More

    ಪ್ರಚೋದಿಸುವ ಕೆಲಸ ಬೇಡ : ಎ. ಮಂಜುನಾಥ್‌ಗೆ ಮಾಜಿ ಶಾಸಕ ಬಾಲಕೃಷ್ಣ ಸಲಹೆ

    ಮಾಗಡಿ : ಶಾಸಕ ಎ.ಮಂಜುನಾಥ್ ಅವರು ರಾವಣನ ಹಾಗೆ 10 ಮುಖ ಹೊಂದಿದ್ದಾರೆಯೇ ಎಂದು ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ವ್ಯಂಗ್ಯವಾಡಿದರು.
    ಪಟ್ಟಣದ ಹೊಸಹಳ್ಳಿಯಲ್ಲಿ ಕಾಂಗ್ರೆಸ್ ಬೆಂಬಲಿತ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರಿಗೆ ಗುರುವಾರ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
    ದೊಡ್ಡಸೋಮನಹಳ್ಳಿ ಗ್ರಾಮದ ಕೊಳವೆಬಾವಿ ಘಟನೆಗೆ ಸಂಬಂಧಿಸಿದಂತೆ ಶಾಸಕ ಎ.ಮಂಜುನಾಥ್ ಅವರು, ಮಾಜಿ ಶಾಸಕರು ಮನೆಯನ್ನು ಒಡೆದು ಮೂರು ಭಾಗ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಯಾವ ಮನೆಯನ್ನು ಇಬ್ಭಾಗ ಮಾಡಿದ್ದೇನೆ ಶಾಸಕರು ತೋರಿಸಬೇಕು ಎಂದರು.
    ಮಾಗಡಿ ವಿಧಾನಸಭಾ ಕ್ಷೇತ್ರದ 35 ಗ್ರಾಪಂಗಳ 495 ಸದಸ್ಯರಲ್ಲಿ ಕಾಂಗ್ರೆಸ್ ಬೆಂಬಲಿತರು 304, ಜೆಡಿಎಸ್ ಬೆಂಬಲಿತರು 175, ಪಕ್ಷೇತರ ಹಾಗೂ ಬಿಜೆಪಿ ಬೆಂಬಲಿತರು 4 ಸ್ಥಾನಗಳಲ್ಲಿ ಗೆದ್ದಿದ್ದಾರೆ.

    23 ಪಂಚಾಯಿತಿಗಳಲ್ಲಿ ಕಾಂಗ್ರೆಸ್, 10ರಲ್ಲಿ ಜೆಡಿಎಸ್, ಬಿಜೆಪಿ ಹಾಗೂ ಪಕ್ಷೇತರರು ತಲಾ ಒಂದು ತಲಾ 1 ಪಂಚಾಯಿತಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರಾಗಿದ್ದಾರೆ. ಗ್ರಾಪಂ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಹಿನ್ನೆಡೆಯಾಗಿದ್ದು, ಹತಾಶರಾಗಿರುವ ಶಾಸಕರು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ದರ್ಪ, ದೌರ್ಜನ್ಯದಿಂದ ಯಾರನ್ನೂ ಊರು ಬಿಡಿಸಲು ಸಾಧ್ಯವಿಲ್ಲ ಎಂಬುದನ್ನು ಶಾಸಕರು ಮೊದಲು ತಿಳಿಯಲಿ ಎಂದರು.

    ಕಾಂಗ್ರೆಸ್ ಮುಖಂಡ ಗಾಣಕಲ್ ನಟರಾಜ್ ಮಾತನಾಡಿದರು. ಜಿಪಂ ಮಾಜಿ ಪ್ರಭಾರ ಅಧ್ಯಕ್ಷ ಎಂ.ಕೆ.ಧನಂಜಯ್ಯ, ದಿಶಾ ಸಮಿತಿ ಸದಸ್ಯ ಜೆ.ಪಿ.ಚಂದ್ರೇಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಧನಂಜಯ್ಯನಾಯಕ್, ತಾಪಂ ಮಾಜಿ ಅಧ್ಯಕ್ಷರಾದ ನಾರಾಯಣಪ್ಪ, ಶಿವರಾಜ್, ಜಿಪಂ ಮಾಜಿ ಸದಸ್ಯ ಬೆಳಗುಂಬ ವಿಜಯ್‌ಕುಮಾರ್, ಚಿಗಳೂರು ಗಂಗಾಧರ್, ಮಾರೇಗೌಡ, ಪುರಸಭಾ ಸದಸ್ಯ ಎಚ್.ಜೆ.ಪುರುಷೋತ್ತಮ್, ರಂಗಹನುಮಯ್ಯ, ತೋ.ವಿ.ಗಿರೀಶ್, ಟಿಎಪಿಸಿಎಂಎಸ್ ಪ್ರಭಾರಿ ಅಧ್ಯಕ್ಷ ಗೋವಿಂದರಾಜ್, ಕುಮಾರ್, ಮಹದೇವ್, ದೇವೇಂದ್ರ ಮತ್ತಿತರರು ಇದ್ದರು.

    ಕಾಂಗ್ರೆಸ್ ಸದೃಢವಾಗಿದೆ : ಕಾಂಗ್ರೆಸ್ ಪಕ್ಷ ಸದೃಢವಾಗಿದೆ. ಬೂತ್ ಮಟ್ಟದಿಂದ ಪಕ್ಷವನ್ನು ಸದೃಢಗೊಳಿಸಲು ಎಲ್ಲ ಮುಖಂಡರು, ಕಾರ್ಯಕರ್ತರು ಶ್ರಮಿಸಬೇಕು. ನಾಯಕರ ಮುಂದೆ ಫೋಸ್ ಕೊಡುವುದನ್ನು ಬಿಟ್ಟು ಪಕ್ಷ ಸಂಘಟನೆಯಲ್ಲಿ ತೊಡಗಬೇಕು. ಪ್ರಾಮಾಣಿಕವಾಗಿ ಪಕ್ಷಕ್ಕೆ ದುಡಿಯವವರಿಗೆ ಎಲ್ಲ ರೀತಿ ಸಹಾಯ ಮಾಡುತ್ತೇನೆ. ಮುಂದಿನ ತಿಂಗಳು ದೊಡ್ಡ ಸಮಾವೇಶ ಆಯೋಜಿಸಿ, ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಉಪಮುಖ್ಯಮಂತ್ರಿ ಪರಮೇಶ್ವರ್ ಮತ್ತಿತರ ನಾಯಕರ ಸಮ್ಮುಖದಲ್ಲಿ ಗ್ರಾಪಂಗಳಲ್ಲಿ ಗೆದದ್ ಹಾಗೂ ಸೋತವರನ್ನು ಸನ್ಮಾನಿಸಲಾಗುವುದು ಎಂದು ಬಾಲಕೃಷ್ಣ ತಿಳಿಸಿದರು.

    ಬೆಲೆ ಏರಿಕೆ ವಿರೋಧಿಸಿ 27ರಂದು ಪ್ರತಿಭಟನೆ : ರಾಜ್ಯ ಹಾಗೂ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಗಳು ಪೆಟ್ರೋಲ್, ಅಡುಗೆ ಅನಿಲ ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆ ಏರಿಸಿದ್ದು, ಜನಸಾಮಾನ್ಯರು ಜೀವನ ನಡೆಸುವುದು ಕಷ್ಟವಾಗಿದೆ. ಬೆಲೆ ಏರಿಕೆ ವಿರೋಧಿಸಿ ಫೆ. 27ರಂದು ಮಾಗಡಿಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಬಾಲಕೃಷ್ಣ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts