More

    ಪಾಟೀಲರಿಂದ ಹಸಿರು ಕ್ರಾಂತಿಗೆ ನಾಂದಿ

    ಕಾಗವಾಡ, ಬೆಳಗಾವಿ: ನೀರಾವರಿ, ಕೃಷಿ, ಆಹಾರ ಉತ್ಪಾದನೆ ಅಧ್ಯಯನಕ್ಕೆ ವಿದೇಶಗಳಿಗೆ ಹೋಗುವ ಬದಲು ಕಾಗವಾಡ ವಿಧಾನಸಭಾ ಮತಕ್ಷೇತ್ರದಲ್ಲಿ ಸಂಚರಿಸಿ, ಶಾಸಕ ಶ್ರೀಮಂತ ಪಾಟೀಲ ಅವರು ಮಾಡಿರುವ ಸಾಧನೆಗಳ ಅಧ್ಯಯನ ಮಾಡಿದರೆ ಸಾಕು ಎಂದು ಸರ್ಕಾರಿ ಭರವಸೆಗಳ ಸಮಿತಿ ಅಧ್ಯಕ್ಷ ಹಾಗೂ ಉಡುಪಿ ಶಾಸಕ ಕೆ.ರಘುಪತಿ ಭಟ್ ಹೇಳಿದರು.

    ತಾಲೂಕಿನ ಮದಬಾವಿ, ಸಂಬರಗಿ, ಗುಂಡೇವಾಡಿ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಶುಕ್ರವಾರ ವೀಕ್ಷಿಸಿ ಮಾತನಾಡಿದ ಅವರು, ತಾಲೂಕಿನ ರೈತರಿಗೆ ಅನುಕೂಲವಾಗಬೇಕು ಎಂಬ ಉದ್ದೇಶದಿಂದ ಸುಮಾರು 20 ಕಿ.ಮೀ ದೂರದ ಕೃಷ್ಣಾ ನದಿಯಿಂದ ಸ್ವಂತ ಖರ್ಚಿನಲ್ಲಿ ಏತ ನೀರಾವರಿ ಯೋಜನೆ ಜಾರಿಗೆ ತರುವ ಮೂಲಕ ಹಸಿರು ಕ್ರಾಂತಿಗೆ ನಾಂದಿ ಹಾಡಿದ್ದಾರೆ ಎಂದು ತಿಳಿಸಿದರು. ದೇಶದ ಆರ್ಥಿಕ ವ್ಯವಸ್ಥೆ ಹಾಗೂ ಆಹಾರ ಭದ್ರತೆಗೆ ರೈತರ ಮೂಲಕ ಕೈ ಜೋಡಿಸಿದ್ದಾರೆ.

    ಕೃಷಿ, ನೀರಾವರಿ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ವಿಧಾನ ಸಭೆಯಲ್ಲಿ ಚರ್ಚಿಸುವುದಾಗಿ ತಿಳಿಸಿದರು. ಮದಬಾವಿ ಪ್ರಗತಿಪರ ರೈತ ದೀಲಿಪ ಪವಾರ ಅವರ ಲಿಫ್ಟ್ ಇರಿಗೇಷನ್ ಕೆರೆ, ಸಂಬರಗಿಯಲ್ಲಿರುವ ಅಗ್ರಾಣಿ ಬಾಂದಾರ ವೀಕ್ಷಿಸಿದರು. ನಂತರ ಗುಂಡೇವಾಡಿಯ ಏತ ನೀರಾವರಿ ಕೆರೆ ವೀಕ್ಷಣೆ ಮಾಡಿದರು. ಶಾಸಕರಾದ ಸೋಮನಗೌಡ ಪಾಟೀಲ, ಸುಕುಮಾರ ಶೆಟ್ಟಿ, ಡಾ. ಶ್ರೀನಿವಾಸ ಮೂರ್ತಿ, ರಾಜ್ಯ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ, ಚಿಕ್ಕೋಡಿ ಎಸಿ ಸಂತೋಷ ಕಾಮಗೌಡ, ಬಿ.ಆರ್.ರಾಠೋಡ, ಅಥಣಿ ಶುಗರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ಪಾಟೀಲ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts