More

    ಪುಸ್ತಕ ಓದುವುದು ಯಾರಿಗೂ ಮೀಸಲಲ್ಲ

    ಸಿದ್ದಾಪುರ: ಪುಸ್ತಕ ಓದುವುದು ಯಾರೊಬ್ಬರಿಗೂ ಮೀಸಲು ಅಲ್ಲ. ಒಬ್ಬರು ಓದಿದ ನಂತರ ಆ ಪುಸ್ತಕ ಎಲ್ಲರಿಗೂ ಓದಲು ತಲುಪುವಂತಾಗಬೇಕು ಎಂದು ಹಿರಿಯ ಸಾಹಿತಿ ನಾ. ಡಿಸೋಜ ಹೇಳಿದರು.

    ಪಟ್ಟಣದ ಶಂಕರಮಠದಲ್ಲಿ ಸಂಸ್ಕೃತಿ ಸಂಪದ ಹಾಗೂ ರಂಗಸೌಗಂಧ ಸಿದ್ದಾಪುರ ಇವರ ಆಶ್ರಯದಲ್ಲಿ ಲೇಖಕಿ ಭಾರತಿ ಹೆಗಡೆ ಅವರ ಸೀತಾಳೆ ದಂಡೆಯ ಸದ್ದಿಲ್ಲದ ಕಥೆಗಳು ಪುಸ್ತಕ ಶುಕ್ರವಾರ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

    ಸೀತಾಳೆದಂಡೆಯ ಕಥಾ ಸಂಕಲನ ಗ್ರಾಮೀಣ ಬದುಕಿನ ಸತ್ವವನ್ನು ತಿಳಿಸುತ್ತಿದೆ. ಸಮಾಜ ಮತ್ತು ಕುಟುಂಬದಿಂದ ಶೋಷಣೆಗೆ ಒಳಗಾದ ಮಹಿಳೆಯರ ಚಿತ್ರಣವನ್ನು ಕಥಾಸಂಕಲನದಲ್ಲಿ ಬಿಂಬಿಸಲಾಗಿದೆ ಎಂದರು.

    ಹಿರಿಯ ಪತ್ರಕರ್ತೆ ಆರ್. ಪೂರ್ಣಿಮಾ ಮಾತನಾಡಿ, ಕಥೆ ಹಾಗೂ ಕಾದಂಬರಿಗಳು ಓದುಗರಿಗೆ ಕುತೂಹಲ ಮೂಡಿಸುವಂತಿರಬೇಕು ಎಂದರು.

    ವಿಮರ್ಶಕ ಆರ್.ಡಿ.ಹೆಗಡೆ ಆಲ್ಮನೆ ಕೃತಿ ಪರಿಚಯಿಸಿದರು.ಶಂಕರಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ ಉಪಸ್ಥಿತರಿದ್ದರು. ಲೇಖಕಿ ಭಾರತಿ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜೇಂದ್ರ ಹೆಗಡೆ ಕೊಳಗಿ, ಗಣಪತಿ ಹೆಗಡೆ ಹುಲಿಮನೆ, ಶ್ರೀಪಾದ ಹೆಗಡೆ ಕೋಡನಮನೆ, ಗಣಪತಿ ಹೆಗಡೆ ಗುಂಜಗೋಡ ಕಾರ್ಯಕ್ರಮ ನಿರ್ವಹಿಸಿದರು.</

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts