More

    ಪೊಲೀಸ್ ಕಾವಲಲ್ಲಿ ನಾಗಬನ ಕಾಂಪೌಂಡ್ ನಿರ್ಮಾಣ

    ಭಟ್ಕಳ: ಪಟ್ಟಣದ ರಾಜಾಂಗಣದ ಬಳಿ ನಾಗಬನದ ಕಾಂಪೌಂಡ್ ನಿರ್ಮಾಣ ವಿವಾದ ತಾರಕ್ಕಕೇರಿ ಬಿಗುವಿನ ವಾತಾವರಣ ಸೃಷ್ಟಿಯಾದ ಬೆನ್ನಲ್ಲೇ ಪುರಸಭೆ ಮತ್ತು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿವರೆಗೂ ನಿಷೇಧಾಜ್ಞೆ ಜಾರಿಗೊಳಿಸಿ ತಹಸೀಲ್ದಾರ್ ಎಸ್. ರವಿಚಂದ್ರ ಆದೇಶಿಸಿದ್ದಾರೆ.

    ನಾಗಬನ ನಿರ್ವಣದ ವಿಚಾರದಲ್ಲಿ ಶುಕ್ರವಾರ ಉಭಯ ಕೋಮುಗಳ ನಡುವೆ ವಿವಾದ ನಡೆದು ಮಾತಿನ ಚಕಮಕಿ ನಡೆದಿತ್ತು. ನಂತರ ಭಟ್ಕಳ ಉಪವಿಭಾಗಾಧಿಕಾರಿ ಮಮತಾದೇವಿ ಎಸ್. ಅವರ ಮಧ್ಯಸ್ಥಿಕೆಯಲ್ಲಿ ಸಂಧಾನ ಸಭೆ ನಡೆದಿತ್ತು. ಅಲ್ಲೂ ವಾದ-ವಿವಾದಗಳು ನಡೆದು ಉಭಯ ಕೋಮಿನ ಮುಖಂಡರು ಸಭೆ ಬಿಟ್ಟು ಹೊರಗೆ ಬಂದಿದ್ದರು. ಮತೀಯವಾಗಿ ಭಟ್ಕಳ ಅತೀ ಸೂಕ್ಷ್ಮ ಪ್ರದೇಶವಾಗಿದ್ದು, ಸಣ್ಣ ಘಟನೆಗಳು ಕೋಮು ಗಲಭೆ ಆಗುವ ಸಾಧ್ಯತೆಗಳಿರುತ್ತವೆ. ಪ್ರಸ್ತುತ ನಾಗಬನದ ಬಳಿ ಮುಸ್ಲಿಂ ಸಮುದಾಯ ಬಹಳ್ಯವಿದೆ. ಅಲ್ಲದೆ, ಈ ವಿಷಯದಲ್ಲಿ ವಿವಾದವಿದೆ ಎಂದು ತಮ್ಮ ವರದಿಯಲ್ಲಿ

    ಉಲ್ಲೇಖಿಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತೆರಳದಂತೆ ಶಾಂತಿ ಸೌಹಾರ್ದತೆ ಕಾಪಾಡಲು ನಿಷೇಧಾಜ್ಞೆ ಹೊರಡಿಸಿ ಆದೇಶ ನೀಡಿದ್ದಾರೆ. ಪರಿಸ್ಥಿತಿ ಅವಲೋಕಿಸಿ ನಿಷೇಧಾಜ್ಞೆಯನ್ನು ಮುಂದುವರಿಸಲಾಗುವುದು ಎಂದು ಅವರು ಪತ್ರಿಕೆಗೆ ತಿಳಿಸಿದ್ದಾರೆ.

    ಉಪವಿಭಾಗಾಧಿಕಾರಿ ಶುಕ್ರವಾರ ರಾತ್ರಿ ತಂಜೀಂ ಸಂಸ್ಥೆಯವರನ್ನು ಕರೆಯಿಸಿ ಚರ್ಚೆ ನಡೆಸಿ ಧಾರ್ವಿುಕ ಕಾರ್ಯಕ್ಕೆ ಅಡ್ಡಿಪಡಿಸದಂತೆ ಮನವೊಲಿಸಿದ್ದರು. ಅದರಂತೆ ಶನಿವಾರ ನಾಗಬನದ ಕಾಂಪೌಂಡ್ ಕಾಮಗಾರಿ ಸಿಪಿಐ ದಿವಾಕರ ಎಸ್. ಅವರ ನೇತೃತ್ವದಲ್ಲಿ ಮತ್ತೆ ಆರಂಭಗೊಂಡಿತು. ಸ್ಥಳದಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ ಸಿಪಿಐ, ಪಿಎಸ್​ಐ ಸೇರಿ ನೂರಾರು ಸಂಖ್ಯೆಯ ಪೊಲೀಸ್ ಸಿಬ್ಬಂದಿ ಬೀಡು ಬಿಟ್ಟಿದ್ದಾರೆ. ತಹಸೀಲ್ದಾರ್ ರವಿಚಂದ್ರ ಸ್ಥಳಕ್ಕೆ ಭೇಟಿ ಕಾಮಗಾರಿ ಪರಿಶೀಲನೆ ನಡೆಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts