More

    ಪಿಕಾರ್ಡ್ ಬ್ಯಾಂಕ್​ಗೆ ಅವಿರೋಧ ಆಯ್ಕೆ

    ಲಕ್ಷ್ಮೇಶ್ವರ: ಪಟ್ಟಣದ ದಿ.ಲಕ್ಷ್ಮೇಶ್ವರ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್​ನ (ಪಿಕಾರ್ಡ್) ಆಡಳಿತ ಮಂಡಳಿಗೆ ಶುಕ್ರವಾರ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆ ಜರುಗಿತು.

    ಅಧ್ಯಕ್ಷ ಸ್ಥಾನಕ್ಕಾಗಿ ವಡವಿ ಹೊಸೂರ ಕ್ಷೇತ್ರದ ಬಸನಗೌಡ (ರಾಜು) ವೆಂಕನಗೌಡ ಪಾಟೀಲ ಮತ್ತು ಉಪಾಧ್ಯಕ್ಷ ಸ್ಥಾನಕ್ಕಾಗಿ ಯಳವತ್ತಿ ಕ್ಷೇತ್ರದ ರಾಮಪ್ಪ ನಿಂಗಪ್ಪ ಕಪಲಟ್ಟಿ ಅವರಿಂದ ಮಾತ್ರ ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಚುನಾವಣಾಧಿಕಾರಿ ಬಿ.ಆರ್. ನಿಡಗುಂದಿ ಇವರಿಬ್ಬರ ಅವಿರೋಧ ಆಯ್ಕೆ ಘೊಷಿಸಿದರು.

    ಒಟ್ಟು 15 ನಿರ್ದೇಶಕರನ್ನು ಹೊಂದಿರುವ ಬ್ಯಾಂಕಿನ ಆಡಳಿತ ಮಂಡಳಿಯ 8 ಸ್ಥಾನಗಳಿಗೆ ಜ.31 ರಂದು ನಡೆದ ಚುನಾವಣೆಯಲ್ಲಿ 4 ಕಾಂಗ್ರೆಸ್ ಮತ್ತು ಅವಿರೋಧವಾಗಿ 6 ಕಾಂಗ್ರೆಸ್ ಸೇರಿ ಒಟ್ಟು 10 ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಈ ಹಿನ್ನಲೆಯಲ್ಲಿ ಶುಕ್ರವಾರ ಜರುಗಿದ ಆಡಳಿತ ಮಂಡಳಿಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬ್ಯಾಂಕಿನ ಚುಕ್ಕಾಣಿ ಹಿಡಿಯಿತು.

    ಬಳಿಕ ಅಭಿನಂದನೆ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ಬಿ.ವಿ. ಪಾಟೀಲ ಅವರು, ಸಾಲ ಪಡೆದ ರೈತರು ಸ್ವಯಂ ಪ್ರೇರಣೆಯಿಂದ ಮರುಪಾವತಿ ಮಾಡಬೇಕು. ಇದರಿಂದ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿರುವ ಇತರ ರೈತರಿಗೆ ಸಾಲ ನೀಡಲು ಸಹಾಯಕವಾಗುತ್ತದೆ. ಎಲ್ಲ ಹಿರಿಯರ ಮಾರ್ಗದರ್ಶನದಲ್ಲಿ ಬ್ಯಾಂಕ್ ಅನ್ನು ಆರ್ಥಿಕವಾಗಿ ಪ್ರಗತಿಪಥದತ್ತ ಕೊಂಡ್ಯೊಯಲು ಪಕ್ಷಾತೀತ ಮತ್ತು ಜಾತ್ಯತೀತವಾಗಿ ಎಲ್ಲರೂ ಶ್ರಮಿಸೋಣ ಎಂದರು. ಸಭೆಯಲ್ಲಿ ನಿರ್ದೇಶಕರಾದ ರಾಜೇಶ್ವರಿ ಅಳಗವಾಡಿ, ವಾಣಿ ಹತ್ತಿ, ಮಂಜುನಾಥ ಕೋಳಿವಾಡ, ಗಿರೀಶ ಲಮಾಣಿ, ಬಸವರಾಜ ಬಸವರೆಡ್ಡಿ, ವಸಂತ ಜಗ್ಗಲರ, ಅಶೋಕ ಪಲ್ಲೇದ, ರಾಮಣ್ಣ ಹುಲಗೂರ, ಎಸ್.ಪಿ. ಪಾಟೀಲ, ದೇವಪ್ಪ ಪಟ್ಟೇದ, ಎಸ್.ಎನ್. ಪಾಟೀಲ, ಹನುಮಂತಪ್ಪ ಮಲ್ಲಿಕೇರಿ, ಶಿವಾನಂದ ಸುಗ್ನಳ್ಳಿ, ಕಾಂಗ್ರೆಸ್ ಮಖಂಡರಾದ ಎಸ್.ಪಿ. ಬಳಿಗಾರ, ಸೋಮಣ್ಣ ಮುಳಗುಂದ, ಹುಮಾಯೂನ ಮಾಗಡಿ, ಜಿ.ಆರ್.ಕೊಪ್ಪದ, ರಾಜರತ್ನ ಹುಲಗೂರ, ಶಿವನಗೌಡ ಪಾಟೀಲ, ಸೋಮಣ್ಣ ಬೆಟಗೇರಿ, ಫಕ್ಕಿರೇಶ ಮ್ಯಾಟೆಣ್ಣವರ, ರಾಮು ಗಡದವರ, ಕೋಟೆಪ್ಪ ವರ್ದಿ, ಶಂಕ್ರಣ್ಣ ದೇಸಾಯಿ, ಬಸವರೆಡ್ಡಿ ಹನಮರೆಡ್ಡಿ, ಮದನಲಾಲ್ ಭಾಪಣಾ, ಬಸಣ್ಣ ರೊಳ್ಳಿ, ನೀಲಪ್ಪ ಶರಶೂರಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts