More

    ಪವನ್​ ಕಲ್ಯಾಣ್​ ಬೆಂಬಲಕ್ಕೆ ನಿಂತ ಸ್ಟೈಲಿಶ್​ ಸ್ಟಾರ್​​; ಮತ್ತಷ್ಟು ರಂಗೇರಿದ ಚುನಾವಣಾ ಕಣ

    ಅಮರಾವತಿ: ದೇಶದಲ್ಲಿ ಲೋಕಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ನಾಲ್ಕನೇ ಹಂತದ ಮತದಾನಕ್ಕೆ ಕೆಲವೇ ದಿನಗಳ ಬಾಕಿ ಉಳಿದಿವೆ. ರಕ್ತಸ ಸಿಕ್ತ ರಾಜಕಾರಣಕ್ಕೆ ಹೆಸರುವಾಸಿಯಾಗಿರುವ ಆಂಧ್ರಪ್ರದೇಶ ಹಾಗೂ ತೆಲಂಗಾಣ ನಾಲ್ಕನೇ ಹಂತದ ಮತದಾನಕ್ಕೆ ಒಳಪಡಲಿದ್ದು, ಇದಕ್ಕೂ ಮುಂಚಿತವಾಗಿ ನಟ ಅಲ್ಲು ಅರ್ಜುನ್​ ಟ್ವೀಟ್​ ಒಂದನ್ನು ಬರೆದಿದ್ದಾರೆ.

    ಪೀಠಾಪುರಂ ಕ್ಷೇತ್ರದಿಂದ ಎನ್​ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಜನಸೇನಾ ಪಕ್ಷದ ಮುಖ್ಯಸ್ಥ ಪವನ್​ ಕಲ್ಯಾಣ್​ ಅವರನ್ನು ಉದ್ಧೇಶಿಸಿ ಟ್ವೀಟ್​ ಮಾಡಿರುವ ಅಲ್ಲು ಅರ್ಜುನ್​ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ.

    ಇದನ್ನೂ ಓದಿ: ರಣವೀರ್​​-ದೀಪಿಕಾ ವಿಚ್ಛೇದನ ಪಡೆಯುತ್ತಿರುವುದು ನಿಜಾನಾ; ಉಂಗುರ ತೋರಿಸಿ ನಟ ಕೊಟ್ಟ ಸ್ಪಷ್ಟನೆ ಹೀಗಿದೆ

    ನೀವು ಆಯ್ಕೆ ಮಾಡಿದ ಮಾರ್ಗದ ಬಗ್ಗೆ ಮತ್ತು ಜನ ಸೇವೆಗಾಗಿ ನಿಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವುದಕ್ಕೆ ನಾನು ಯಾವಾಗಲೂ ಹೆಮ್ಮೆಪಡುತ್ತೇನೆ. ಕುಟುಂಬದ ಸದಸ್ಯನಾಗಿ, ನನ್ನ ಪ್ರೀತಿ ಮತ್ತು ಬೆಂಬಲ ಯಾವಾಗಲೂ ನಿಮ್ಮೊಂದಿಗೆ ಇರುತ್ತದೆ. ನೀವು ಬಯಸಿದ್ದೆಲ್ಲವನ್ನೂ ಸಾಧಿಸಲಿ ಎಂದು ಹಾರೈಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

    ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಮೇ 13ರಂದು ಮತದಾನ ನಡೆಯಲಿದ್ದು, ಆಂಧ್ರಪ್ರದೇಶದ 25 ಹಾಗೂ ತೆಲಂಗಾಣದ 17 ಲೋಕಸಭೆ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಮಾಜಿ ಸಿಎಂ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ, ಪವನ್​ ಕಲ್ಯಾಣ್​ ನೇತೃತ್ವದ ಜನಸೇನಾ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts