More

    ಪಾರ್ಶ್ವ ಸೂರ್ಯಗ್ರಹಣ ವೀಕ್ಷಣೆ ಮಾತ್ರ ಸಾಧ್ಯ

    ಭದ್ರಾವತಿ: ಜೂ.21ರ ಬೆಳಗ್ಗೆ 10 ಗಂಟೆ, 17 ನಿಮಿಷ 55 ಸೆಕೆಂಡ್​ಗಳಿಗೆ ಕಂಕಣ ಸೂರ್ಯಗ್ರಹಣ ಸಂಭವಿಸಲಿದ್ದು ನಾವು ಪಾರ್ಶ್ವ ಸೂರ್ಯಗ್ರಹಣ ಮಾತ್ರ ನೋಡಬಹುದಾಗಿದೆ ಎಂದು ಖಗೋಳ ತಜ್ಞ ಹರೋನಹಳ್ಳಿಸ್ವಾಮಿ ತಿಳಿಸಿದರು.

    ಚಂದ್ರನ ತೋರಿಕೆಯ ಗಾತ್ರ ಸೂರ್ಯನ ತೋರಿಕೆಯ ಗಾತ್ರಕ್ಕಿಂತ ಕಡಿಮೆ ಇದ್ದು ಚಂದ್ರ ಸೂರ್ಯನ ಪೂರ್ಣ ಮುಖವನ್ನು ಮುಚ್ಚುವುದಿಲ್ಲ. ಬದಲಾಗಿ ಸೂರ್ಯನ ಅಂಚು ಬಳೆಯಾಕಾರದಲ್ಲಿ ಗೋಚರಿಸುವ ದೃಶ್ಯವೇ ಕಂಕಣ ಸೂರ್ಯಗ್ರಹಣ. ಆದರೆ ನಮಗೆ ಆ ದೃಶ್ಯ ಕಾಣುವುದಿಲ್ಲ. ಬದಲಾಗಿ ಸೂರ್ಯನ ಶೇ.40 ಭಾಗ ಚಂದ್ರನಿಂದ ಮುಚ್ಚಲ್ಪಟ್ಟ ಪಾರ್ಶ್ವ ಸೂರ್ಯಗ್ರಹಣ ನೋಡಬಹುದು ಎಂದು ಸುದ್ದಿಗಾರರಿಗೆ ಮಾಹಿತಿ ನೀಡಿದರು.

    ಬೆಳಗ್ಗೆ 10 ಗಂಟೆ 17 ನಿಮಿಷಕ್ಕೆ ಆರಂಭವಾಗುವ ಗ್ರಹಣ ಮಧ್ಯಾಹ್ನ 1.31ರವರೆಗೂ ಗೋಚರಿಸಲಿದ್ದು 3 ಗಂಟೆ 19 ನಿಮಿಷಗಳ ಕಾಲ ಗ್ರಹಣ ಜರುಗಲಿದೆ. ಗ್ರಹಣವನ್ನು ಬರಿಗಣ್ಣಿನಿಂದ, ಎಕ್ಸ್​ರೇ, ಬೈನಾಕ್ಯುಲರ್, ವೆಲ್ಡಿಂಗ್ ಗ್ಲಾಸ್​ಗಳ ಮೂಲಕವೂ ನೋಡಬಾರದು. ವೈಜ್ಞಾನಿಕ ಸಂಸ್ಥೆಯಿಂದ ದೊರೆಯುವ ಅಧಿಕೃತ ಸೌರಕನ್ನಡಕದ ಮೂಲಕ ನೋಡಬಹುದು ಎಂದು ಹೇಳಿದರು.

    ಸೂರ್ಯಗ್ರಹಣವನ್ನು ನಿರ್ದಿಷ್ಟ ಪರಿಕರಗಳ ಸಹಾಯದಿಂದ ವೀಕ್ಷಿಸಲು ಯಾವುದೇ ಭಯ ಬೇಡ. ಅದು ಪ್ರಕೃತಿ ಸಹಜ ನೆರಳು ಬೆಳಕಿನ ಆಟವಷ್ಟೇ. 2020ರಲ್ಲಿ 2 ಸೂರ್ಯಗ್ರಹಣ ಹಾಗೂ 4 ಚಂದ್ರಗ್ರಹಣ ಸೇರಿ ಒಟ್ಟು 6 ಗ್ರಹಣಸಂಭವಿಸಲಿವೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts