More

    ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ

    ಬೇಲೂರು: ಪರಿಸರ ನಾಶದಿಂದ ಪ್ರಕೃತಿಯಲ್ಲಿ ಹಲವಾರು ರೀತಿಯ ಬದಲಾವಣೆಯಾಗುತ್ತಿದೆ. ಹೀಗಾಗಿ, ಪರಿಸರ ಉಳಿಯ ಬೇಕಾದರೆ ಪ್ರತಿಯೊಬ್ಬರೂ ಗಿಡ ನೆಟ್ಟು ಪೋಷಣೆ ಮಾಡಬೇಕು ಎಂದು ಮಲಸಾವರ ಗ್ರಾಮ ಪಂಚಾಯಿತಿ ಅಧ್ಯಕ್ಷ ನವೀನ್‌ಪ್ರಸಾದ್ ಹೇಳಿದರು.
    ತಾಲೂಕಿನ ಅರೇಹಳ್ಳಿ ಸಮೀಪದ ಕಾನಹಳ್ಳಿ, ಬಕ್ಕರವಳ್ಳಿ, ಮಲಸಾವರ ಗ್ರಾಮಗಳ ಕಿರು ಅರಣ್ಯ ಪ್ರದೇಶದಲ್ಲಿ ಪ್ರಾದೇಶಿಕ ಅರಣ್ಯ ಇಲಾಖೆಯಿಂದ ಆಯೋಜಿಸಿದ್ದ ವನ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
    ಪರಿಸರ ನಾಶದಿಂದಾಗಿ ಇಂದು ಸಕಾಲದಲ್ಲಿ ಮಳೆ ಬಾರದೆ ಭೂಮಿ ಮೇಲಿನ ಪ್ರಾಣಿ ಪಕ್ಷಿಗಳು ಹಾಗೂ ಜಲಚರಗಳು ಅವನತಿಯತ್ತ ಸಾಗುತ್ತಿವೆ. ಮಳೆ ಇಲ್ಲದೆ ಕೆರೆ-ಕಟ್ಟೆ, ಹಳ್ಳ ಕೊಳ್ಳಗಳಲ್ಲಿ ನೀರಿಲ್ಲದೆ ಕಾಡು ಪ್ರಾಣಿಗಳು ಸೇರಿದಂತೆ ಜನ- ಜಾನುವಾರುಗಳಿಗೂ ನೀರಿನ ಭೀತಿ ಕಾಡುತ್ತಿದೆ. ಆದ್ದರಿಂದ ಪರಿಸರ ಸಂರಕ್ಷಣೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಕರ್ತವ್ಯವಾಗಿದೆ. ಹೆಚ್ಚು ಹೆಚ್ಚು ಗಿಡ ಮರಗಳನ್ನು ಬೆಳೆಸುವಂತೆ ಪ್ರತಿಯೊಬ್ಬರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
    ಉಪವಲಯ ಅರಣ್ಯಾಧಿಕಾರಿ ಡಿ.ಗುರುರಾಜ್ ಮಾತನಾಡಿ, ಮೂವತ್ತು ವರ್ಷಗಳ ಹಿಂದೆ ಕಾನಹಳ್ಳಿ ಕಿರು ಅರಣ್ಯ ಪ್ರದೇಶದ 70 ಎಕರೆ ಭೂಮಿಯನ್ನು ಕಬಳಿಸಲಾಗಿತ್ತು. ಅದನ್ನು ವಾಪಸ್ ಪಡೆಯಲಾಗಿದೆ. ಅಲ್ಲದೆ ವನಮಹೋತ್ಸವ ಅಂಗವಾಗಿ ಕಾಡಿನಲ್ಲಿ ನೇರಳೆ, ಬಿದಿರು, ಹೊಂಗೆ ಸೇರಿದಂತೆ ವಿವಿಧ ಜಾತಿಯ 50 ಸಾವಿರ ಗಿಡಗಳನ್ನು ನೆಡಲು ಇಲಾಖೆ ಮುಂದಾಗಿದೆ. ಅರಣ್ಯದೊಳಗೆ ಖಾಸಗಿಯವರು ಅತಿಕ್ರಮ ಪ್ರವೇಶ ಮಾಡದಂತೆ ಚರಂಡಿ ಹಾಗೂ ತಂತಿ ಬೇಲಿ ನಿರ್ಮಿಸಲಾಗಿದೆ ಎಂದರು.
    ಇದೇ ಸಂದರ್ಭ ವನ ಮಹೋತ್ಸವದ ಅಂಗವಾಗಿ ನೂರಾರು ನೇರಳೆ ಹಾಗೂ ಬಿದಿರು ಗಿಡಗಳನ್ನು ನೆಡಲಾಯಿತು. ಗ್ರಾಪಂ ಸದಸ್ಯರಾದ ಭೂಪಾಲ್, ಹಬೀದ್, ಉಪ ವಲಯ ಅರಣ್ಯಾಧಿಕಾರಿ ಡಿ.ಗುರುರಾಜ್, ಎಚ್.ಜೆ.ಮಂಜೇಗೌಡ. ಎಸ್.ಆರ್.ಅರ್ಜುನ್, ಎಂ.ಕೆ.ನಾಗೇಶ್, ರಘುಕುಮಾರ್, ಗ್ರಾಪಂ ಕಾರ್ಯದರ್ಶಿ ದೇವರಾಜ್, ಅರಣ್ಯ ರಕ್ಷಕರಾದ ವೇದಾರಾಜು ಮೋಹನ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts