More

    ಪೊನ್ನಂಪೇಟೆಯಲ್ಲಿ ಶಾಂತಿಯುತ ಮತದಾನ

    ಗೋಣಿಕೊಪ್ಪ: ಪೊನ್ನಂಪೇಟೆ ತಾಲೂಕು ವ್ಯಾಪ್ತಿಯಲ್ಲಿ ಶಾಂತಿಯುತವಾಗಿ ಮತದಾನ ನಡೆಯಿತು.

    ಬೆಳಗ್ಗೆಯಿಂದಲೇ ಮತದಾರರು ಮತಗಟ್ಟೆಗೆ ನಿಧಾನವಾಗಿ ಆಗಮಿಸುತ್ತಿದ್ದರು. ಹೆಚ್ಚು ಉತ್ಸಾಹ ಕಂಡು ಬರಲಿಲ್ಲ. ಇದರಿಂದಾಗಿ ಮಧ್ಯಾಹ್ನ ಮೂರು ಗಂಟೆವರೆಗೂ ಕ್ಷೇತ್ರದಲ್ಲಿ ಶೇ.58.92 ಮತದಾನವಾಯಿತು.

    ಬೆಳಗ್ಗೆ ಹೆಚ್ಚು ಮತದಾನವಾಗಬಹುದು ಎಂಬ ನಿರೀಕ್ಷೆ ಕೂಡ ಹುಸಿಯಾಯಿತು. ಮತಗಟ್ಟೆಗಳಿಗೆ ಹಿರಿಯರು, ಅನಾರೋಗ್ಯದಿಂದ ನರಳುತ್ತಿರುವುವರು ಕೂಡ ಸಂಬಂಧಿಕರ ಸಹಾಯದಲ್ಲಿ ಆಗಮಿಸಿ ಮತ ಚಲಾವಣೆ ಮಾಡಿದರು. ನಗರ ಪ್ರದೇಶದಲ್ಲಿರುವ ಯುವಕ, ಯುವತಿಯರು ಹೆಚ್ಚಾಗಿ ಮತದಾನದಲ್ಲಿ ಪಾಲ್ಗೊಂಡಿದ್ದರು.

    ಸವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ಕಾಡ್ಯಮಾಡ ಮನು ಸೋಮಯ್ಯ ಕೋತೂರು ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಕಾಂಗ್ರೆಸ್ ಅಭ್ಯರ್ಥಿ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ ಬೆಳ್ಳೂರು ಮತಗಟ್ಟೆಯಲ್ಲಿ ತಮ್ಮ ಕುಟುಂಬ ಸದಸ್ಯರೊಂದಿಗೆ ಮತ ಚಲಾಯಿಸಿದರು. ಮತ ಚಲಾವಣೆಗೂ ಮುನ್ನ ಕುಟುಂಬದ ಬಲ್ಯಮನೆ ಮತ್ತು ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಪತ್ನಿ ಕಾಂಚನಾ ಪೊನ್ನಣ್ಣ, ಸಹೋದರ ನರೇನ್ ಕಾರ್ಯಪ್ಪ ಜತೆಯಲ್ಲಿದ್ದರು.

    ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ ಮಾತನಾಡಿ, ಮತದಾರರು ಹೆಚ್ಚು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡಿರುವುದು ಶುಭ ಸಂಕೇತ. ಮತದಾರರ ಒಲವು ಕೂಡ ನನ್ನ ಮೇಲಿರುವುದು ದೃಢಪಟ್ಟಿದೆ. ಬದಲಾವಣೆಗಾಗಿ ನನ್ನನ್ನು ಹೆಚ್ಚು ಮತ ನೀಡಿ ಜಯಶೀಲರಾಗಿ ಮಾಡುತ್ತಾರೆ ಎನ್ನುವ ವಿಶ್ವಾಸವಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts