More

    ಪವರ್ ಫೈಟರ್ಸ್‌ಗೆ ಒಲಿದ ಬೆಳ್ಳಿಕಪ್- ಸಿಲ್ವರ್ ಕೆಪಿಎಲ್ ಟೂರ್ನಿಗೆ ತೆರೆ

    ದಾವಣಗೆರೆ: ಪವರ್ ಫೈಟರ್ಸ್ ತಂಡವು, ಹೊರವಲಯದ ಹಳೇ ಕುಂದುವಾಡದಲ್ಲಿ ಮೂರು ದಿನ ಹಮ್ಮಿಕೊಂಡಿದ್ದ ಸಿಲ್ವರ್ ಕೆಪಿಎಲ್ ಕ್ರಿಕೆಟ್ ಟೂರ್ನಿಯಲ್ಲಿ ಬೆಳ್ಳಿ ಕಪ್ ಪ್ರಶಸ್ತಿ ತನ್ನದಾಗಿಸಿಕೊಂಡಿತು.
    ಮನಾ ಯುವ ಬ್ರಿಗೇಡ್ ಹಾಗೂ ಜನತಾ ರಕ್ಷಣಾ ವೇದಿಕೆ ಸಹಯೋಗದಲ್ಲಿ ಹಳೇ ಕುಂದುವಾಡದ ಶ್ರೀ ಆಂಜನೇಯ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಟೂರ್ನಿಯಲ್ಲಿ ಪ್ರಶಸ್ತಿಗಾಗಿ 10 ತಂಡಗಳು ಪೈಪೋಟಿ ನಡೆಸಿದ್ದವು.
    ಕುಂದುವಾಡ ಯೋಧಾಸ್, ಪವರ್ ಫೈಟರ್ಸ್ ನಡುವೆ ಭಾನುವಾರ ಸಂಜೆ ಅಂತಿಮ ಪಂದ್ಯ ನಡೆಯಿತು. ಮೊದಲು ಬ್ಯಾಟಿಂಗ್ ಮಾಡಿದ ಕುಂದುವಾಡ ಯೋಧಾಸ್ ತಂಡ 4 ಓವರ್‌ನಲ್ಲಿ 29 ರನ್ ಗಳಿಸಿತು. ಪವರ್ ಫೈಟರ್ಸ್ ಹತ್ತು ಎಸೆತ (2.2 ಓವರ್)ಬಾಕಿ ಇರುವಂತೆಯೇ ಗುರಿ ತಲುಪಿ ಗೆಲುವಿನ ನಗೆ ಬೀರಿತು. ಟೂರ್ನಿಯುದ್ದಕ್ಕೂ ಆಡಿದ ಏಳು ಪಂದ್ಯದಲ್ಲೂ ವಿಜಯಶಾಲಿಯಾದ ಈ ತಂಡ ಪ್ರಶಸ್ತಿ ಅಲಂಕರಿಸಿತು. ಕುಂದುವಾಡ ಯೋಧಾಸ್ ದ್ವಿತೀಯ, ಆರ್‌ಎಕ್ಸ್ ಟಗರು ತಂಡ ತೃತೀಯ ಸ್ಥಾನ ಪಡೆದವು.
    ಚಾಂಪಿಯನ್ ಟ್ರೋಫಿಗಾಗಿ ನಡೆದ ವಿಶೇಷ ಪಂದ್ಯಾವಳಿಯಲ್ಲಿ ಹಳೇ ಕುಂದುವಾಡವನ್ನು ಮಣಿಸಿದ ಹೊಸ ಕುಂದುವಾಡ ತಂಡ ಗೆಲುವು ಸಾಧಿಸಿತು.
    ಟೂರ್ನಿಗೆ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್, ಬಿಜೆಪಿ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ ಚಾಲನೆ ನೀಡಿದ್ದರು. ಮಾಜಿ ಮೇಯರ್ ಎಚ್.ಎನ್. ಗುರುನಾಥ್, ಎಪಿಎಂಸಿ ಮಾಜಿ ಅಧ್ಯಕ್ಷ ಎಚ್.ಜಿ.ಗಣೇಶಪ್ಪ, ಗೌಡ್ರು ಬಸವರಾಜಪ್ಪ ಇತರರು ಸಹಕರಿಸಿದರು.
    ಸಮಾರೋಪದಲ್ಲಿ ನರಸಪ್ಪರ ಶಿವಪ್ಪ, ಮಿಟ್ಲಕಟ್ಟೆ ಚಂದ್ರಪ್ಪ, ಮಂಜಪ್ಪ ಲೋಕಿಕೆರೆ, ಸಿದ್ದಲಿಂಗಪ್ಪ ಇತರರು ಬಹುಮಾನ ವಿತರಿಸಿದರು. ಜನತಾ ರಕ್ಷಣಾ ವೇದಿಕೆ ಅಧ್ಯಕ್ಷ ಮಧು ನಾಗರಾಜ್, ಪ್ರಧಾನ ಕಾರ್ಯದರ್ಶಿ ರಾಜು ಕರೂರು, ಖಜಾಂಚಿ ಎಚ್.ಬಿ.ನಾಗರಾಜು, ಆಟಗಾರ ಮಾರುತೇಶ್ ಇತರರಿದ್ದರು.
    ———-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts