More

    ಪುರಾತನ ಈಶ್ವರಲಿಂಗ ಪತ್ತೆ

    ಹಾನಗಲ್ಲ: ಆನೆಕೆರೆಯ ದಂಡೆಗುಂಟ ಬೆಳೆದು ನಿಂತಿದ್ದ ಗಿಡ, ಕಂಟಿಗಳನ್ನು ತಾಲೂಕು ಆಡಳಿತ, ಇತರ ಇಲಾಖೆಗಳ ಸಿಬ್ಬಂದಿ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಪುರಾತನ ಈಶ್ವರಲಿಂಗವೊಂದು ಪತ್ತೆಯಾಗಿದೆ.

    ಗಾಂಧಿ ಜಯಂತಿ ಅಂಗವಾಗಿ ಕಂದಾಯ, ಪುರಸಭೆ, ಪೊಲೀಸ್, ಶಿಕ್ಷಣ ಇಲಾಖೆಗಳೊಂದಿಗೆ, ಸ್ಕೌಟ್ಸ್ ಮತ್ತು ಗೈಡ್ಸ್, ಭಾರತ ಸೇವಾದಳ ಕಾರ್ಯಕರ್ತರು ಪಟ್ಟಣದ ವಿವಿಧ ಭಾಗಗಳಲ್ಲಿ ಸ್ವಚ್ಛತಾ ಅಭಿಯಾನ ಕೈಗೊಂಡಿದ್ದಾರೆ. ಆನೆಕೆರೆಯನ್ನೂ ಸ್ವಚ್ಛಗೊಳಿಸಲಾಗುತ್ತಿತ್ತು. ಕೆರೆಯ ದಂಡೆಯಲ್ಲಿ ಬೆಳೆದಿದ್ದ ಗಿಡಗಳನ್ನು ಕಡಿದು ಹಾಕುವಾಗ ಕೆರೆಯಲ್ಲಿ ಪಾನಬಟ್ಟಲಿನಲ್ಲಿರುವ ಈಶ್ವರಲಿಂಗ ಪತ್ತೆಯಾಗಿದೆ. ನೂರಾರು ವರ್ಷಗಳ ಹಿಂದಿನ, ಕಲ್ಲಿನಲ್ಲಿ ಕೆತ್ತಿರುವ ಬೃಹತ್ ಈಶ್ವರಲಿಂಗ ಇದಾಗಿದೆ. ಕೆರೆಯ ಒಳಭಾಗದಲ್ಲಿ ದಂಡೆಗೆ ಕಲ್ಲುಗಳ ಗೋಡೆ ನಿರ್ವಿುಸಲಾಗಿದ್ದು, ಈ ಕಲ್ಲುಗಳ ಮಧ್ಯದಲ್ಲಿ ಈಶ್ವರಲಿಂಗವಿರುವುದು ಬೆಳಕಿಗೆ ಬಂದಿದೆ.

    ಎಲ್ಲ ಇಲಾಖೆ ಸಿಬ್ಬಂದಿ ಸೇರಿ ಈಶ್ವರಲಿಂಗದ ಸುತ್ತಲಿನ ಕಸ ಕಿತ್ತು ಸ್ವಚ್ಛಗೊಳಿಸಿ, ಕ್ಷೀರಾಭಿಷೇಕದೊಂದಿಗೆ ಲಿಂಗಕ್ಕೆ ಪೂಜೆ ಸಲ್ಲಿಸಿದರು.

    ತಹಸೀಲ್ದಾರ್ ಪಿ.ಎಸ್. ಎರ್ರಿಸ್ವಾಮಿ, ಸಿಪಿಐ ಶಿವಶಂಕರ ಗಣಾಚಾರಿ, ಎಚ್.ಎನ್. ಭಜಕ್ಕನವರ, ಪರಿಸರ ಇಂಜಿನಿಯರ್ ಅಮೂಲ್ಯಾ ಹೆಬ್ಬಾಲೆ, ಬಿಇಒ ಎಚ್.ಶ್ರೀನಿವಾಸ, ಪಿಎಸ್​ಐ ಶ್ರೀಶೈಲ ಪಟ್ಟಣಶೆಟ್ಟಿ, ಇಒ ಸುನೀಲ, ಎ.ಎಸ್. ಶಿಂಧೆ, ಎಸ್. ಆನಂದ, ಸಿ.ಸಿ. ಕದಂ, ಸಂತೋಷ ದೊಡ್ಡಮನಿ, ವೇ.ಮೂ.ಚನ್ನವೀರಸ್ವಾಮಿ ಹಿರೇಮಠ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts