More

    ಪಿಎಲ್​ಡಿ ಬ್ಯಾಂಕ್​ಗೆ ಬೀಗ ಹಾಕಿ ಪ್ರತಿಭಟನೆ

    ಅಕ್ಕಿಆಲೂರ, ಪಿಎಲ್​ಡಿ ಬ್ಯಾಂಕ್, ಪ್ರತಿಭಟನೆ, ಸಾಲ ವಸೂಲಿ, ರೈತ, ಟ್ರ್ಯಾಕ್ಟರ್ ಜಪ್ತಿ, Akkialur, PLD Bank, Protest, Loan, Farmer, Tractor foreclosure,

    ಅಕ್ಕಿಆಲೂರ: ಸಾಲ ವಸೂಲಿಗಾಗಿ ರೈತನ ಟ್ರ್ಯಾಕ್ಟರ್ ಜಪ್ತಿ ಮಾಡಿರುವುದನ್ನು ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸೋಮವಾರ ಪಟ್ಟಣದ ಪಿಎಲ್​ಡಿ ಬ್ಯಾಂಕ್​ಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

    ಸಮೀಪದ ಇನಾಂಯಲ್ಲಾಪುರ ಗ್ರಾಮದ ರೈತ ಪುಟ್ಟಪ್ಪ ಬನ್ನಿಹಳ್ಳಿ ಐದು ವರ್ಷಗಳ ಹಿಂದೆ ಪಿಎಲ್​ಡಿ ಬ್ಯಾಂಕ್​ನಲ್ಲಿ ಸಾಲ ಪಡೆದು ಟ್ರ್ಯಾಕ್ಟರ್ ಖರೀದಿಸಿದ್ದ. ಕಳೆದ ನಾಲ್ಕು ಕಂತುಗಳನ್ನು ತುಂಬಿರಲಿಲ್ಲ. 5 ಲಕ್ಷ ಸಾಲ ಪಡೆದಿದ್ದ ರೈತ ಈಗಾಗಲೇ ಕೆಲ ಕಂತುಗಳನ್ನು ತುಂಬಿದ್ದ. ಕಳೆದ ಮೂರು ವರ್ಷಗಳಿಂದ ಸಮರ್ಪಕ ಬೆಳೆ ಬಾರದೇ ಇದ್ದರಿಂದ ಸಾಲವನ್ನು ಮರುಪಾವತಿ ಮಾಡಿಲ್ಲ. ಬ್ಯಾಂಕ್​ನ ಕೇಂದ್ರ ಕಚೇರಿಯ ಅಧಿಕಾರಿಗಳ ಸೂಚನೆಯಂತೆ ಬ್ಯಾಂಕ್ ಅಧಿಕಾರಿಗಳು ರೈತನ ಟ್ರ್ಯಾಕ್ಟರ್ ಜಪ್ತಿ ಮಾಡಿದ್ದರು.

    ಇದನ್ನು ಖಂಡಿಸಿದ ರೈತ ಸಂಘಟನೆಯ ಕಾರ್ಯಕರ್ತರು ಬ್ಯಾಂಕ್​ಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು. ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ ಮಾತನಾಡಿ, ಕೃಷಿ ಚಟುವಟಿಕೆಗಳ ಮೇಲಿನ ಎಲ್ಲ ಸಾಲಗಳನ್ನು ಮನ್ನಾ ಮಾಡುವುದಾಗಿ ಘೊಷಿಸಿದ್ದ ಸರ್ಕಾರ, ಸಹಕಾರಿ ಬ್ಯಾಂಕ್​ಗಳಲ್ಲಿ, ಪಿಎಲ್​ಡಿ ಬ್ಯಾಂಕ್​ಗಳ ಸಾಲಮನ್ನಾ ಮಾಡುತ್ತಿಲ್ಲ ಎಂದು ಆರೋಪಿಸಿದರು.

    ಬ್ಯಾಂಕ್ ವ್ಯವಸ್ಥಾಪಕ ಎಂ.ಎಂ. ಸೊಪ್ಪಣ್ಣವರ ಮಾತನಾಡಿ, ರಾಜ್ಯ ಪಿಎಲ್​ಡಿ ಬ್ಯಾಂಕ್​ನಿಂದ ಸಾಲ ವಸೂಲಿ ಮಾಡಲು ಆದೇಶವಿದೆ. ನಿಯಮದಂತೆ ನಾವು ನಮ್ಮ ಕರ್ತವ್ಯ ಮಾಡಬೇಕಿದೆ. ಜಪ್ತಿ ಮಾಡಿದ ಟ್ರ್ಯಾಕ್ಟರನ್ನು ಕೇಂದ್ರ ಕಚೇರಿಯ ಅಧಿಕಾರಿಗಳ ಅನುಮತಿ ಪಡೆದು ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು. ನಂತರ ರೈತರು ಪ್ರತಿಭಟನೆ ಹಿಂಪಡೆದರು.

    ಸಂಘದ ತಾಲೂಕಾಧ್ಯಕ್ಷ ಮರಿಗೌಡ ಪಾಟೀಲ, ಉಪಾಧ್ಯಕ್ಷ ಮಹೇಶ ವಿರುಪಣ್ಣನವರ, ರುದ್ರಪ್ಪ ಹಣ್ಣಿ, ಸೋಮಣ್ಣ ಜಡೆಗೊಂಡರ, ಮಲ್ಲನಗೌಡ ಪಾಟೀಲ, ಸಿದ್ಧಲಿಂಗೇಶ ಸಿಂಧೂರ, ಚನ್ನಪ್ಪ ಪಾವಲಿ, ಅಜ್ಜನಗೌಡ ಪಾಟೀಲ, ಷಣ್ಮುಖಪ್ಪ ಅಂದಲಗಿ, ಚನ್ನಬಸನಗೌಡ ಬನ್ನಿಹಳ್ಳಿ, ಕೊಟ್ರಪ್ಪ ಶೆಟ್ಟರ, ರಾಜು ಯಮಕನಮರಡಿ, ಕಾರ್ತಿಕ ಪಸಾರದ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts