More

    ಪ್ರತಿಭೆಗಳಿಗೆ ಜನಪರ ಉತ್ಸವ ವೇದಿಕೆ

    ಚನ್ನಪಟ್ಟಣ: ಜನಪದ ಕಲಾವಿದರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸರ್ಕಾರ ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದು, ಜತೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ ಎಂದು ಇಲಾಖೆ ಸಹಾಯಕ ನಿರ್ದೇಶಕ ಎಂ.ಎನ್. ಹರೀಶ್ ತಿಳಿಸಿದರು.
    ನಗರದ ಶತವಾನೋತ್ಸವ ಭವನದಲ್ಲಿ ಇಲಾಖೆ ವತಿಯಿಂದ ವಿಶೇಷ ಟಕ ಯೋಜನೆಯಡಿ ಪರಿಶಿಷ್ಟ ಜಾತಿ ಕಲಾವಿದರ ಕಲೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಆಯೋಜಿಸಿದ್ದ ಜನಪರ ಉತ್ಸವವನ್ನು ನಗಾರಿ ಬಾರಿಸುವ ಮೂಲಕ ಕಲಾತಂಡಗಳ ಪ್ರದರ್ಶನಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.
    ಗಿರಿಜನ ಉತ್ಸವ ಸೇರಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತ, ಎಲ್ಲ ವರ್ಗದ ಕಲಾವಿದರನ್ನು ಪ್ರೋತ್ಸಾಹಿಸಿ, ಪ್ರತಿಭೆಯನ್ನು ಬೆಳಕಿಗೆ ತರಲು ವೇದಿಕೆ ರೂಪಿಸಲಾಗುತ್ತಿದೆ. ಅದರಂತೆ ಇಲಾಖೆ ವಿಶೇಷ ಟಕ ಯೋಜನೆಯಡಿ ಪರಿಶಿಷ್ಟ ಜಾತಿ ಕಲಾವಿದರ ಕಲೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಈ ಜನಪರ ಉತ್ಸವ ಆಯೋಜಿಸಲಾಗಿದೆ ಎಂದರು.
    ವೇದಿಕೆ ಕಾರ್ಯಕ್ರಮದಲ್ಲಿ ಜಿಲ್ಲೆಯ ಹಲವು ಭಾಗಗಳಿಂದ ಆಗಮಿಸಿದ ಕಲಾವಿದರು ವಿಭಿನ್ನ ಕಲೆಗಳನ್ನು ಪ್ರದರ್ಶಿಸಿದರು. ಪೂಜಾ ಕುಣಿತ, ಡೊಳ್ಳು ಕುಣಿತ, ಪಟದ ಕುಣಿತ, ತಮಟೆ ವಾದನ, ಹುಲಿವೇಷ, ಸೋಮನ ಕುಣಿತ, ಹಾಲಕ್ಕಿ ಕುಣಿತ, ರಂಗಕಲೆಗಳ ಪ್ರದರ್ಶನ ಸೇರಿ ಹಲವು ಕಾರ್ಯಕ್ರಮಗಳು ನಡೆದವು.
    ಜಾನಪದ ಲೋಕದ ಕ್ಯುರೇಟರ್ ಡಾ. ಯು.ಎಂ. ರವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಕೆ.ಕಾಳಯ್ಯ, ಪ್ರಜಾಪರಿವರ್ತನಾ ವೇದಿಕೆ ಜಿಲ್ಲಾಧ್ಯಕ್ಷ ನೀಲಸಂದ್ರ ಸಿದ್ದರಾಮು, ಕಲಾವಿದರ ಒಕ್ಕೂಟದ ಜಿಲ್ಲಾಧ್ಯಕ್ಷ ಡಾ. ಜಯಸಿಂಹ, ಕಲಾಸಂಟಕರಾದ ಗೋವಿಂದಯ್ಯ, ಲೋಕೇಶ್, ಅಪ್ಪಗೆರೆ ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.

    ಕಾಟಾಚಾರದ ಕಾರ್ಯಕ್ರಮವೇ?
    ಕನ್ನಡ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಶೇಷ ಟಕ ಯೋಜನೆಯಡಿ ಆಯೋಜಿಸಿದ್ದ ಜನಪರ ಉತ್ಸವ, ಇಲಾಖೆಯ ದಾಖಲೆಗಾಗಿ ಆಯೋಜನೆಗೊಂಡ ಕಾಟಾಚಾರದ ಕಾರ್ಯಕ್ರಮವೇ ಎಂಬ ಪ್ರಶ್ನೆ ಹುಟ್ಟುಹಾಕಿತು. ಬೆಳಗ್ಗೆ 10 ಗಂಟೆಗೆ ಆರಂಭವಾಗಬೇಕಾದ ಕಾರ್ಯಕ್ರಮ ಅಧಿಕಾರಿಗಳಿಗಾಗಿ ಕಾದು 12 ಗಂಟೆಯಾದರೂ ಉದ್ಘಾಟನೆಯಾಗದಿದ್ದು ಇದಕ್ಕೆ ಸಾಕ್ಷಿ. ಎರಡು ತಾಸಿನ ನಂತರ ಶತವಾನೋತ್ಸವ ಭವನದ ಬಳಿ ಸಂಬಂಧಪಟ್ಟ ಕನ್ನಡ ಸಂಸ್ಕೃತಿ ಇಲಾಖೆ ಅಧಿಕಾರಿಗಳು ಆಗಮಿಸಿದ ನಂತರ ಕಾರ್ಯಕ್ರಮ ಆರಂಭಗೊಂಡಿತು. ಇದರೊಂದಿಗೆ ಕಾರ್ಯಕ್ರಮದ ವಾಹಿತಿ ಕೊರತೆಯಿಂದಾಗಿ ಆಯ್ದ ಕಲಾವಿದರನ್ನು ಹೊರತುಪಡಿಸಿ, ಬೆರಳೆಣಿಕೆಯ ವಿವಿಧ ಟ್ರಸ್ಟ್‌ಗಳ ಪದಾಧಿಕಾರಿಗಳು ವಾತ್ರ ಉಪಸ್ಥಿತರಿದ್ದರು. ಭವನದ ಸಭಾಂಗಣ ಖಾಲಿ ಹೊಡೆಯುವ ಮೂಲಕ ಇಂದೊಂದು ಕಾಟಾಚಾರದ ಕಾರ್ಯಕ್ರಮ ಎಂಬುದಕ್ಕೆ ನಿದರ್ಶನವಾಗಿತ್ತು.

    ನಿದ್ರೆಗೆ ಜಾರಿದ ಕಲಾವಿದರು: ನಿರ್ಲಕ್ಷ್ಯ ಹಾಗೂ ಕಾರ್ಯಕ್ರಮದ ವಿಳಂಬದಿಂದಾಗಿ ವಿವಿಧ ಭಾಗಗಳಿಂದ ಕಲೆಯನ್ನು ಪ್ರದರ್ಶಿಸಲು ಆಗಮಿಸಿದ್ದ ಕಲಾವಿದರು ಕುಳಿತಲ್ಲಿಯೇ ನಿದ್ರೆಗೆ ಜಾರಿದ್ದು ಕಂಡು ಬಂತು. ಈ ವೇಳೆ ವಾತನಾಡಿದ ಕಲಾವಿದರೊಬ್ಬರು, ಸರ್.., 10 ಗಂಟೆಗೆ ಕಾರ್ಯಕ್ರಮವೆಂದು ಸಿದ್ಧರಾಗಿ ಕುಳಿತಿದ್ದೇವೆ. 12 ಗಂಟೆಯಾದರೂ ಯಾರೊಬ್ಬರೂ ಇತ್ತ ಸುಳಿದಿಲ್ಲ. ಈ ಬಗ್ಗೆ ಪ್ರಶ್ನೆ ವಾಡಿದರೆ, ಮುಂದೆ ಕಾರ್ಯಕ್ರಮ ಕೊಡುವುದಿಲ್ಲ. ಹಾಗಾಗಿ, ಬಾಯಿ ಮುಚ್ಚಿಕೊಂಡು ಇದ್ದೇವೆ ಎಂದು ಬೇಸರ ತೋಡಿಕೊಂಡರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts