗುವುದು ಎಂದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸವಿತಾ, ಶಿಕ್ಷಕ್ಷಿಯರಾದ ಸುನಂದಮ್ಮ,ವಸಂತಕುಮಾರಿ ಮಾತನಾಡಿದರು.ಕಾರ್ಯಕ್ರಮ ಸಂಯೋಜಕ ಡಿ.ಶ್ರೀಕುಮಾರ್ ಇದ್ದರು.
    (ಸಿಟಿಡಿ 17 ಮಕ್ಕಳ ಹಬ್ಬ)
    ಚಿತ್ರದುರ್ಗದಲ್ಲಿ ಶನಿವಾರ ಏರ್ಪಡಿಸಿದ್ದ ಮಕ್ಕಳ ಹಬ್ಬವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಡಿಡಿ ಭಾರತಿ ಆರ್.ಬಣಕಾರ್ ಉದ್ಘಾಟಿಸಿದರು. ಪವಿತ್ರಾ,ಸವಿತಾ,ಸುನಂದಮ್ಮ,ವಸಂತಕುಮಾರ್,ಡಿ.ಶ್ರೀಕುಮಾರ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts