More

    ಪುಟ್ಟರಾಜರು 20ನೇ ಶತಮಾನದ ಅದ್ಭುತ ಸೃಷ್ಟಿ

    ಶಿಗ್ಗಾಂವಿ: ಗಾನಯೋಗಿ ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳು 20ನೇ ಶತಮಾನದ ಅದ್ಭುತ ಸೃಷ್ಟಿ ಎಂದು ವಿರಕ್ತಮಠದ ಸಂಗನಬಸವ ಸ್ವಾಮೀಜಿ ಹೇಳಿದರು.

    ಪಟ್ಟಣದ ಗಾನಯೋಗಿ ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಕಲಾ ಸಂಸ್ಥೆಯ ಕಚೇರಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಗವಾಯಿಗಳ 10ನೇ ಪುಣ್ಯ ಸ್ಮರಣೋತ್ಸವ ಸಂಗೀತ ನುಡಿ-ನಮನ, ಗೀತ ಗಾಯನ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

    ಕಣ್ಣು ಇದ್ದವರು ಮಾಡದ ಸಾಧನೆಯನ್ನು ಅಂಧರಾದ ಪಂಡಿತ ಪುಟ್ಟರಾಜ ಕವಿ ಗವಾಯಿಗಳು ಮಾಡಿದ್ದಾರೆ. ಅವರ ಸಾಧನೆ ಇತರರಿಗೆ ಪ್ರೇರಣೆಯಾಗಿದ್ದು, ಅಂತಹ ಮಹಾನ್ ಸಾಧಕರ ಸ್ಮರಣೆ ಅವಶ್ಯ ಎಂದರು. ಕಲಾ ಸಂಸ್ಥೆಯ ಗೌರವಾಧ್ಯಕ್ಷ ಕೊಟ್ರೇಶ ಮಾಸ್ತರ ಬೆಳಗಲಿ ಮಾತನಾಡಿ, ಅಂಧರ ಬಾಳಿಗೆ ಬೆಳಕಾದ, ದೇವರ ಸ್ವರೂಪರಾದ ಗವಾಯಿಗಳ ಸ್ಮರಣೆ ತೃಪ್ತಿ ತರುತ್ತಿದೆ ಎಂದು ಹೇಳಿದರು.

    ಕಲಾ ಸಂಸ್ಥೆ ಮಕ್ಕಳು, ಸಂಗೀತಗಾರರಿಂದ ಸಂಗೀತ ನುಡಿ-ನಮನ ಕಾರ್ಯಕ್ರಮ ಜರುಗಿತು. ತಿಪ್ಪಣ್ಣ ಸಾತಣ್ಣವರ, ಶಿವಾನಂದ ಬಿಳೆಕುದುರಿ, ಕಲಾ ಸಂಸ್ಥೆಯ ಅಧ್ಯಕ್ಷ ಫಕೀರೇಶ ಮಾಸ್ತರ ಕೊಂಡಾಯಿ, ಕಾರ್ಯದರ್ಶಿ ಶಿವಾನಂದ ಹೊಸಮನಿ, ಶಂಕರ್ ಅರ್ಕಸಾಲಿ, ಬಸವರಾಜ ಶಿಗ್ಗಾಂವಿ, ರಮೇಶ ಸಾತಣ್ಣವರ, ಖುಷಿ ಅಯ್ಯನವರ, ವಿರೂಪಾಕ್ಷಪ್ಪ ಬಗಾಡೆ, ಶೇಖಣ್ಣ ಜೋಳದ, ನಾಗರಾಜ ಬಡಿಗೇರ, ಸಿದ್ದೇಶ ಮಾಸ್ತರ ನಂದಿಹಾಳ, ಮೆಹಬೂಬ್​ಸಾಬ್ ನದಾಫ್, ಮಹೇಶಗೌಡ ಪಾಟೀಲ, ಶರೀಫ ಮಾಕಾಪೂರ, ಶರಣಬಸಯ್ಯ ಹಿರೇಮಠ, ಬಸಯ್ಯಸ್ವಾಮಿ ಹಿರೇಮಠ, ಹನುಮಂತಪ್ಪ ಕಾಮನಹಳ್ಳಿ, ಬಸಲಿಂಗಪ್ಪ ನರಗುಂದ, ಯಂಕಮ್ಮ ಬಂಡಿವಡ್ಡರ ಮತ್ತಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts