More

    ಪುರಾತನ ಕಾಲದಿಂದಲೂ ರಂಗ ಕಲೆಗೆ ಇದೆ ಮಹತ್ವ


    ಚಿತ್ರದುರ್ಗ: ಪರಿಣಾಮಕಾರಿ ಶಿಕ್ಷಣಕ್ಕೆ ರಂಗಕಲೆ ಸಹಕಾರಿ ಎಂದು ಸರ್ಕಾರಿ ಕಲಾ ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ಜಿ.ಎನ್.ಯಶೋಧರ ಹೇಳಿದರು.
    ನಗರದ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧವಾರ ಬಾದರದಿನ್ನಿ ಆರ್ಟ್ಸ್ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಶಿಕ್ಷಣದಲ್ಲಿ ರಂಗಕಲೆ ಕುರಿತು ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯನ ಹುಟ್ಟಿನಿಂದಲೇ ರಂಗ ಶಿಕ್ಷಣ ಪ್ರಾರಂಭವಾಗುತ್ತದೆ, ಪುರಾತನ ಕಾಲದಿಂದಲೂ ರಂಗ ಕಲೆಗೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ ಎಂದರು.
    ರಂಗಕರ್ಮಿ ಸಿ.ಪಿ.ಜ್ಞಾನದೇವ ಮಾತನಾಡಿ, ಶಿಕ್ಷಕರು ರಂಗಕಲೆ ಮೈಗೂಡಿಸಿಕೊಂಡು ಪಾಠ ಮಾಡುವುದರಿಂದ ಮಕ್ಕಳಲ್ಲಿ ಶಿಕ್ಷಣದೆಡೆ ಒಲವು ಹೆಚ್ಚುವುದರ ಜತೆಗೆ ಅವರ ಜ್ಞಾಪಕ ಶಕ್ತಿ ವೃದ್ಧಿಗೆ ಸಹಕಾರಿಯಾಗುತ್ತದೆ. ದೃಶ್ಯ ಮತ್ತು ಶ್ರವಣ ಮಾಧ್ಯಮಗಳನ್ನು ಮೇಳೈಯಿಸಿದ ರಂಗಭೂಮಿ ವಿದ್ಯಾರ್ಥಿಗಳ ಮೇಲೆ ಗಟ್ಟಿಯಾದ ಪ್ರಭಾವ ಬೀರಬಲ್ಲಂಥ ಮಾಧ್ಯಮವಾಗಿದೆ ಎಂದರು.
    ಅಕಾಡೆಮಿ ಕಾರ್ಯದರ್ಶಿ ಪ್ರಕಾಶ್‌ಬಾದರದಿನ್ನಿ,ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ‌್ಯೆ ಎಂ.ಆರ್.ಜಯಲಕ್ಷ್ಮೀ, ಉಪ ಪ್ರಾಚಾರ‌್ಯ ಎಚ್.ಎನ್.ಶಿವಕುಮಾರ, ಉಪನ್ಯಾಸಕರಾದ ಪದ್ಮಶ್ರೀ, ಒ.ಎಂ.ಮಂಜುನಾಥ್, ಮಂಜುನಾಥಪ್ಪ, ಪಲ್ಲವಿ, ಗೀತಾ, ಕಲಾವಿ ದರಾದ ರಚನಾಮಂಜುನಾಥ್, ಗುರುಕಿರಣ, ರಾಘವೇಂದ್ರ ಮತ್ತಿತರರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts