More

    ಪರಿಹಾರ ನೀಡಲು ಹಣದ ಕೊರತೆ ಇಲ್ಲ

    ಭಟ್ಕಳ: ತೌಕ್ತೆ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶದ ಜನರಿಗೆ ಪರಿಹಾರ ಧನ ನೀಡಲು ಹಣದ ಕೊರತೆ ಇಲ್ಲ. ಹಾನಿಗೊಳಗಾದವರಿಗೆ 2 ದಿನಗಳಲ್ಲಿ ತಕ್ಷಣ ಪರಿಹಾರ ನೀಡಬೇಕು. ಈ ಕುರಿತು ಜನರಿಂದ ದೂರುಗಳು ಬಂದರೆ ಸಂಬಂಧಿಸಿದ ಅಧಿಕಾರಿಗಳನ್ನು ಹೊಣೆ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದರು.

    ತಾಲೂಕಿನ ಹೆಬಳೆ ಪಂಚಾಯಿತಿಯ ಹೆರ್ತಾರ ಸಮುದ್ರ ತೀರದಲ್ಲಿ ಚಂಡಮಾರುತ ದಿಂದ ಹಾನಿಯಾದ ಪ್ರದೇಶಗಳಿಗೆ ಮಂಗಳವಾರ ಭೇಟಿ ನೀಡಿದ ಸಚಿವರು, ನಂತರ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಏರ್ಪಡಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಹಾನಿ ಅಂದಾಜಿಸಿ ಸಮಗ್ರ ವರದಿ ನೀಡುವಂತೆ ಬಂದರು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಉ.ಕ. ಜಿಲ್ಲೆಗೂ ಸೂಕ್ತ ಪರಿಹಾರ ಕಲ್ಪಿಸಿ
    ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಮಾತನಾಡಿ, ‘ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ 146 ಕಿ.ಮೀ. ಕರಾವಳಿ ಪ್ರದೇಶವಿದೆ. ರಾಜ್ಯದಲ್ಲಿ 296 ಕಿ.ಮೀ. ಕರಾವಳಿ ತೀರವಿದೆ. ಆದರೆ, ಸರ್ಕಾರ ಕರಾವಳಿ ಪ್ರದೇಶ ಎಂದರೆ ಉಡುಪಿ ಮತ್ತು ಮಂಗಳೂರನ್ನು ಮಾತ್ರ ಗಣನೆಗೆ ತೆಗೆದುಕೊಳ್ಳುತ್ತದೆ. ಆದ್ದರಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಕರಾವಳಿ ಪ್ರದೇಶವನ್ನು ಕೂಡ ಗಣನೆಗೆ ತೆಗೆದುಕೊಂಡು ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಸಚಿವ ಶಿವರಾಮ ಹೆಬ್ಬಾರ ಸಚಿವರಲ್ಲಿ ಮನವಿ ಮಾಡಿದರು. ಕೃಷಿ ಭೂಮಿ ಹಾಗೂ ಬೆಳೆ ಹಾಗೂ ಮನೆ ಹಾನಿಯ ಸಂಪೂರ್ಣ ಮಾಹಿತಿ ಪಡೆದು, ವಿಸ್ತ್ರತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts