More

    ಪವರ್ ಇಲೆವೆನ್​ಗೆ ಬಿಸಿಬಿ ಕಪ್

    ಬಾಳೆಹೊನ್ನೂರು: ಪಟ್ಟಣದ ಬಾಳೆಹೊನ್ನೂರು ಕ್ರಿಕೆಟ್ ಗೆಳೆಯರ ಬಳಗ ಆಯೋಜಿಸಿದ್ದ 11ನೇ ವರ್ಷದ ರಾಜ್ಯಮಟ್ಟದ ಆಹ್ವಾನಿತ ತಂಡಗಳ ಬಿಸಿಬಿ ಕಪ್ ಟಿ-20 ಲೆದರ್​ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪವರ್ ಇಲೆವೆನ್ ಕ್ರಿಕೆಟರ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಹೇರೂರು ಡಿಸಿಸಿ ಕ್ರಿಕೆಟರ್ಸ್ ರನ್ನರ್ ಅಪ್ ಸ್ಥಾನ ಪಡೆದುಕೊಂಡಿದೆ.

    ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಜಯಿಸಿದ ಹೇರೂರು ತಂಡವು ಫೀಲ್ಡಿಂಗ್ ಆಯ್ದುಕೊಂಡಿತು. ಬ್ಯಾಟಿಂಗ್ ಮಾಡಿದ ಪವರ್ ಇಲೆವೆನ್ ತಂಡ 20 ಓವರ್​ಗೆ ತನ್ನೆಲ್ಲಾ ವಿಕೆಟ್ ನಷ್ಟದೊಂದಿಗೆ 127 ರನ್​ಗಳನ್ನು ಕಲೆ ಹಾಕಿತು. ಹೇರೂರು ಕ್ರಿಕೆಟರ್ಸ್ ತಂಡ 19.1 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್​ಗಳನ್ನು ಕಳೆದುಕೊಂಡು 113 ರನ್​ಗಳನ್ನಷ್ಟೇ ಗಳಿಸಿತು. ಈ ಮೂಲಕ ಪವರ್ ಇಲೆವೆನ್ ತಂಡವು 14 ರನ್​ಗಳಿಂದ ಜಯಗಳಿಸಿತು.

    ಮನೋಜ್ ಹೇರೂರು (ಪಂದ್ಯ ಪುರುಷ), ಪ್ರದೀಪ್ (ಸರಣಿ ಶ್ರೇಷ್ಠ), ಗಿರೀಶ್ (ಬೆಸ್ಟ್ ಬೌಲರ್), ಮಹೇಶ್ (ಬೆಸ್ಟ್ ಬ್ಯಾಟರ್), ರಾಹುಲ್ (ಬೆಸ್ಟ್ ಕೀಪರ್), ರಾಜಶೇಖರ್ (ಬೆಸ್ಟ್ ಫೀಲ್ಡರ್), ಮಣಿಕಂಠ (ಉತ್ತಮ ಆಟಗಾರ), ಕಾರಂತ್ ಇಲೆವೆನ್ ಕ್ರಿಕೆಟರ್ಸ್ (ಉತ್ತಮ ತಂಡ) ಪ್ರಶಸ್ತಿ ಪಡೆಯಿತು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts