More

    ಪೊಲೀಸ್ ಹಿರಿಯ ಅಧಿಕಾರಿಗಳ ಜತೆ ಎಡಿಜಿಪಿ ಚರ್ಚೆ

    ಚಿತ್ರದುರ್ಗ: ನಗರದ ಜೈಲು ರಸ್ತೆ ಪಾಳುಬಿದ್ದ ಮನೆಯೊಂದರಲ್ಲಿ ಐದು ಅಸ್ಥಿ ಪಂಜರಗಳು ದೊರೆತಿರುವ ಪ್ರಕರಣದ ಕುರಿತಂತೆ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಆರ್.ಹಿತೇಂದ್ರ ಅವರು ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ನಗರಕ್ಕೆ ಗುರು ವಾರ ಭೇಟಿ ನೀಡಿದ್ದ ಅವರಿಗೆ ಎಸ್‌ಪಿ ಧರ್ಮೆಂದರ್‌ಕುಮಾರ್ ಮೀನಾ ಮತ್ತಿತರ ಹಿರಿಯ ಅಧಿಕಾರಿಗಳು ಪ್ರಕರಣದ ಕುರಿತಂತೆ ವಿಸ್ತೃತ ಮಾಹಿತಿ ನೀಡಿದ್ದಾರೆ.
    ಅಸ್ಥಿಪಂಜರಗಳು ಪತ್ತೆ ಆದ ದಿನದಿಂದ ಈವರೆಗೆ ಆಗಿರುವ ಬೆಳವಣಿಗೆಗಳು, ಮನೆಯಲ್ಲಿ ನಡೆಸಿರುವ ಶೋಧ,ಎವಿಡೆನ್ಸ್ ಸಂಗ್ರಹ ಕಾರ‌್ಯ,ಮೃತರ ಸಂಬಂಧಿಕರು,ಅಕ್ಕಪಕ್ಕದ ಮನೆಯವರ ಹೇಳಿಕೆ ಪಡೆದಿರುವುದು, ಈವರೆಗೆ ವಿವಿಧ ಆಯಾಮಗಳಲ್ಲಿ ನಡೆಸಿರುವ ತನಿಖೆ. ಮೃತ ಜಗನ್ನಾಥರೆಡ್ಡಿ ಹಾಗೂ ಅವರ ಕುಟುಂಬದ ನಾಲ್ವರು ಸದಸ್ಯರನ್ನು ಗುರುತಿಸಿರುವುದು. ಪೋಸ್ಟ್ ಮಾರ್ಟಮ್ ನಂತರದಲ್ಲಿ ಹೂ ಳುವ ಮೂಲಕ ಅಂತಿಮ ಸಂಸ್ಕಾರ ನಡೆಸಲು ಅಸ್ಥಿ ಪಂಜರಗಳನ್ನು ಸಂಬಂಧಿಕರಿಗೆ ಅವುಗಳನ್ನು ಹಸ್ತಾಂತರಿಸಿರುವ ಕುರಿತಂತೆ ಎಸ್‌ಪಿ ಎಡಿಜಿಪಿ ಅವರಿಗೆ ತಿಳಿಸಿದ್ದಾರೆಂದು ಗೊತ್ತಾಗಿದೆ.
    ಪ್ರಾಥಮಿಕ ವರದಿ ಇನ್ನೂ ಕೈ ಸೇರಿಲ್ಲ
    ಜಿಲ್ಲೆ ಹಾಗೂ ದಾವಣಗೆರೆ ಜಿಲ್ಲೆಯ ಎಫ್‌ಎಸ್‌ಎಲ್ ತಜ್ಞರು ಈಗಾಗಲೇ ಮನೆ ಒಳ ಮತ್ತು ಹೊರ ಆವರಣದಲ್ಲಿ ಹಲವು ಸಾಕ್ಷಾೃಧಾ ರಗಳನ್ನು ಕಲೆ ಹಾಕಿದ್ದಾರೆ. ಪೋಸ್ಟ್ ಮಾರ್ಟಮ್‌ನ ಪ್ರಾಥಮಿಕ ವರದಿ ಇನ್ನೂ ಕೈಸೇರಿಲ್ಲ. ಅದು ಕೈಸೇರುತ್ತಿದ್ದಂತೆ ಅಸ್ಥಿ ಪಂಜರಗಳ ಸ್ಯಾಂ ಪಲ್‌ನ್ನು ಡಿಎನ್‌ಎ ಟೆಸ್ಟ್‌ಗೆ ಬೆಂಗಳೂರು ಅಥವಾ ಹುಬ್ಬಳಿಗೆ ಪೊಲೀಸರು ಕಳಿಸಿ ಕೊಡಲಿದ್ದಾರೆ. ಅಲ್ಲಿಂದ ವರದಿ ಬಂದ ಬಳಿಕ ತಜ್ಞ ವೈದ್ಯ ರು ಪ್ರಕರಣದ ಕುರಿತಂತೆ ಅಂತಿಮ ವರದಿಯನ್ನು ಪೊಲೀಸರಿಗೆ ಕೊಡಲಿದ್ದಾರೆ. ಈ ಅಂತಿಮ ವರದಿ ಪೊಲೀಸರ ಕೈ ಸೇರಲು ಇನ್ನು ಕೆಲದಿನಗಳು ಬೇಕಾಗಲಿದೆ.
    ಎಡಿಜಿಪಿ ಭೇಟಿಯ ಕುರಿತು ಪ್ರತಿಕ್ರಿಯಿಸಿರುವ ಎಸ್‌ಪಿ, ಶಿವಮೊಗ್ಗಕ್ಕೆ ತೆರಳುವ ಮಾರ್ಗ ಮಧ್ಯೆ ನಗರಕ್ಕೆ ಭೇಟಿ ಕೊಟ್ಟಿದ್ದರು. ಈ ವೇಳೆ ಅವರನ್ನು ಭೇಟಿಯಾಗಿ ಪ್ರಕರಣದ ಮಾಹಿತಿ ಕೊಟ್ಟಿದ್ದೇನೆ ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts