More

    ಪಾಲಿ ಹೌಸ್​ನಲ್ಲಿ ವೀಳ್ಯದೆಲೆ

    ಮುಂಡಗೋಡ: ಜಿಲ್ಲೆಯ ಮುಂಡಗೋಡ ತಾಲೂಕಿನ ಅರಶಿಣಗೇರಿ ಗ್ರಾಮದ ಹೇಮಲಪ್ಪ ಲಮಾಣಿ ಎಂಬುವರು ತಮ್ಮ ಜಮೀನಿನ 10 ಗುಂಟೆ ಜಾಗೆಯಲ್ಲಿ ಪಾಲಿಹೌಸ್ ನಿರ್ವಿುಸಿ ವೀಳ್ಯದೆಲೆ ಬಳ್ಳಿಗಳನ್ನು ಬೆಳೆಸಿದ್ದಾರೆ. ಇದು ತಾಲೂಕಿನಲ್ಲಿಯೇ ಮೊದಲ ಪ್ರಯತ್ನವಾಗಿರುವುದು ವಿಶೇಷ.

    ಕ್ಯಾಪ್ಸಿಕಂ ಬಿಟ್ಟು ವೀಳ್ಯದೆಲೆ: ಪಾಲಿಹೌಸ್ ಬಗ್ಗೆ ತೋಟಗಾರಿಕೆ ಇಲಾಖೆಯಿಂದ ಮಾಹಿತಿ ಪಡೆದು ಕ್ಯಾಪ್ಸಿಕಂ ಬೆಳೆಯುವ ಉದ್ದೇಶದಿಂದ 2018-19ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆಯ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಅಡಿಯಲ್ಲಿ ಒಟ್ಟು 11 ಲಕ್ಷ ರೂ. ಅನುದಾನದಲ್ಲಿ ಪಾಲಿಹೌಸ್ ಆರಂಭಿಸಿದರು. ಹಸಿರು, ಹಳದಿ ಮತ್ತು ಕೆಂಪು ಬಣ್ಣದ 9 ಟನ್ ಕ್ಯಾಪ್ಸಿಕಂ ಬೆಳೆದರು. ಆದರೆ, ಕ್ಯಾಪ್ಸಿಕಂ ಮಾರಾಟಕ್ಕೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ದೊರೆಯಲಿಲ್ಲ. ಹೀಗಾಗಿ, ವೀಳ್ಯದೆಲೆ ಬೆಳೆಯಲು ಮುಂದಾಗಿದ್ದಾರೆ.

    ದಿನಕ್ಕೆ 15 ಸಾವಿರ ಎಲೆಗಳ ಕಟಿಂಗ್: ವೀಳ್ಯದೆಲೆ ಕೃಷಿ ಆರಂಭಿಸಲು ಚಿಕ್ಕೋಡಿಗೆ ಹೋಗಿ ವೀಳ್ಯದೆಲೆ ಬೆಳೆಯನ್ನು ನೋಡಿಕೊಂಡು ಬಂದರು. ಶಿಗ್ಗಾಂವಿ ತಾಲೂಕಿನ ಗಂಗ್ಯಾನೂರಿನಿಂದ 1200 ಬಳ್ಳಿಯ ಕಟಿಂಗ್ಸ್ ತಂದು ನೆಟ್ಟರು. ಬೇರೆ ಬೆಳೆಗಳನ್ನು ಹೋಲಿಸಿದರೆ ವೀಳ್ಯದೆಲೆ ಪ್ರತಿ ದಿವಸ ಆದಾಯ ಪಡೆಯುವ ಬೆಳೆ. ಸದ್ಯದಲ್ಲಿ ದಿನಕ್ಕೆ 15 ಸಾವಿರ ಎಲೆಗಳನ್ನು ಕಟ್ ಮಾಡಿ, 5ರಿಂದ 7 ಸಾವಿರ ರೂ.ವರೆಗೆ ಆದಾಯ ಗಳಿಸುತ್ತಿದ್ದಾರೆ. ಇದು ಹಂಗಾಮಿನ ಆಧಾರದಲ್ಲಿ ಇದು ವ್ಯತ್ಯಾಸವಾಗುತ್ತದೆ.

    ರೋಗನಿರೋಧಕ ಶಕ್ತಿ ಹೆಚ್ಚಿಸುವ ಮತ್ತು ತಿನ್ನುವ ಪದಾರ್ಥವಾಗಿರುವುದರಿಂದ ಔಷಧ ಸಿಂಪಡಣೆ ಮಾಡುವುದಿಲ್ಲ. ಕೊಟ್ಟಿಗೆ ಗೊಬ್ಬರ ಹಾಕಿದರೆ ಸಾಕು. ಸರ್ಕಾರದಿಂದ ಸಾಕಷ್ಟು ಸಹಾಯಧನ ದೊರೆತಿದೆ. ಸವಣೂರ, ಶಿಗ್ಗಾಂವಿ, ಬಂಕಾಪುರ ಮತ್ತು ಧಾರವಾಡ ಎಪಿಎಂಸಿಯಲ್ಲಿ ಮಾರುಕಟ್ಟೆಗಳಿವೆ. ನನ್ನ ಆದಾಯ ನೋಡಿಕೊಂಡು ಇನ್ನಿತರ ರೈತರು ವೀಳ್ಯದೆಲೆ ಬೆಳೆಯಲು ಉತ್ಸುಕರಾಗಿದ್ದಾರೆ.

    | ಹೇಮಲಪ್ಪ ಲಮಾಣಿ ಅರಶಿಣಗೇರಿ ಗ್ರಾಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts