More

    ಪ್ರತಿಪಕ್ಷ ನಾಯಕರಾಗಿರಲು ಸಿದ್ದುಗೆ ಯೋಗ್ಯತೆ ಇಲ್ಲ

    ವಿಜಯವಾಣಿ ಸುದ್ದಿಜಾಲ ಚಿತ್ರದುರ್ಗ
    ಕೊಲೆ ಮಾಡಿದರೆ,ಹವಾಲ,ಇಡಿ ಕೇಸಿನಲ್ಲಿ ಸಿಕ್ಕಿಕೊಂಡರೂ ಅವರನ್ನೂ ಮುಟ್ಟ ಬಾರದೆಂದು ಸುಪ್ರೀಂ ಕೋರ್ಟ್‌ನಿಂದ ತೀರ್ಪು ತ ರೋಣ ಅಥವಾ ಸಂವಿಧಾನಕ್ಕೆ ತಿದ್ದುಪಡಿಯನ್ನು ತಂದು ಬಿಡೋಣವೇ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಆಕ್ರೋಶದಿಂದ ಕಾಂಗ್ರೆಸ್ಸಿಗರ ನ್ನು ಪ್ರಶ್ನಿಸಿದರು.
    ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ,ಮಾಜಿ ಸಚಿವ ವಿನಯ್ ಕುಲಕರ್ಣಿ ಬಂಧನ ಕುರಿತಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಹಿತ ಕಾಂಗ್ರೆಸ್ ನಾಯಕರ‘ರಾಜಕೀಯ ಪ್ರೇರಿತ’ಹೇಳಿಕೆಗಳನ್ನು ಖಂಡಿಸಿ,ಹೀಗೆ ಇವರು ಆರೋಪಿಸುತ್ತಾ ಹೋದರೆ ಇಡಿ,ಐಟಿ,ಸಿಬಿಐ ಸಂಸ್ಥೆಗಳನ್ನು ಮುಚ್ಚ ಬೇಕಾಗುತ್ತದೆ.
    ಕಾಂಗ್ರೆಸ್ಸಿನವರು ಏನು ಆಕಾಶದಿಂದ ಉದುರಿಲ್ಲ. ಅವರ ಅಧಿಕಾರದಲ್ಲಿದ್ದ ಅವಧಿಯಲ್ಲೂ ಅನೇಕರ ಮೇಲೂ ದಾಳಿ,ವಿಚಾರಣೆ ಗಳಾಗಿವೆ. ವಿನಯ್‌ಆರೋಪ ಮುಕ್ತರಾಗಿ ಪ್ರಕರಣದಿಂದ ಹೊರ ಬರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದರು.
    ಸಿದ್ದುಗೆ ಯೋಗ್ಯತೆ ಇಲ್ಲ
    ಸಿದ್ದರಾಮಯ್ಯ ಪ್ರತಿಪಕ್ಷ ನಾಯಕರಾಗಿರಲು ಯೋಗ್ಯತೆ ಇಲ್ಲದ ಮನುಷ್ಯ. ಯಡಿಯೂರಪ್ಪ,ನರೇಂದ್ರ ಮೋದಿ ಅವರಂಥ ದೊ ಡ್ಡವರ ಬಗ್ಗೆ ಮಾತನಾಡಿದರೆ ತಾನೂ ದೊಡ್ಡವನಾಗುತ್ತೇನೆ ಎಂಬ ಭ್ರಮೆಯಲ್ಲಿ ದ್ದಾರೆ. ಒಮ್ಮೆ ಸಿಎಂ ಆಗಿದ್ದರೂ ಬುದ್ದಿಬಂದಿಲ್ಲ. ಆದ್ದರಿಂ ದಲೇ ಜನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅವರನ್ನು ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ಸನ್ನು ಸೋಲಿಸಿದ್ದು. ಪ್ರಧಾನಿಯೇ ನೇರ ಮಾತನಾಡಿ ಸಿಎಂ ಬದಲಾವಣೆ ಕುರಿತು ಅವರಿಗೆ ಹೇಳಿರಬೇಕೆಂದು ಸಿದ್ದರಾಮಯ್ಯರ ಹೇಳಿಕೆಗೆ ವ್ಯಂಗವಾಡಿದರು.

    ಖಾಲಿ ಇಲ್ಲದ ಸಿಎಂ ಖುರ್ಚಿಗೆ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವೆ ಪೈಪೋಟಿ ಶುರುವಾಗಿದೆ. ಸಿಎಂ ಆಗುತ್ತೇವೆ ಎಂದು ಅವರಿಬ್ಬರು ತಿರುಕನ ಕನಸನ್ನು ಕಾಣುತ್ತಿದ್ದಾರೆ. ಸ್ವರ್ಗಸ್ಥ ಸ್ವಾತಂತ್ರೃಯೋಧರ ಆತ್ಮಕ್ಕೆ ಶಾಂತಿ ಸಿಗುವಂತಾಗಲು ಹಾಗೂ ಭಾರತೀಯ ಸಂಸ್ಕೃತಿಯನ್ನು ಕಾಪಾಡಲು ಲವ್ ಜಿಹಾದ್ ವಿರುದ್ಧದ ಕಾನೂನು ಹಾಗೂ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಲಾ ಗುವುದೆಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts