More

    ಪಿಯುಸಿ ಪರೀಕ್ಷೆ ಫಲಿತಾಂಶ,ದುರ್ಗಕ್ಕೆ ಶೇ.72.92 ಫಲಿತಾಂಶ

    ಚಿತ್ರದುರ್ಗ: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಫಲಿತಾಂಶದಲ್ಲಿ ಚಿತ್ರದುರ್ಗ ಜಿಲ್ಲೆಗೆ ಈ ಬಾರಿ ಶೇ.72.92 ಫಲಿತಾಂಶ ಬಂದಿದ್ದು,ರಾಜ್ಯದೆಲ್ಲ ಶೈಕ್ಷಣಿಕ ಜಿಲ್ಲೆಗಳಿಗೆ ಹೋಲಿಸಿದ ಈ ವರ್ಷವೂ 31ನೇ ಸ್ಥಾನದಲ್ಲಿ ಉಳಿದುಕೊಂಡಿದೆ. 2023ರ ವಾರ್ಷಿಕ ಪರೀಕ್ಷೆ ಫಲಿತಾಂಶದಲ್ಲಿ ಜಿಲ್ಲೆ ಶೇ.69.5 ಫಲಿತಾಂಶದೊಂದಿಗೆ 31ನೇ ಸ್ಥಾನದಲ್ಲಿತ್ತು.
    ಮಾ.1ರಿಂದ 22ರವರೆಗೆ ನಡೆದಿದ್ದ ಪರೀಕ್ಷೆಗೆ ಜಿಲ್ಲೆಯ 24 ಪರೀಕ್ಷಾ ಕೇಂದ್ರಗಳಿಂದ 15, 622ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು.
    ಚಿತ್ರದುರ್ಗ ತಾಲೂಕಲ್ಲಿ 9 ಕೇಂದ್ರಗಳು ಹಾಗೂ 6129 ವಿದ್ಯಾರ್ಥಿಗಳು,ಚಳ್ಳಕೆರೆ 3-2917,ಹಿರಿಯೂರು 4-1893,ಹೊಸದುರ್ಗ 4-2172,ಮೊಳಕಾಲ್ಮೂರು 2-1027 ಹಾಗೂ ಹೊಳಲ್ಕೆರೆ ತಾಲೂಕಿನ 2 ಕೇಂದ್ರಗಳಲ್ಲಿ 1484 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದರ
    ಎಲ್ಲ ಕೊಠಡಿಗಳಿಗೂ ಸಿಸಿ ಕ್ಯಾಮೆರಾ
    ಪ್ರಶ್ನೆ ಪತ್ರಿಕೆ ಬಂಡಲ್ ಮತ್ತು ಉತ್ತರ ಪತ್ರಿಕೆಗಳನ್ನು ಸಿಸಿ ಕ್ಯಾಮರಾದ ಕಣ್ಗಾವಲಿನಲ್ಲೇ ತೆರೆಯಬೇಕು ಮತ್ತು ಬಂಡಲ್ ಮಾಡಬೇಕು ಎಂದು ಕಟ್ಟುನಿಟ್ಟಿನ ಮಾರ್ಗಸೂಚಿಯೊಂದಿಗೆ ಈ ಬಾರಿ,ಕೇಂದ್ರಗಳ ಎಲ್ಲ ಕೊಠಡಿಗಳಲ್ಲೂ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಸೆಕೆಂಡ್ ಪಿಯುಸಿ ಪರೀಕ್ಷೆಯಲ್ಲಿ ಇದೇ ಮೊದಲ ಬಾರಿಗೆ ಪ್ರಾಯೋಗಿಕ ಹೊರತು ಪಡಿಸಿದ ವಿಷಯಗಳಿಗೆ 20 ಆಂತರಿಕ ಅಂಕಗಳನ್ನು ಮೀಸಲು ಇಡಲಾಗಿತ್ತು. ವಿದ್ಯಾರ್ಥಿಗಳ ನೋಂದಣಿ ಸಂಖ್ಯೆ ಈ ಬಾರಿ ಹನ್ನೊಂದು ಅಂಕೆಗಳಿದ್ದವು. ಉತ್ತರ ಪತ್ರಿಕೆ ಹಾಳೆಗಳ ಸಂಖ್ಯೆಯ ನ್ನು 34ರಿಂದ 28ಕ್ಕೆ ಕಡಿತಗೊಳಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts