More

    ಪೊಲೀಸ್ ಪೇದೆ, ಆರೋಗ್ಯ ಸಿಬ್ಬಂದಿ, ಶಿಕ್ಷಕನಿಗೂ ಸೋಂಕು

    ಹಾವೇರಿ: ಜಿಲ್ಲೆಯಲ್ಲಿ ಶನಿವಾರ 28 ಜನರಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 151ಕ್ಕೆ ಏರಿಕೆಯಾಗಿದೆ. ಇಬ್ಬರು ಸೋಂಕಿತರು ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟು 112 ಪ್ರಕರಣಗಳು ಸಕ್ರಿಯವಾಗಿವೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ತಿಳಿಸಿದ್ದಾರೆ.

    ಶನಿವಾರ ಜಿಲ್ಲೆಯಲ್ಲಿ ಓರ್ವ ಪೊಲೀಸ್ ಪೇದೆ, ಇಬ್ಬರು ಆಶಾ ಕಾರ್ಯಕರ್ತೆಯರು, ಮೂವರು ಆರೋಗ್ಯ ಇಲಾಖೆ ಸಿಬ್ಬಂದಿ, ಬ್ಯುಟಿಷಿಯನ್ ಹಾಗೂ ಶಿಗ್ಗಾಂವಿಯ ಪಿಗ್ಮಿ ಏಜೆಂಟ್​ನ ಪ್ರಾಥಮಿಕ ಸಂಪರ್ಕದಿಂದ ಐದು ಜನರಿಗೆ ಸೇರಿ 28 ಜನರಿಗೆ ಸೋಂಕು ದೃಢಪಟ್ಟಿದೆ. ಹಾನಗಲ್ಲ ತಾಲೂಕಿನಲ್ಲಿ 11, ಶಿಗ್ಗಾಂವಿ 10, ರಾಣೆಬೆನ್ನೂರ 4, ಹಾವೇರಿ 2, ಹಿರೇಕೆರೂರ ತಾಲೂಕಿನ ಒಬ್ಬರಿಗೆ ಸೋಂಕು ತಗುಲಿದೆ.

    ಹಾನಗಲ್ಲ ತಾಲೂಕಿನ ಶಿವಪುರದ ವ್ಯಕ್ತಿ ಹಾನಗಲ್ಲ ಸರ್ಕಾರಿ ಆಸ್ಪತ್ರೆಯಲ್ಲಿ ಡಿ ದರ್ಜೆ ನೌಕರ 24 ವರ್ಷದ ಪುರುಷ, ಹಾನಗಲ್ಲನ 22 ವರ್ಷದ ಪುರುಷ, ಕಲ್ಕಹಕ್ಕಲನ ಆರೋಗ್ಯ ಇಲಾಖೆ ಸಿಬ್ಬಂದಿ 31ವರ್ಷದ ಮಹಿಳೆ, 41 ವರ್ಷದ ಆಶಾ ಕಾರ್ಯಕರ್ತೆ, 60 ವರ್ಷದ ವೃದ್ಧೆ, 29 ವರ್ಷದ ಬ್ಯೂಟಿ ಟೆಕ್ನಿಷಿಯನ್ ಮಹಿಳೆ, 60 ವರ್ಷದ ಮಹಿಳೆ, 56 ವರ್ಷದ ಮಹಿಳೆ, 27 ವರ್ಷದ ಮಹಿಳೆ, 38 ವರ್ಷದ ಮಹಿಳೆ, 20 ವರ್ಷದ ಐಟಿಐ ವಿದ್ಯಾರ್ಥಿ, ಶಿಗ್ಗಾಂವಿ ತಾಲೂಕಿನ 45 ವರ್ಷದ ಆಶಾ ಕಾರ್ಯಕರ್ತೆ, 34 ವರ್ಷದ ಪುರುಷ, 21 ವರ್ಷದ ಯುವಕ, 56 ವರ್ಷದ ಪುರುಷ, 64 ವರ್ಷದ ವೃದ್ಧ, 27 ವರ್ಷದ ಪುರುಷ, 42 ವರ್ಷದ ಪುರುಷ, 25 ವರ್ಷದ ಮಹಿಳೆ, 4 ವರ್ಷದ ಬಾಲಕ, 43 ವರ್ಷದ ಪುರುಷ, ರಾಣೆಬೆನ್ನೂರ ತಾಲೂಕಿನ 66 ವರ್ಷದ ವೃದ್ಧೆ, 28 ವರ್ಷದ ಮಹಿಳೆ, 46 ವರ್ಷದ ಶಿಕ್ಷಕ, 29 ವರ್ಷದ ಮಹಿಳೆ, ಹಾವೇರಿ ನಾಗೇಂದ್ರನಮಟ್ಟಿಯ 24 ವರ್ಷದ ಮಹಿಳೆ ಹಾಗೂ ಅಶ್ವಿನಿ ನಗರದ ಪೊಲೀಸ್ ಪೇದೆ 50 ವರ್ಷದ ಪುರುಷ, ಹಿರೇಕೆರೂರ ತಾಲೂಕು ಮಾಸೂರಿನ 35 ವರ್ಷದ ಮಹಿಳೆಗೆ ಶನಿವಾರ ಸೋಂಕು ದೃಢಗೊಂಡಿದೆ.

    ಜೂ. 23ರಂದು ಕೋವಿಡ್ ಸೋಂಕು ದೃಢಪಟ್ಟು ನಿಗದಿತ ಆಸ್ಪತ್ರೆಯಲ್ಲಿ ದಾಖಲಾಗಿ ಗುಣವಾದ ರಾಣೆಬೆನ್ನೂರ ನಗರದ 38 ವರ್ಷದ ಬಟ್ಟೆ ವ್ಯಾಪಾರಿ, ಶಿಗ್ಗಾಂವಿ ಪಟ್ಟಣದ 37 ವರ್ಷದ ಪಿಗ್ಮಿ ಏಜೆಂಟ್​ನನ್ನು ಶನಿವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts