More

    ಪೆರಡಾಲ ಕೊರಗ ಕಾಲನಿಯಲ್ಲಿ 60ಕ್ಕೂ ಅಧಿಕ ಮಂದಿಗೆ ಕರೊನಾ ಸೋಂಕು

    ಬದಿಯಡ್ಕ: ಕೇರಳದಲ್ಲೇ ಅತಿ ದೊಡ್ಡ ಕೊರಗ ಕಾಲನಿಯಾದ ಬದಿಯಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆರಡಾಲ ಕೊರಗ ಕಾಲನಿಯಲ್ಲಿ 60ಕ್ಕೂ ಅಧಿಕ ಮಂದಿಗೆ ಕರೊನಾ ಸೋಂಕು ಕಾಣಿಸಿಕೊಂಡಿದೆ.

    ಕಾಲನಿಯ 12 ಕುಟುಂಬಗಳ 14 ಮಂದಿಗೆ ಕಳೆದೊಂದು ವಾರದಲ್ಲಿ ಸೋಂಕು ಕಾಣಿಸಿದ್ದು, ಡೊಮಿಸಿಲಿಯರಿ ಕೇರ್ ಸೆಂಟರ್‌ಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಬುಧವಾರ ಬೆಳಗ್ಗೆ ಮತ್ತೆ 40ರಷ್ಟು ಮಂದಿಗೆ ಸೋಂಕು ಲಕ್ಷಣ ಕಂಡುಬಂದಿದೆ.

    ಕಾಲನಿಯಲ್ಲಿ 57 ಕುಟುಂಬಗಳು ವಾಸಿಸುತ್ತಿವೆ. ಸೋಂಕಿತರ ಪೈಕಿ ಇಬ್ಬರನ್ನು ಬದಿಯಡ್ಕ ಸಮುದಾಯ ಆರೋಗ್ಯ ಕೇಂದ್ರದ ನಿಗಾ ಘಟಕಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 8 ಮಂದಿ ಕೇರ್ ಸೆಂಟರಿನಲ್ಲಿದ್ದು, ಇತರ 50ಕ್ಕೂ ಅಧಿಕ ಮಂದಿ ಮನೆಯಲ್ಲಿ ಹೋಂ ಐಸೋಲೇಶನ್‌ನಲ್ಲಿದ್ದಾರೆ.

    ಕಾಲನಿಯಲ್ಲಿ ಸೋಂಕು ವ್ಯಾಪಿಸಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದು, ಸೋಂಕು ನಿಯಂತ್ರಣಕ್ಕೆ ಎಲ್ಲ ಕ್ರಮಗಳನ್ನು ಆರೋಗ್ಯ ಇಲಾಖೆ ಕೈಗೊಂಡಿದೆ ಎಂದು ಬದಿಯಡ್ಕ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ಪರಿವೀಕ್ಷಕ(ಎಚ್.ಐ.) ದೇವಿದಾಕ್ಷನ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts