More

    ಪದವಿನಂಗಡಿ ರಸ್ತೆ ಅಗೆದು ಸಂಪರ್ಕ ಕಡಿತ ತಿಂಗಳಾದರೂ ಆರಂಭವಾಗದ ಕಾಮಗಾರಿ

    ಮಂಗಳೂರು: ನಗರದ ಪದವಿನಂಗಡಿ ಮಹಾಲಸಾ ದೇವಳದ ಬಳಿಯಲ್ಲಿ ಕಾಂಕ್ರೀಟು ರಸ್ತೆ ನಿರ್ಮಾಣಕ್ಕೆ ರಸ್ತೆ ಅಗೆದು ಹಾಕಿ ತಿಂಗಳಾದರೂ ಕಾಮಗಾರಿ ಆರಂಭಗೊಳ್ಳದೇ ಇರುವುದನ್ನು ವಿರೋಸಿ ಶುಕ್ರವಾರ ಸುಮಾರು 20ಕ್ಕೂ ಅಕ ಮಂದಿ ಸ್ಥಳೀಯರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
    ಅಗೆದು ಹಾಕಿದ ರಸ್ತೆ ಬದಿಯಲ್ಲಿ ಅಪಾರ್ಟ್‌ಮೆಂಟ್, ಮನೆಗಳು, ಶಾಪಿಂಗ್ ಕಾಂಪ್ಲೆಕ್ಸ್‌ಗಳಿವೆ. ಬೊಲ್ಪುಗುಡ್ಡೆಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿರುವ ಕಾರಣ ಸುಮಾರು 2 ಸಾವಿರ ಮನೆಯವರು ಈಗ ಸುತ್ತು ಬಳಸಿ ಸಂಚರಿಸಬೇಕಾದ ಪರಿಸ್ಥಿತಿ ಇದೆ. ಈ ಬಗ್ಗೆ ಜನಪ್ರತಿನಿಗಳನ್ನು ಪ್ರಶ್ನಿಸಿದಾಗ ಭರವಸೆಯಷ್ಟೇ ಸಿಗುತ್ತಿದೆ. ಕಾಮಗಾರಿ ವಹಿಸಿಕೊಂಡವರು ಒಂದು ಲೋಡ್ ಜಲ್ಲಿ ತಂದು ಹಾಕಿ ಹೋಗಿದ್ದಾರೆ ಎಂದು ಸ್ಥಳೀಯರಾದ ರತ್ನಾಕರ ಕಾಮತ್ ಹೇಳಿದರು.
    ರಸ್ತೆ ಅಗೆಯುವಾಗ ಕುಡಿಯುವ ನೀರಿನ ಪೈಪ್‌ಗಳಿಗೆ ಹಾನಿ ಉಂಟಾಗಿ ನೀರು ಪೋಲಾಗಿ ಹೋಗುತ್ತಿದೆ. ಅಪಾರ್ಟ್‌ಮೆಂಟ್‌ನಲ್ಲಿ ಕೇವಲ ಹಿರಿಯರು ಮಾತ್ರ ಇರುವವರು ಅಗತ್ಯ ಸಾಮಗ್ರಿ ತರಲು ಅಂಗಡಿಗೆ ಈ ರಸ್ತೆಯಲ್ಲಿ ಹೋಗಲಾಗುತ್ತಿಲ್ಲ. ಅವರು ಬೇಕಾದ ಸಾಮಗ್ರಿ ತರಿಸಲು ಇನ್ನೊಬ್ಬರನ್ನು ಆಶ್ರಯಿಸುವಂತಾಗಿದೆ ಎಂದು ಓಸ್ವಲ್ಡ್ ರ್ನಾಂಡಿಸ್ ಹೇಳಿದರು.
    ಇಲ್ಲಿ ಸೂಪರ್ ಮಾರ್ಕೆಟ್ ಇದ್ದು ಪ್ರತಿದಿನ ನೂರಾರು ಮಂದಿ ಅಂಗಡಿಗೆ ಬರುವವರಿಗೆ ಸಮಸ್ಯೆಯಾಗಿದೆ. ವಿಮಾನ ನಿಲ್ದಾಣಕ್ಕೆ ಹೋಗುವ ಮುಖ್ಯರಸ್ತೆ ಬದಿಯಲ್ಲೇ ಅಗೆದು ಹಾಕಿರುವುದರಿಂದ ಮೂರು ಅಡಿಯಷ್ಟು ಮಳೆ ನೀರು ನಿಂತಿದೆ. ರಸ್ತೆ ಇದೆ ಎಂದು ಭಾವಿಸಿ ವಾಹನ ಇಳಿಸಿದರೆ ಪಲ್ಟಿಯಾಗುವ ಸಾಧ್ಯತೆ ಇದೆ. ಆದಷ್ಟು ಶೀಘ್ರ ಕಾಮಗಾರಿ ಪೂರ್ಣಗೊಳಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
    ಅಂಗಡಿ ಮಾಲೀಕ ಪುಷ್ಪರಾಜ ಶೆಟ್ಟಿ, ಸ್ಥಳೀಯ ನಿವಾಸಿ ರವೀಂದ್ರ ಪ್ರಭು ಮೊದಲಾದವರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts