More

    ಪ್ರತಿಭಾ ಪ್ರೋತ್ಸಾಹದಿಂದ ಮಕ್ಕಳ ಪ್ರಗತಿ

    ಮೂಡಲಗಿ: ಪಟ್ಟಣದ ಬಸವ ಮಂಟಪದಲ್ಲಿ ಮಂಗಳವಾರ ಜರುಗಿದ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ತಾಲೂಕು ಮಟ್ಟದ ಕಾರ್ಯಕ್ರಮದಲ್ಲಿ ಎಸ್​.ಎಸ್​.ಎಲ್​.ಸಿ ಪರೀೆಯಲ್ಲಿ 625 ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕೌಜಲಗಿಯ ಕರ್ನಾಟಕ ಪಬ್ಲಿಕ್​ ಶಾಲೆಯ ವಿದ್ಯಾರ್ಥಿನಿ ಮಹಾಲಕ್ಷಿ$್ಮ ಪ್ರದಿಪಕುಮಾರ ತಳವಾರ ಅವರಿಗೆ ಸ್ವಾತಂತ್ರ್ಯ ಹೋರಾಟಗಾರ ದಿ. ರಾವಜೇಪ್ಪ ಬಾಲಪ್ಪ ಸೋನವಾಲಕರ ಸ್ಮರಣಾರ್ಥ ಅವರ ಮೊಮ್ಮಗ ಡಾ.ಪ್ರದಿಪ ಸುಭಾಸ ಸೋನವಾಲಕರ ನೀಡುವ 1 ಲಕ್ಷ ರೂ.ಬಹುಮಾನ ವಿತರಿಸಿ ಸನ್ಮಾನಿಸಲಾಯಿತು.

    ವಿದ್ಯಾರ್ಥಿನಿಯ ಸಾಧನೆಯು ಮೂಡಲಗಿ ಶೈಕ್ಷಣಿಕ ವಲಯದಲ್ಲಿಯೇ ದಾಖಲೆಯಾಗಿದೆ. ಇಂತಹ ಪ್ರತಿಭೆಗಳು ನಮ್ಮಲ್ಲಿ ಇನ್ನೂ ಹೆಚ್ಚಾಗಲಿ ಎಂಬ ಉದ್ದೇಶದಿಂದ 1 ಲಕ್ಷ ರೂ. ಬಹುಮಾನ, ಸ್ಮರಣಿಕೆ ನೀಡಿ ಸನ್ಮಾನಿಸಲಾಗಿದೆ ಎಂದು ಪ್ರತಿಷ್ಠಾನದ ಸುಭಾಸ ಸೋನವಾಲಕರ ಅಭಿಪ್ರಾಯ ವ್ಯಕ್ತಪಡಿಸಿದರು.

    ಯುವ ಧುರಿಣ ಸವೋರ್ತ್ತಮ ಜಾರಕಿಹೊಳಿ, ಶಾಸಕರ ಆಪ್ತ ಕಾರ್ಯದರ್ಶಿ ನಾಗಪ್ಪ ಶೇಖರಗೋಳ, ಪುರಸಭೆ ಅಧ್ಯಕ್ಷ ಹನುಮಂತ ಗುಡ್ಲಮನಿ, ಉಪಾಧ್ಯೆ ರೇಣುಕಾ ಹಾದಿಮನಿ, ತಹಸೀಲ್ದಾರ್​ ಡಿ.ಜಿ.ಮಹಾಂತ, ತಾಪಂ ಇಒ ಎಫ್​.ಜಿ.ಚಿನ್ನನ್ನವರ, ಬಿಇಒ ಅಜಿತ ಮನ್ನಿಕೇರಿ, ಸಿಡಿಪಿಒ ಯಲ್ಲಪ್ಪ ಗದಾಡಿ, ಪಿ.ಎಸ್​.ಐ ಹಾಲಪ್ಪ ಬಾಲದಂಡಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts