More

    ಪ್ರಗತಿಗೆ ಪ್ರಾಮಾಣಿಕತೆ ಅತಿ ಅವಶ್ಯ – ಶಿವಬಸವ ಸ್ವಾಮೀಜಿ

    ಅಥಣಿ: ಶ್ರಮ, ಪ್ರಾಮಾಣಿಕತೆ ಹಾಗೂ ತಾಳ್ಮೆಯನ್ನು ರೂಢಿಸಿಕೊಂಡ ವ್ಯಕ್ತಿ ಕಾಯಕದಲ್ಲಿ ಪ್ರಗತಿ ಸಾಧಿಸುತ್ತಾನೆ ಎಂದು ಗಚ್ಚಿನಮಠದ ಶಿವಬಸವ ಸ್ವಾಮೀಜಿ ಹೇಳಿದರು. ಪಟ್ಟಣದಲ್ಲಿ ನೂತನವಾಗಿ ಆರಂಭವಾದ ಆರ್.ಎಸ್.ಪಿ. ಟ್ರೆಂಡ್ಸ್ ಕಲೆಕ್ಷನ್‌ಗೆ ಚಾಲನೆ ನೀಡಿ ಶುಕ್ರವಾರ ಮಾತನಾಡಿದ ಅವರು, ಕಾಯಕ ಶುದ್ಧಿಯ ಮೂಲಕ ಜೀವನದಲ್ಲಿ ಏಳಿಗೆ ಸಾಧಿಸಿದ ರವಿ ಪೂಜಾರಿ ನವ ಪೀಳಿಗೆಗೆ ಮಾದರಿಯಾಗಿದ್ದಾರೆ ಎಂದರು.

    ಮೋಟಗಿಮಠದ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ ಮಾತನಾಡಿ, ನಾವು ಮಾಡುವ ಕಾಯಕ ಪ್ರಾಮಾಣಿಕ ಹಾದಿಯಲ್ಲಿದ್ದರೆ ಎಂತಹ ಕಷ್ಟ ಬಂದರೂ ಎದುರಿಸಬಹುದು ಎಂದು ಹೇಳಿದರು.ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣ ಶೆಟ್ಟಿ ಮಾತನಾಡಿ, ಕನ್ನಡಪರ ಹೋರಾಟಗಾರರು ಭಿಕ್ಷುಕರಲ್ಲ. ಸ್ವಂತ ದುಡಿಮೆ ಮೂಲಕ ಬದುಕು ಕಟ್ಟಿಕೊಂಡಿರುವುದರ ಜತೆಗೆ ಮಾತೃ ಭಾಷೆಯ ಸೇವೆ ಮಾಡುತ್ತೇವೆ. ನಾಡು-ನುಡಿ ವಿಚಾರದಲ್ಲಿ ಪ್ರಾಣದ ಹಂಗು ತೊರೆದು ಹೋರಾಟ ನಡೆಸುತ್ತೇವೆ.

    ಅಂತಹ ಕೆಲಸವನ್ನು ರವಿ ಪೂಜಾರಿ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಶೆಟ್ಟರಮಠದ ಮರುಳಸಿದ್ದ ಸ್ವಾಮೀಜಿ, ಶಾಸಕ ಮಹೇಶ ಕುಮಠಳ್ಳಿ, ಮುಖಂಡ ಗಜಾನನ ಮಂಗಸೂಳಿ, ಸಿಪಿಐ ಬಸವರಾಜ ಬೀಸನಕೊಪ್ಪ, ಸದಾಶಿವ ಬುಟಾಳಿ, ಬೆಳಗಾವಿಯ ಉದ್ಯಮಿ ಅವಿನಾಶ ಗುರುಸ್ವಾಮಿ, ಪುರಸಭೆ ಮಾಜಿ ಅಧ್ಯಕ್ಷ ರಾಬಸಾವ ಐಹೊಳೆ, ಚಿತ್ರನಟ ಆರ್. ಅಭಿಲಾಷ ಮಾತನಾಡಿದರು. ಮುಖಂಡರಾದ ಅಸ್ಲಂ ನಾಲಬಂದ, ದುಂಡಯ್ಯ ಹಿರೇಮಠ, ಮದಬಾವಿ ಶನಿ ದೇವರ ದೇವಸ್ಥಾನ ಅರ್ಚಕ ಪ್ರವೀಣಕುಮಾರ ಶಾಸ್ತ್ರಿ, ಅನಿಲ ಸುಣಧೋಳಿ, ಯುಸೂಫ್ ನಾಲಬಂದ, ವಿಜಯ ಹುದ್ದಾರ, ಮಲ್ಲಿಕಾರ್ಜುನ ಹಿಪ್ಪರಗಿ, ಸಿದ್ದು ಹಂಡಗಿ ಇತರರು ಇದ್ದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts