More

    ಪ್ಯಾಕೇಜ್​ಗೆ ಪತ್ರಿಕಾ ವಿತರಕರನ್ನೂ ಸೇರಿಸಿ

    ಚಿಕ್ಕಮಗಳೂರು: ಪತ್ರಿಕಾ ವಿತರಕರು ಹಾಗೂ ಏಜೆಂಟರನ್ನು ಅಸಂಘಟಿತ ಕಾರ್ವಿುಕರ ವಲಯಕ್ಕೆ ಸೇರಿಸಿ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ಪತ್ರಿಕಾ ವಿತರಕರು ಹಾಗೂ ಏಜೆಂಟರ ಸಂಘದ ಪದಾಧಿಕಾರಿಗಳು ಜಿಲ್ಲಾಡಳಿತಕ್ಕೆ ಶುಕ್ರವಾರ ಮನವಿ ಸಲ್ಲಿಸಿದರು.

    ಸಂಘದ ಅಧ್ಯಕ್ಷ ಶ್ರೀಧರ್ ಮೋಹನ್ ಮಾತನಾಡಿ, ಕರೊನಾಕ್ಕೆ ಹೆದರದೆ ನಿರಂತರವಾಗಿ ಕರ್ತವ್ಯ ಮಾಡುತ್ತ ಪತ್ರಿಕೆಗಳನ್ನು ಮನೆಮನೆಗೆ ತಲುಪಿಸುವಲ್ಲಿ ವಿತರಕರು ಹಾಗೂ ಏಜೆಂಟರು ಶ್ರಮ ವಹಿಸುತ್ತಿದ್ದಾರೆ. ಆದರೆ ಮೂರು ತಿಂಗಳಿನಿಂದ ನಮ್ಮ ಬದುಕು ಕೂಡ ಶೋಚನೀಯವಾಗಿದೆ ಎಂದು ಗಮನ ಸೆಳೆದರು.

    ನಗರದಲ್ಲಿ ನೂರಾರು ವಿತರಕರು ಈ ಸಂದರ್ಭದಲ್ಲೂ ತಮ್ಮ ಸೇವೆಗೆ ಚ್ಯುತಿ ಬಾರದಂತೆ ಕೆಲಸ ಮುಂದುವರಿಸಿದ್ದಾರೆ. ಇಂತಹ ಸಂದರ್ಭದಲ್ಲಿ ನಮ್ಮ ಜೀವನಕ್ಕೆ ಅನುಕೂಲ ಮಾಡಿಕೊಡಬೇಕು. ಇದನ್ನೇ ನಂಬಿ ಬದುಕುತ್ತಿರುವವರಿಗೆ ನ್ಯಾಯುತ ಸೌಲಭ್ಯ ಕಲ್ಪಿಸಬೇಕು. ಮುಖ್ಯಮಂತ್ರಿ ಘೊಷಿಸಿದ ಪ್ಯಾಕೇಜ್​ನಲ್ಲಿ ಪತ್ರಿಕಾ ವಿತರಕರು ಹಾಗೂ ಪುಸ್ತಕ ವ್ಯಾಪಾರಿಗಳನ್ನೂ ಸೇರಿಸಬೇಕು ಎಂದು ಆಗ್ರಹಿಸಿದರು.

    ಸಂಘದ ಮಾಜಿ ಅಧ್ಯಕ್ಷ ಬಿ.ಗಜೇಂದ್ರ, ಸದಸ್ಯ ಬಸವರಾಜ್, ನಂಜುಂಡ, ಷಣ್ಮುಖ, ಪ್ರಕಾಶ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts