More

    ಪೌರ ಕಾರ್ವಿುಕರಿಗೆ ಸುರಕ್ಷತಾ ಸಾಮಗ್ರಿ

    ಧಾರವಾಡ: ಅವಳಿನಗರದಲ್ಲಿ ಕರೊನಾ ಸೋಂಕು ಹರಡುವಿಕೆ ತಡೆಗೆ ಪಾಲಿಕೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಪ್ರತಿದಿನ ಸ್ವಚ್ಛತಾ ಕಾರ್ಯ ನಿರ್ವಹಿಸುವ ಪೌರ ಕಾರ್ವಿುಕರಿಗೆ ಸುರಕ್ಷತಾ ಸಾಮಗ್ರಿಗಳನ್ನು ವಿತರಿಸಲಾಗಿದೆ. ಕರೊನಾ ಭೀತಿಗೂ ಮೊದಲು ಆರೋಗ್ಯವನ್ನು ಗಂಭೀರವಾಗಿ ಪರಿಗಣಿಸದಿದ್ದ ಪೌರ ಕಾರ್ವಿುಕರು, ಶನಿವಾರ ಸುರಕ್ಷತಾ ಸಾಮಗ್ರಿಗಳನ್ನು ಧರಿಸಿ ಕಾರ್ಯ ನಿರ್ವಹಿಸಿದರು.

    ಇತ್ತೀಚೆಗೆ ಪಾಲಿಕೆಯಿಂದ ಅವಳಿನಗರದ ಪ್ರತಿಯೊಬ್ಬ ಸ್ವಚ್ಛತಾ ಕಾರ್ವಿುಕನಿಗೆ 10 ಮಾಸ್ಕ್ , 3 ಸೆಟ್ ಗ್ಲೌಸ್, ಸ್ಯಾನಿಟೈಸರ್ ಬಾಟಲ್, ಸೋಪ್, ಗಮ್ ಬೂಟ್​ಗಳನ್ನು ನೀಡಲಾಗಿತ್ತು. ಪ್ರತಿಯೊಬ್ಬರೂ ಕಡ್ಡಾಯವಾಗಿ ಸುರಕ್ಷತಾ ಪರಿಕರಗಳನ್ನು ಧರಿಸಿ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.

    ಫೇಸ್ ಶೀಲ್ಡ್ ವಿತರಣೆ: ಪಾಲಿಕೆಯಿಂದ ವಿಶೇಷವಾಗಿ ಕಾರ್ವಿುಕರಿಗೆ ಫೇಸ್ ಶೀಲ್ಡ್​ಗಳನ್ನು ವಿತರಿಸಲಾಗಿದೆ. ಧಾರವಾಡ ಐಐಟಿಯಿಂದ ಸಿದ್ಧಪಡಿಸಲಾಗಿರುವ ಫೇಸ್ ಶೀಲ್ಡ್​ಗಳನ್ನು ಖರೀದಿಸಲಾಗಿದೆ. 2,800ಕ್ಕೆ ಆದೇಶ ನೀಡಲಾಗಿದ್ದು, ಈಗಾಗಲೇ ಬಂದ 2,000 ಫೇಸ್ ಶೀಲ್ಡ್​ಗಳನ್ನು ವಿತರಿಸಲಾಗಿದೆ. ಹುಬ್ಬಳ್ಳಿಯ ಮುಲ್ಲಾ ಓಣಿಯಲ್ಲಿ ಕರೊನಾ ಪಾಸಿಟಿವ್ ಕಂಡುಬಂದ ಹಿನ್ನೆಲೆಯಲ್ಲಿ ಸುತ್ತಲಿನ 3 ಕಿ.ಮೀ. ನಿರ್ಬಂಧಿತ ಪ್ರದೇಶವೆಂದು ಘೊಷಿಸಲಾಗಿದೆ. ಹೀಗಾಗಿ ಹುಬ್ಬಳ್ಳಿಯ ಕಾರ್ವಿುಕರಿಗೆ ಮೊದಲ ಆದ್ಯತೆ ನೀಡಿ ಫೇಸ್ ಶೀಲ್ಡ್​ಗಳನ್ನು ನೀಡಲಾಗಿದೆ. ಐಐಟಿಗೆ ಇನ್ನಷ್ಟು ಸಿದ್ಧಪಡಿಸುವಂತೆ ಆದೇಶ ನೀಡಲಾಗಿದೆ ಎಂದು ಪಾಲಿಕೆ ಎಸ್​ಡಬ್ಲ್ಯುಎಂ ಇಂಜಿನಿಯರ್ ವಿಜಯಕುಮಾರ ಪ್ರತಿಕ್ರಿಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts