More

    ಪರಿಸರಸ್ನೇಹಿ ಮುಖ ರಕ್ಷಕ

    ಹುಬ್ಬಳ್ಳಿ: ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಮಾಸ್ಕ್(ಮುಖಗವಸ)ಗಳಿಗೆ ಬೇಡಿಕೆ ಹೆಚ್ಚಿದೆ. ಈ ನಡುವೆ ನಗರದ ಉತ್ಸಾಹಿ ಯುವಕರು ಕಡಿಮೆ ಬೆಲೆಗೆ ಮುಖ ರಕ್ಷಕಗಳನ್ನು ತಯಾರು ಮಾಡಿ ಗಮನ ಸೆಳೆದಿದ್ದಾರೆ.

    ಸಚಿನ್ ಅರಕೇರಿ, ಸಿದ್ಧಲಿಂಗೇಶ್ವರ ಕಮ್ಮಾರ, ಎಂ.ಎಸ್. ರೋಹಿತ ಸೇರಿ ಪ್ರೋ-ಪೆಗ್ (ಪ್ರೊಫೆಷನಲ್ ಪ್ರೊಟೆಕ್ಟಿವ್ ಇಕ್ವಿಪಮೆಂಟ್ ಗೇರ್) ಪ್ರಾಡಕ್ಟ್ಸ್ ಹೆಸರಿನಲ್ಲಿ ಮುಖ ರಕ್ಷಕವನ್ನು ತಯಾರು ಮಾಡಿದ್ದಾರೆ. ಇದು ಪರಿಸರಸ್ನೇಹಿಯೂ ಆಗಿದೆ. ಸ್ಯಾನಿಟೈಸರ್​ನಿಂದ ಸ್ವಚ್ಛಗೊಳಿಸಿ ಮರು ಬಳಕೆ ಮಾಡಬಹುದು. ಕೇವಲ 30 ರೂ. ಖರ್ಚಿನಲ್ಲಿ ಇದು ಸಿದ್ಧವಾಗಿರುವುದು ವಿಶೇಷ.

    ಇಂಡಸ್ಟ್ರೀಯಲ್ ಪ್ರಾಡಕ್ಟ್ಸ್ ಆಂಡ್ ಪಾಲಿಮರ್ಸ್​ನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿರುವ ಈ ಮೂವರು 4ನೇ ಪ್ರಯತ್ನದಲ್ಲಿ ಸುರಕ್ಷಿತವಾದ ಮುಖರಕ್ಷಕವನ್ನು ಸಿದ್ಧಪಡಿಸಿದ್ದಾರೆ. ಇದಕ್ಕೆ ಕೆಎಂಸಿ ವೈದ್ಯರ ಸಲಹೆಯನ್ನು ಸಹ ಪಡೆಯಲಾಗಿದೆ. ಜಿಲ್ಲಾಧಿಕಾರಿ ದೀಪಾ ಚೋಳನ್, ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ಮತ್ತಿತರರಿಗೆ ಈ ಮುಖರಕ್ಷಕ ನೀಡಿದ್ದಾರೆ. ಅವರು ಪರಿಶೀಲಿಸಿ, ಚೆನ್ನಾಗಿದೆ ಎಂದು ಪ್ರೋತ್ಸಾಹಿಸಿದ್ದಾರೆ. ಲಕಮನಹಳ್ಳಿಯಲ್ಲಿರುವ ಉತ್ಪಾದನಾ ಘಟಕದಲ್ಲಿ ಈ ಯುವಕರು ಸಾವಿರಾರು ಮುಖರಕ್ಷಕ ಉತ್ಪಾದಿಸಿ, ಕರೊನಾ ವಿರುದ್ಧದ ಹೋರಾಟಕ್ಕಾಗಿ ಆಸ್ಪತ್ರೆಗಳಿಗೆ ದಾನವಾಗಿ ನೀಡಿದ್ದಾರೆ.

    ‘ಈ ಸಾಧನ ಮುಖವನ್ನು ಸಂಪೂರ್ಣವಾಗಿ ಮುಚ್ಚುತ್ತದೆ. ಕರೊನಾ ಸೋಂಕು ಹರಡುವಿಕೆ ತಡೆಗೆ ಅನುಕೂಲಕರವಾಗಿದೆ ಎಂದು ಇದನ್ನು ಬಳಸಿದ ಎಲ್ಲರೂ ಅಭಿಪ್ರಾಯಪಟ್ಟಿರುವುದಾಗಿ ಸಚಿನ್ ಅರಕೇರಿ ತಿಳಿಸಿದ್ದಾರೆ.ಫೋಟೊ : ಆರೋಗ್ಯ ಸೇತು

    ‘ಆರೋಗ್ಯ ಸೇತು’ ಆಪ್ ಅಳವಡಿಸಿಕೊಂಡ ನೈಋತ್ಯ ರೈಲ್ವೆ

    ಹುಬ್ಬಳ್ಳಿ: ಕರೊನಾ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಕೇಂದ್ರ ಸರ್ಕಾರ ಅಭಿವೃದ್ಧಿ ಪಡಿಸಿರುವ ‘ಆರೋಗ್ಯ ಸೇತು’ ಮೊಬೈಲ್ ಆಪ್​ನ್ನು ನೈಋತ್ಯ ರೈಲ್ವೆ ವಲಯದ ಶೇ. 91ರಷ್ಟು ಉದ್ಯೋಗಿಗಳು ತಮ್ಮ ಮೊಬೈಲ್​ನಲ್ಲಿ ಡೌನ್​ಲೋಡ್ ಮಾಡಿಕೊಂಡಿದ್ದಾರೆ.

    ನೈಋತ್ಯ ರೈಲ್ವೆ ವಲಯದ 35,082ರಷ್ಟು ಉದ್ಯೋಗಿಗಳಲ್ಲಿ 34,510 ಉದ್ಯೋಗಿಗಳು ಈ ಆಪ್ ಅನ್ನು ತಮ್ಮ ಮೊಬೈಲ್​ನಲ್ಲಿ ಅಳವಡಿಸಿಕೊಂಡಿದ್ದಾರೆ.

    ಉದ್ಯೋಗಿಗಳ ಪತ್ನಿ, ಮಕ್ಕಳು ಸೇರಿ ಕುಟುಂಬದ ಇತರ ಸದಸ್ಯರು ಸಹ ‘ಆರೋಗ್ಯ ಸೇತು’ ಮೊಬೈಲ್ ಆಪ್​ಅನ್ನು ಅಳವಡಿಸಿಕೊಂಡಿದ್ದಾರೆ. ಇದರಲ್ಲಿ ಬೆಂಗಳೂರು ವಿಭಾಗದ 10,469 ಉದ್ಯೋಗಿಗಳಲ್ಲಿ ಶೇ. 93ರಷ್ಟು, ಹುಬ್ಬಳ್ಳಿ ವಿಭಾಗದ 11,800 ಉದ್ಯೋಗಿಗಳಲ್ಲಿ ಶೇ. 90ರಷ್ಟು, ಮೈಸೂರು ವಿಭಾಗದ 6,250 ಉದ್ಯೋಗಿಗಳಲ್ಲಿ ಶೇ. 95ರಷ್ಟು ಹಾಗೂ ಹೆಡ್​ಕ್ವಾರ್ಟರ್ಸ್​ನ 6,563 ಉದ್ಯೋಗಿಗಳಲ್ಲಿ ಶೇ. 88ರಷ್ಟು ಉದ್ಯೋಗಿಗಳು ಈ ಆಪ್​ನ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.

    155 ಮಾಧ್ಯಮ ಪ್ರತಿನಿಧಿಗಳ ಗಂಟಲು-ಮೂಗಿನ ದ್ರವ ಸಂಗ್ರಹಣೆ

    ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾಧ್ಯಮ ಪ್ರತಿನಿಧಿಗಳಿಗೆ ಕಿಮ್ಸ್ನ ಪಿಎಂಎಸ್​ಎಸ್​ವೈ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 2 ದಿನಗಳ ಕಾಲ ಆಯೋಜಿಸಲಾಗಿದ್ದ ಕೋವಿಡ್-19 ಆರೋಗ್ಯ ತಪಾಸಣೆಯಲ್ಲಿ ಒಟ್ಟು 155 ಮಾಧ್ಯಮ ಪ್ರತಿನಿಧಿಗಳ ಗಂಟಲು ಹಾಗೂ ಮೂಗಿನ ದ್ರವ ಸಂಗ್ರಹಣೆ ಮಾಡಲಾಗಿದೆ. ಸಂಗ್ರಹಿಸಿದ ಮಾದರಿಗಳನ್ನು ಕರೊನಾ ಸೋಂಕು ಪತ್ತೆಗೆ ಸಲ್ಲಿಕೆ ಮಾಡಲಾಗಿದೆ. 2 ದಿನಗಳಲ್ಲಿ ಪರೀಕ್ಷಾ ವರದಿಗಳು ಲಭ್ಯವಾಗಲಿವೆ.

    ತಪಾಸಣೆ ವೇಳೆ ಕಿಮ್ಸ್ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಮುತುವರ್ಜಿಯಿಂದ ಕೆಲಸ ನಿರ್ವಹಿಸಿ ಗಂಟಲು ಹಾಗೂ ಮೂಗಿನ ದ್ರವಗಳ ಸಂಗ್ರಹಣೆ ಮಾಡಿದ್ದಾರೆ. ನಿರ್ದೇಶಕ ಡಾ. ರಾಮಲಿಂಗಪ್ಪ, ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ್ ಚವ್ಹಾಣ, ಡಾ.ಲಕ್ಷ್ಮಿಕಾಂತ್ ಸಿಬ್ಬಂದಿಗೆ ಮಾರ್ಗದರ್ಶನ ನೀಡಿದರು.

    ಕಿಮ್್ಸ ಇಎನ್​ಟಿ ವಿಭಾಗದ ಡಾ. ನಿಧಿ, ಡಾ. ತೆಸ್ಮಿ, ಡಾ. ಜಿನೋಯ, ಡಾ. ಆರತಿ ಗಂಟಲು ಹಾಗೂ ಮೂಗಿನ ದ್ರವ ಸಂಗ್ರಹಣೆ ಮಾಡಿದರು. ಮೈಕ್ರೋ ಬಯಲಾಜಿಸ್ಟ್ ಕೀರ್ತಿ ರಾಜ್, ಲ್ಯಾಬ್ ಟೆಕ್ನಿಷಿಯನ್​ಗಳಾದ ಶೀಲಾ ಸಂಟಕ್ಕಿ, ಶಿಲ್ಪಾ ಹದಲಿ, ಮಹಾದೇವಿ ಕುರುಬೆಟ್ಟ, ಹರ್ಷಾ ಚವ್ಹಾಣ, ಶಿಲ್ಪಾ ಐಹೊಳೆ, ಶೃತಿ ಸುರೇಶ, ಸೌಮ್ಯ ಬೋಷಣೆ, ವೈಶಾಲಿ ಲಾಮಣಿ, ಮಲ್ಲಿಕಾರ್ಜುನ ಸಹಾಯಕರಾಗಿ ಕಾರ್ಯ ನಿರ್ವಹಿಸಿದರು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts