More

    ಪೌಷ್ಟಿಕ ಆಹಾರ ಸೇವನೆಯಿಂದ ರಕ್ತಹೀನತೆ ದೂರ

    ಸೊರಬ: ದಿನದ ಒಂದು ಹೊತ್ತಾದರು ಪೌಷ್ಟಿಕ ಆಹಾರವನ್ನು ಸೇವನೆ ಮಾಡುವುದರಿಂದ ರಕ್ತಹೀನತೆ ಬರದಂತೆ ತಡೆಯಬಹುದು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅರುಂಧತಿ ಕಾಳೆ ಹೇಳಿದರು.

    ಶುಕ್ರವಾರ ತಾಲೂಕಿನ ಹೆಗ್ಗೋಡು ಗ್ರಾಪಂ ವ್ಯಾಪ್ತಿಯ ಕುಪ್ಪೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪೋಷಣಾ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿ, ತಾಯಿ ಗರ್ಭ ಧರಿಸಿ ಮಗುವಿನ 1000 ದಿನದ ಪ್ರಯಾಣದಲ್ಲಿ ಉತ್ತಮ ಪೌಷ್ಟಿಕ ಆಹಾರ ತಾಯಿ ಮತ್ತು ಮಗುವಿಗೆ ದೊರೆಯುವಂತೆ ನೋಡಿಕೊಂಡು ಆರೋಗ್ಯವಂತ ಮಗು ಜನಿಸುವಂತೆ ನೋಡಿಕೊಳ್ಳಬೇಕು ಎಂದರು.

    ಈ ನಿಟ್ಟಿನಲ್ಲಿ ತಾಯಿ ಮತ್ತು ಮಗá-ವಿನ ಆರೈಕೆಗೆ ಹೆಚ್ಚು ಒತ್ತು ನೀಡಿ ರಕ್ತಹೀನತೆ ಕಡಿಮೆ ಮಾಡುವಂತ ಆಹಾರಗಳಾದ ಹಾಲು, ಹಣ್ಣು, ಮೊಟ್ಟೆ, ತರಕಾರಿ, ಸೊಪ್ಪು, ಮೊಳಕೆ ಒಡೆದ ಕಾಳುಗಳಂತಹ ಪೌಷ್ಟಿಕ ಆಹಾರ ಸೇವನೆಗೆ ಆದ್ಯತೆ ಕೊಡಬೇಕು. ಜಂತುಹುಳುಗಳ ನಿಯಂತ್ರಣ, ಅತಿಸಾರ ಭೇದಿ ತಡೆಯುವುದು, ಸ್ವಚ್ಛತೆ ಕಾಪಾಡಿಕೊಳ್ಳುವ ಮೂಲಕ ದೇಹದ ಶಕ್ತಿ ಹಾಗೂ ಶಾಖಾವನ್ನು ಕಾಪಾಡಿಕೊಂಡು ಜೀವಕೋಶಗಳ ಬೆಳವಣಿಗೆಗೆ ಸಹಕಾರಿ ಆಗುವ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ಕಾರ್ಯಕ್ರಮ ಉದ್ಘಾಟಿಸಿದ ಮಹಿಳಾ ಮತ್ತು ಶಿಶು ಅಭಿವೃದ್ಧಿ ಅಧಿಕಾರಿ ಇಂದಿರಾ ಮಾತನಾಡಿ, ಮಹಿಳೆ ಮತ್ತು ಮಕ್ಕಳಲ್ಲಿ ಪೋಷಕಾಂಷಯುಕ್ತ ಆಹಾರ ಸೇವನೆ ಮಾಡುವಂತೆ ಜಾಗೃತಿ ಮೂಡಿಸುವ ಮೂಲಕ ಆರೋಗ್ಯವಂತ ಸಮಾಜ ನಿಮಾರ್ಣ ಮಾಡಲು ಸರ್ಕಾರ ಇಂತಹ ಕಾರ್ಯಕ್ರಮ ಆಯೋಜಿಸá-ತ್ತಿದೆ ಎಂದರು.

    ಮಹಿಳೆಯರಲ್ಲಿ ಹಿಮೋಗ್ಲೋಬಿನ್ ಕೊರತೆ: ಮಹಿಳೆಯರ ರಕ್ತದಲ್ಲಿ 12ರಿಂದ 14 ಗ್ರಾಂ ಡೆಸಿ ಲೀಟರ್ ಹಿಮೋಗ್ಲೋಬಿನ್ ಇದ್ದರೆ ರಕ್ತ ಹೀನತೆ ಕಾಣುವುದಿಲ್ಲ ಆದರೆ ನಾವು ತಪಾಸಣೆ ಮಾಡಿದ ತಾಲೂಕಿನ ಮಹಿಳೆಯರಲ್ಲಿ 10 ಡೆಸಿ ಲೀಟರ್​ಗಿಂತ ಹೆಚ್ಚು ಹಿಮೋಗ್ಲೋಬಿನ್ ಕಂಡು ಬಂದಿಲ್ಲ. ಇದು ವಿಷಾದದ ಸಂಗತಿ ಎಂದು ಅರುಂಧತಿ ಕಾಳೆ ಹೇಳಿದರು. ಮಹಿಳೆಯರು ಹೆಚ್ಚು ಪೌಷ್ಟಿಕ ಆಹಾರ ಸೇವನೆ ಮಾಡುವ ಮೂಲಕ ರಕ್ತ ಹೀನತೆಯಿಂದ ದೂರ ಇರಬಹುದು. ಇತ್ತೀಚಿನ ದಿನದಲ್ಲಿನ ಆಹಾರ ಪದ್ಧತಿಯಿಂದಾಗಿ 100 ಜನರಲ್ಲಿ 70 ಜನರು ಮಧುವೇಹದಿಂದ ಕೂಡಿದ್ದಾರೆ ಎಂದು ಹೇಳಿದರು.

    ಗ್ರಾಮಸ್ಥೆ ಕಲ್ಪನಾ ಅಧ್ಯಕ್ಷತೆ ವಹಿಸಿದ್ದರು. ಅಂಗನವಾಡಿ ಮೇಲ್ವಿಚಾರಕಿ ನೇತ್ರಾವತಿ, ಶೈಲಶ್ರೀ, ಸೀತಮ್ಮ, ಪುಟ್ಟಮ್ಮ, ರೇಣುಕಮ್ಮ, ಆಶಾ ಕಾರ್ಯಕರ್ತೆ ವಿಜಯಕುಮಾರಿ, ವಾಸಂತಿ ಇತರರಿದ್ದರು. ಈ ವೇಳೆ ಬಾಣಂತಿಯರಿಗೆ ಹಾಗೂ ರ್ಗಣಿಯರಿಗೆ ಬಾಗಿನ ನೀಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts