More

    ಪವರ್ ಗ್ರಿಡ್ ಕಾರ್ಪೋರೇಷನ್ 25 ಕೋಟಿ ರೂ.‌ನೆರವು

    ದಾವಣಗೆರೆ: ಪವರ್ ಗ್ರಿಡ್ ಕಾರ್ಪೋರೇಷನ್ ಆಫ್ ಇಂಡಿಯಾ ಸಂಸ್ಥೆಯಿಂದ ದಾವಣಗೆರೆ ಜಿಲ್ಲೆಗೆ 22.5 ಕೋಟಿ ರೂ.‌ಸೇರಿ ವಿವಿಧೆಡೆಯ ಅಭಿವೃದ್ಧಿ ಕಾಮಗಾರಿಗಳಿಗೆ 25 ಕೋಟಿ ರೂ.‌ಮಂಜೂರಾಗಿದೆ. ಇದೇ ಪ್ರಥಮ‌ಬಾರಿಗೆ ಈ ಅನುದಾನ ಮಂಜೂರಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಹೆಚ್ಚು ಅನುಕೂಲ ಕಲ್ಪಿಸಲಾಗುತ್ತಿದೆ ಎಂದುಪವರ್ ಗ್ರಿಡ್ ಕಾರ್ಪೋರೇಷನ್ ಆಫ್ ಇಂಡಿಯಾ‌ನಿರ್ದೇಶಕ ಕೆ.ಎನ್.‌ಓಂಕಾರಪ್ಪ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ದಾವಣಗೆರೆಯ ಸಿ.ಜಿ.ಆಸ್ಪತ್ರೆ ವೈದ್ಯಕೀಯ ಪರಿಕರಗಳಾದ ಅಲ್ಲಾಂಗ್ ಲೆಟರೇಟರ್, ಲ್ಯಾಕ್ಟೋಪಿಕ್ ಯೂನಿಟ್, ಸರ್ಜಿಕಲ್ ಇನ್‌ಸ್ಟು ಮೇಟ್ಸ್, ಎಂಡೋಸ್ಕೋಪಿ ಉಪಕರಣಗಳಿಗೆ 3.83 ಕೋಟಿ ರೂ, ಸಿಗಲಿದೆ. ಸಿಆರ್ಆರ್ ಶಾಲೆಗೆ ಒಂದು ಬಸ್ ಕೊಡಿಸಲಾಗಿದ್ದು, ಶೀಘ್ರ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ ಎಂದರು.

    ಮಾಯಕೊಂಡ ಹೋಬಳಿಯಲ್ಲಿ 7 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೇಲ್ದರ್ಜೆಗೆ 78 ಲಕ್ಷ‌ರೂ.‌ ನೀಡಲಾಗಿದೆ. ಮಹಾನಗರ ಪಾಲಿಕೆಯವರು ನಗರದ ಪಾರ್ಕ್, ಜಿಮ್ ಹಾಗೂ ಇತರೆ ಯೋಜನೆಗೆ 130 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದರು.

    ಎಚ್.ಎಸ್‌.ಎಸ್‌.ಲಿಂಗರಾಜ್‌, ಗಣೇಶ್‌ ಕರೂರು, ಪದ್ಮನಾಭಶೆಟ್ಟಿ, ಡಿ.ಎಸ್‌.ಜಯಣ್ಣ, ಆರ್.ಪ್ರತಾಪ್, ಅಜ್ಜಯ್ಯ, ಚಂದ್ರಪ್ಪ, ಕಿಶೋರ್‌ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts