More

    ಪಿಡಿಓ ಅಮಾನತಿಗೆ ಆಗ್ರಹ: ಹಣಗೆರೆ ಗ್ರಾಪಂ ಸದಸ್ಯನಿಂದ ತಾಲೂಕು ಕಚೇರಿ ಬಳಿ ಧರಣಿ

    ತೀರ್ಥಹಳ್ಳಿ: ಹಣಗೆರೆ ಗ್ರಾಪಂನಲ್ಲಿ ಅವ್ಯವಹಾರ ನಡೆದಿದ್ದು. ಇದಕ್ಕೆ ಕಾರಣರಾದ ಪಿಡಿಓ ಸಂತೋಷ್‌ಕುಮಾರ್ ಅವರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಪಡಿಸಿ ಗ್ರಾಪಂ ಸದಸ್ಯ ಸುಧೀರ್ ಸಂಕ್ಲಾಪುರ ತಾಲೂಕು ಕಚೇರಿ ಬಳಿ ಮಂಗಳವಾರ ಧರಣಿ ನಡೆಸಿದರು.
    ಖಾತೆ ದಾಖಲು ಸಂಬಂಧ ನಡೆಸಿದ ಫೋನ್ ಸಂಭಾಷಣೆಯನ್ನು ಪಿಡಿಓ ವೈರಲ್ ಮಾಡಿದ್ದು ಈ ಬಗ್ಗೆ ತನಿಖೆ ಆಗಿಲ್ಲ. ವಿವಿಧ ಅನುದಾನವನ್ನು ನಿಯಮ ಬಾಹಿರವಾಗಿ ಬಳಕೆ ಮಾಡಿದ್ದಾರೆ. ಪಿಡಿಓ ಅವರದ್ದೇ ಅಕ್ಷರದಲ್ಲಿ ನೂರಾರು ಬಿಲ್‌ಗಳು ಇವೆ. ನಿರ್ಣಯ ಪುಸ್ತಕವನ್ನು ತಿದ್ದಿ ವ್ಯವಸ್ಥೆಗೆ ಅಪಮಾನ ಮಾಡಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಸೇರಿದಂತೆ ಅಧಿಕಾರಿಗಳಿಗೆ ನೀಡಿದ ದೂರನ್ನು ಸ್ವೀಕರಿಸಿಲ್ಲ. ಅವ್ಯವಹಾರ ನಡೆದಿರುವ ಬಗ್ಗೆ ಆರು ತಿಂಗಳಿನಿಂದ ಹೋರಾಟ ಮಾಡುತ್ತಿದ್ದರು ಯಾವುದೇ ಪ್ರಯೋಜನವಾಗಿಲ್ಲ. ಪಂಚಾಯಿತಿಯ ಸ್ವತ್ತನ್ನು ಬಳಸಿ ಅಧ್ಯಕ್ಷರ ಮನೆಯ ಚಪ್ಪರ ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಿದರು.
    ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಕಾಂಗ್ರೆಸ್ ಮುಖಂಡ ಆರ್.ಎಂ. ಮಂಜುನಾಥ ಗೌಡ ಸರ್ಕಾರದ ಮಿತಿ ಮೀರಿದ ಭ್ರಷ್ಟಾಚಾರದಿಂದ ಜನಸಾಮಾನ್ಯರ ನಿತ್ಯದ ಬದುಕು ಬೀದಿಗೆ ಬಂದಿದೆ. ಶೇಕಡಾ 40ಕ್ಕೂ ಹೆಚ್ಚು ಪ್ರಮಾಣದಲ್ಲಿ ಕಮಿಷನ್ ತೆಗೆದುಕೊಳ್ಳುತ್ತಿದ್ದು ಕಾಮಗಾರಿಯ ಲೋಪಗಳು ಹೆಚ್ಚಾಗುತ್ತಿದೆ. ಸುಧೀರ್ ಹೋರಾಟದಲ್ಲಿ ನ್ಯಾಯ ಇದೆ ಎಂದು ಹೇಳಿದರು.
    ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಮುಡುಬ ರಾಘವೇಂದ್ರ, ಜಿಪಂ ಮಾಜಿ ಸದಸ್ಯರಾದ ಟಿ.ಎಲ್. ಸುಂದರೇಶ್, ಹಾರೋಗೊಳಿಗೆ ಪದ್ಮನಾಭ, ತಾಪಂ ಮಾಜಿ ಸದಸ್ಯರಾದ ಜೀನಾ ವಿಕ್ಟರ್, ಕಟ್ಟೇಹಕ್ಕಲು ಕಿರಣ್, ಆಮ್ ಆದ್ಮಿ ಪಕ್ಷದ ತಾಲ್ಲೂಕು ಅಧ್ಯಕ್ಷ ಮದನ್ ತನಿಕಲ್, ರೈತ ಸಂಘದ ಪ್ರಧಾನ ಕಾರ್ಯದರ್ಶಿ ಹೊರಬೈಲು ರಾಮಕೃಷ್ಣ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts