More

    ಪಾಳು ಬಿದ್ದ ಅಂಬೇಡ್ಕರ್ ಭವನ

    ರಾಣೆಬೆನ್ನೂರ: ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿ ಸಮುದಾಯದ ಜನತೆಯ ಅನುಕೂಲಕ್ಕಾಗಿ ನಗರ, ಗ್ರಾಮಗಳಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನ ನಿರ್ವಿುಸುತ್ತಿದೆ. ಆದರೆ, ಸಮುದಾಯ ಭವನ ನಿರ್ವಣವಾಗಿ ವರ್ಷಗಳೇ ಕಳೆದರೂ ಅಧಿಕಾರಿಗಳ ನಿರ್ಲಕ್ಷ್ಯಂದ ಬಳಕೆಗೆ ದೊರೆಯುತ್ತಿಲ್ಲ.

    ಇಲ್ಲಿಯ ಶ್ರೀರಾಮ ನಗರದಲ್ಲಿ ರೂ. 1.67 ಕೋಟಿ ವೆಚ್ಚದಲ್ಲಿ ನಿರ್ವಿುಸಿದ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನ ಈಗ ನಿರುಪಯುಕ್ತವಾಗಿ ಬಿದ್ದಿದೆ. ಕಟ್ಟಡ ನಿರ್ವಿುಸಿ ವರ್ಷಗಳೇ ಉರುಳಿದರೂ ಇಂದಿಗೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಹೀಗಾಗಿ, ಸಮಾಜದ ಜನತೆ ಸಭೆ, ಕಾರ್ಯಕ್ರಮ ನಡೆಸಲು ಪರದಾಡುವಂತಾಗಿದೆ.

    ರಾಜ್ಯ ಸರ್ಕಾರ 2012-13ನೇ ಸಾಲಿನ ಪರಿಶಿಷ್ಟ ಜಾತಿ ಉಪಯೋಜನೆ ಕ್ರೋಡಿಕೃತ ಅನುದಾನದಲ್ಲಿ ಕಟ್ಟಡ ನಿರ್ವಿುಸಿದೆ. ಸಮಾಜ ಕಲ್ಯಾಣ ಇಲಾಖೆಯವರು ಜಿಲ್ಲಾ ನಿರ್ವಿುತಿ ಕೇಂದ್ರಕ್ಕೆ ಕಟ್ಟಡ ನಿರ್ವಿುಸಲು ಗುತ್ತಿಗೆ ನೀಡಿದ್ದರು. ನಿರ್ವಿುತಿ ಕೇಂದ್ರದವರು ಆರು ವರ್ಷಗಳ ಕಾಲ ಕಾಮಗಾರಿ ನಡೆಸಿ ಕಳೆದ ವರ್ಷ ಸಮಾಜ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಿದ್ದಾರೆ. ಆದರೆ, ಕೋಟಿ ರೂ. ಖರ್ಚು ಮಾಡಿದರೂ ಕಟ್ಟಡಕ್ಕೆ ಕಾಂಪೌಂಡ್ ನಿರ್ವಿುಸಿಲ್ಲ.

    ಸದ್ಯ ಭವನದಲ್ಲಿ ನೀರಿನ ವ್ಯವಸ್ಥೆ, ತಡೆಗೋಡೆ, ಉದ್ಯಾನವಿಲ್ಲದ ಕಾರಣ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಭವನದ ಉದ್ಘಾಟನೆಗೆ ಮುಂದಾಗುತ್ತಿಲ್ಲ. ಇದರಿಂದ ಸಮುದಾಯ ಭವನದ ಅಕ್ಕಪಕ್ಕ ಕಸಕಡ್ಡಿ, ಗಿಡ ಗಂಟೆಗಳು ಬೆಳೆದು ಪಾಳು ಬಿದ್ದಿದೆ. ಸಮುದಾಯ ಭವನದ ಸಮೀಪ ಯಾರೊಬ್ಬರೂ ಸುಳಿಯದ ಸ್ಥಿತಿ ನಿರ್ವಣವಾಗಿದೆ. ಹಂದಿಗಳು ವಾಸತಾಣವನ್ನಾಗಿ ಮಾಡಿಕೊಂಡಿವೆ. ರಾತ್ರಿ ಸಮಯದಲ್ಲಿ ಮದ್ಯ ವ್ಯಸನಿಗಳು ಅಡ್ಡೆಯನ್ನಾಗಿ ಮಾಡಿಕೊಂಡಿದ್ದಾರೆ.

    ಅಧಿಕಾರಿಗಳ ನಿಷ್ಕಾಳಜಿಯಿಂದ ಸಂಪೂರ್ಣ ಕಟ್ಟಡ ಪಾಳು ಬೀಳುವಂತಾಗಿದೆ. ಸ್ಥಳೀಯ ಶಾಸಕರು ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಕೂಡಲೆ ಸೂಕ್ತ ಕ್ರಮ ಕೈಗೊಂಡು ಭವನ ಉದ್ಘಾಟನೆಗೆ ಮುಂದಾಗಬೇಕು ಎಂದು ಸಮಾಜದ ಮುಖಂಡರು ಆಗ್ರಹಿಸಿದ್ದಾರೆ.

    ಅನೇಕ ಹೋರಾಟ, ಒತ್ತಾಯದ ಮೇರೆಗೆ ಕೋಟ್ಯಂತರ ರೂ. ಖರ್ಚು ಮಾಡಿ ಅಂಬೇಡ್ಕರ್ ಭವನ ನಿರ್ವಿುಸಲಾಗಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯಂದ ಭವನವಿಂದು ಪಾಳು ಬಿದ್ದಿದೆ. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಕೂಡಲೇ ಈ ಕುರಿತು ಸೂಕ್ತ ಕ್ರಮ ಕೈಗೊಂಡು ಭವನ ಉದ್ಘಾಟಿಸಬೇಕು. ಇಲ್ಲವಾದರೆ ಅವರ ವಿರುದ್ಧ ಪ್ರತಿಭಟಿಸಬೇಕಾಗುತ್ತದೆ.
    | ಮೈಲಪ್ಪ ದಾಸಪ್ಪನವರ, ಡಿಎಸ್​ಎಸ್ ಮುಖಂಡ

    ಡಾ. ಬಿ.ಆರ್. ಅಂಬೇಡ್ಕರ್ ಭವನ ಕಟ್ಟಡಕ್ಕೆ ಕಾಂಪೌಂಡ್ ನಿರ್ಮಾಣ ಮಾಡಿ ಉದ್ಘಾಟನೆ ಮಾಡಬೇಕು ಎಂದು ಮುಂದೂಡಲಾಗಿತ್ತು. ಆದರೆ, ಕಾಂಪೌಂಡ್ ನಿರ್ಮಾಣ ಎಸ್ಟಿಮೇಟ್​ನಲ್ಲಿ ಇಲ್ಲದ ಕಾರಣ ಈಗ ಪ್ರತ್ಯೇಕವಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದು ಮಂಜೂರಾಗಿ ಬರುವುದು ಸ್ವಲ್ಪ ತಡವಾಗಬಹುದು. ಆದ್ದರಿಂದ ಇನ್ನೊಂದು ವಾರದಲ್ಲಿ ಶಾಸಕರಿಂದ ದಿನಾಂಕ ತೆಗೆದುಕೊಂಡು ಭವನ ಉದ್ಘಾಟಿಸಲಾಗುವುದು.
    | ರೇಷ್ಮಾ ಕೌಸರ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts