More

    ಪರಮೇಶ್ವರ್‌ಗೆ ಸಿಎಂ ಸ್ಥಾನ ನೀಡಿ



    ಚಿತ್ರದುರ್ಗ: ಪರಿಶಿಷ್ಟರ ಪೈಕಿ ಸಿಎಂ ಸ್ಥಾನಕ್ಕೆ ಅತ್ಯಂತ ಸೂಕ್ತವಾದ ನಾಯಕರಲ್ಲಿ ಡಾ.ಜಿ. ಪರಮೇಶ್ವರ್ ಪ್ರಮುಖರಾಗಿದ್ದು, ರಾಜ್ಯ ಸರ್ಕಾರದಲ್ಲಿ ಅವರನ್ನೇ ಪರಿಗಣಿಸಬೇಕು ಎಂದು ಛಲವಾದಿ ಮಠದ ಶ್ರೀ ಬಸವನಾಗಿದೇವ ಸ್ವಾಮೀಜಿ ಎಐಸಿಸಿ, ಕೆಪಿಸಿಸಿಗೆ ಒತ್ತಾಯಿಸಿದರು.

    ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪರಿಶಿಷ್ಟರಲ್ಲಿ ಬಲಗೈನ ಛಲವಾದಿ ಎಂಬ ಕಾರಣಕ್ಕೆ ಸಮುದಾಯದ ಕೋಟಾದಡಿ ಪರಿಗಣಿಸಿ ಸಿಎಂ ಸ್ಥಾನ ನೀಡಿ ಎಂದು ಕೇಳುತ್ತಿಲ್ಲ. ಅವರಿಗೆ ಆಡಳಿತ ನಡೆಸಿರುವ ದಕ್ಷತೆ ಮತ್ತು ಅನುಭವ ಇದ್ದು, ಅರ್ಹರಾಗಿದ್ದಾರೆ. ತನ್ನದೇ ವ್ಯಕ್ತಿತ್ವ, ವರ್ಚಸ್ಸು ರೂಪಿಸಿಕೊಂಡ ರಾಜಕಾರಣಿ. ಸಾಮಾಜಿಕ ಭದ್ರತೆ, ಕಾನೂನು ಸುವ್ಯವಸ್ಥೆ ಕಾಪಾಡುವ ನೈಪುಣ್ಯತೆ, ಸಂವಿಧಾನದ ಆಶಯ ಈಡೇರಿಸುವ ಜಾಣ್ಮೆಯೂ ಇದೆ. ಹೀಗಾಗಿ ಸೂಕ್ತರಾಗಿದ್ದಾರೆ ಎಂದು ಹೇಳಿದರು.

    ಕಾಂಗ್ರೆಸ್‌ನ ಪ್ರಣಾಳಿಕೆ ಸಮಿತಿ ಅಧ್ಯಕ್ಷರೂ ಆಗಿದ್ದ ಅವರು ಗ್ಯಾರಂಟಿಗಳಿಗೂ ಸಲಹೆ ನೀಡಿದ್ದರು. ಹೆಚ್ಚು ಸ್ಥಾನ ಪಡೆಯಲು ಇದು ಕೂಡ ಸಹಕಾರಿಯಾಗಿದೆ. ಪ್ರಸ್ತುತ ರಾಜಕೀಯ ವ್ಯವಸ್ಥೆಯಲ್ಲಿ ಔಚಿತ್ಯವೂ, ಅರ್ಹರೂ ಆದ ಅವರಿಗೆ ಸಿಎಂ ಸ್ಥಾನ ನೀಡುವುದು ಉತ್ತಮ ಎಂದು ಸಲಹೆ ನೀಡಿದರು.

    ಸಿಎಂ ಮಾಡಲೇಬೇಕೆಂದು ಯಾವುದೇ ಹೋರಾಟ ಮಾಡುವುದಿಲ್ಲ. ಆದರೆ, ಸಮುದಾಯ, ಮುಖಂಡರು ಮುಂದಾದಲ್ಲಿ ಬೆಂಬಲ ಸೂಚಿಸುತ್ತೇವೆ ಎಂದರು.
    ನಗರಸಭೆ ಮಾಜಿ ಅಧ್ಯಕ್ಷ ಎಚ್.ಸಿ.ನಿರಂಜನಮೂರ್ತಿ ಮಾತನಾಡಿ, ಸಿಎಂ, ಸಚಿವ ಸ್ಥಾನ ಜಾತಿ ಆಧಾರದ ಮೇಲೆ ನೀಡಲಾಗುತ್ತಿದ್ದು, ಪರಿಶಿಷ್ಟರಿಗೆ ಈ ಬಾರಿ ಸಿಎಂ ಸ್ಥಾನ ನೀಡುವುದು ಉತ್ತಮ. ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಇಬ್ಬರಲ್ಲಿ ಯಾರೇ ಸಿಎಂ ಆದರೂ ಅಭ್ಯಂತರವಿಲ್ಲ. ಪರಿಶಿಷ್ಟರ ಪ್ರಸ್ತಾಪ ಎದುರಾದರೆ ಡಾ.ಜಿ.ಪರಮೇಶ್ವರ್ ಅವರನ್ನು ಪರಿಗಣಿಸಬೇಕು ಎಂದು ಮನವಿ ಮಾಡಿದರು.
    ಮುಖಂಡರಾದ ನಿರಂಜನ, ಅರುಣ್‌ಕುಮಾರ್, ಟಿ.ಎನ್.ಪ್ರಹ್ಲಾದ್ ಇತರರಿದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts