More

    ಪಾಲಿಕೆಯಲ್ಲಿ ಭ್ರಷ್ಟಾಚಾರ, ಆಡಳಿತ ಪಕ್ಷದಿಂದಲೇ ಗಂಭಿರ ಆರೋಪ

    ಹುಬ್ಬಳ್ಳಿ: ಹುಬ್ಬಳ್ಳಿಧಾರವಾಡ ಮಹಾನಗರ ಪಾಲಿಕೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ದುಡ್ಡು ಕೊಟ್ಟರೆ ಮಾತ್ರ ಸಾರ್ವಜನಿಕ ಕೆಲಸ ಮಾಡುತ್ತಾರೆ. ಇ-ಸ್ವತ್ತು ನೋಂದಣಿಗೆ 10- 20 ಸಾವಿರ ರೂ. ಹಣ ಕೇಳುತ್ತಾರೆ. ಪಾಲಿಕೆ ವಲಯ ಕಚೇರಿಗಳಲ್ಲಿ ಏಜೆಂಟ್​ರು ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿ ಬಂದವು.

    ಶುಕ್ರವಾರದಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಆಡಳಿತಾರೂಢ ಬಿಜೆಪಿ ಸದಸ್ಯರೇ ಈ ಆರೋಪ ಮಾಡಿ ಆಯುಕ್ರರನ್ನು ತರಾಟೆಗೆ ತೆಗೆದುಕೊಂಡರು.

    ಬಿಜೆಪಿಯ ಶಿವು ಹಿರೇಮಠ ಮಾತನಾಡಿ, ದೂರ ಸಂಪರ್ಕ ಭೂಗತ ಕೇಬಲ್ ಅಳವಡಿಕೆಗೆ 5 ಕಿಲೋ ಮೀಟರ್ ಗೆ ಪರವಾನಿಗೆ ನೀಡಿ 15-20 ಕಿ.ಮೀ. ಗೆ ಅವಕಾಶ ನೀಡಲಾಗಿದೆ. ವಲಯ ಕಚೇರಿ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆ. ಇ-ಆಸ್ತಿ ದಾಖಲೀಕರಣಕ್ಕೆ 15-20 ಸಾವಿರ ರೂ. ಕೇಳುತ್ತಾರೆ. ವಲಯ ಕಚೇರಿಗಳಲ್ಲಿ ಹಣ ಸಂಗ್ರಹಿಸಲು ಏಜೆಂಟ್ ರು ಫಿಕ್ಸ್ ಆಗಿದ್ದಾರೆ. ಒಂದು ಹಂತದವರೆಗೆ ನಾವು ತಾಳ್ಮೆ ವಹಿಸಿಕೊಳ್ಳಬಹುದು. ಇನ್ನಉ ಮುಂದೆ ಕಷ್ಟವಾಗುತ್ತದೆ ಎಂದರು.

    ಪಾಲಿಕೆಯ ಆದಾಯ ಸಂಗ್ರಹ ಹೆಚ್ಚಳ ಕುರಿತು ಸಭೆಗೆ ಗಮನ ಸೆಳೆಯುವ ಸೂಚನೆ ತಂದ ಬಿಜೆಪಿಯ ವೀರಣ್ಣ ಸವಡಿ ಮಾತನಾಡಿ, ಆಡಳಿತ ಪಕ್ಷದ ಸದಸ್ಯನಾಗಿಯೇ ನಾನು ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದೇನೆ. ಆಯುಕ್ತರಿಗೆ 2 ತಿಂಗಳ ಗಡುವು ನೀಡುತ್ತಿದ್ದೇನೆ. ಅದಾಯ ಸಂಗ್ರಹಕ್ಕೆ ಕ್ರಮ ಕೈಗೊಳ್ಳದಿದ್ದರೆ ನಾವು ಸುಮ್ಮನೆ ಕೂಡ್ರುವುದಿಲ್ಲ ಎಂದರು.

    ತನಿಖೆಗೆ ಆದೇಶ

    ಸದಸ್ಯರಿಂದ ವ್ಯಕ್ತವಾದ ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಪಾಲಿಕೆಯ ಉಪ ಆಯುಕ್ತ (ಕಂದಾಯ) ಆನಂದ ಕಲ್ಲೊಳಿಕರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಂಡಿರುವ ಬಗ್ಗೆ 15 ದಿನಗಳಲ್ಲಿ ವರದಿ ಸಲ್ಲಿಸುವಂತೆ ಮೇಯರ್ ಈರೇಶ ಅಂಚಟಗೇರಿ ಅವರು ಆಯುಕ್ತರಿಗೆ ಸೂಚಿಸಿದರು.

    ಆಟೋ ಟಿಪ್ಪರ ವಾಹನದ ಹೈಡ್ರಾಲಿಕ್ ಡೋರ್ ಬಡಿದು ಮೃತಪಟ್ಟ ಪಾಲಿಕೆ ಪೌರ ಕಾರ್ವಿುಕ (ಚಾಲಕ) ವಸಂತ ಇಳಕಲ್ ಪರವಾಗಿ ಸಭೆಯಲ್ಲಿ ದುಃಖ ಸೂಚಕ ಗೊತ್ತುವಳಿ ಮಂಡಿಸಿ ಮೌನಾಚರಣೆ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts