More

    ಪಥ್ಯಾಹಾರದಿಂದ ಮಧುಮೇಹ ನಿಯಂತ್ರಣ

    ಹಾವೇರಿ: ಕಣ್ಣು ಮಂಜಾಗುವುದು ಮಧುಮೇಹಿಗಳ ಮುಖ್ಯ ಲಕ್ಷಣ. ಸೂಕ್ತ, ಸಂಬಂಧಿಸಿದ ವೈದ್ಯರ ಸಲಹೆಯೊಂದಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೆ ಭಯವಿಲ್ಲ. ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ಉಮೇಶ ಹಿರೇಮಠ ಹೇಳಿದರು.

    ನಗರದ ಲಯನ್ಸ್ ಶಾಲೆಯಲ್ಲಿ ಲಯನ್ಸ್ ಕ್ಲಬ್ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಮಧುಮೇಹ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ವ್ಯಾಯಾಮ, ಸೀಮಿತ ಪಥ್ಯಾಹಾರ ಸೇವನೆಯಿಂದ ಮಧುಮೇಹ ಕಾಯಿಲೆಯನ್ನು ಹತೋಟಿಯಲ್ಲಿ ಇಡಬಹುದು ಎಂದರು.

    ಡಯಾಬಿಟಿಸ್ ಎಂದರೇನು? ಬರಲು ಕಾರಣಗಳೇನು? ಇದೆ ಎಂದು ತಿಳಿಯುವುದು ಹೇಗೆ? ಲಕ್ಷಣಗಳು, ಪರಿಣಾಮ, ಪರಿಹಾರ ಕುರಿತು ಚನ್ನೈನ ಡಯಾಬಿಟಿಸ್ ರಿಸರ್ಚ್ ಸೆಂಟರ್​ನ ಡಾ. ಪ್ರೀತಂ ಬಿ. ಉಪನ್ಯಾಸ ನೀಡಿದರು.

    ಲಯನ್ಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಸ್.ಕೆ. ಮುದಗಲ್ಲ ಮಾತನಾಡಿ, ಕರೊನಾ ನಡುವೆಯೂ ಮಧುಮೇಹಿಗಳ ಆರೋಗ್ಯ ಮುಖ್ಯವಾಗಿದೆ. ಇದಕ್ಕಾಗಿ ಲಯನ್ಸ್ ಸಂಸ್ಥೆಯು ಈ ಕಾರ್ಯಕ್ರಮ ಆಯೋಜಿಸಿ, ಮಧುಮೇಹಿಗಳಲ್ಲಿ ಜೀವನೋತ್ಸಾಹ ತುಂಬುತ್ತಿದೆ ಎಂದರು.

    ಶಿಕ್ಷಣ ಸಂಸ್ಥೆ ಸದಸ್ಯರಾದ ಡಿ.ಎನ್. ಅಟವಾಳಗಿ, ಎಂ.ಸಿ. ಹೇರೂರ, ಶಿಕ್ಷಕರು ಇದ್ದರು. ಸಂಸ್ಥೆ ಕಾರ್ಯದರ್ಶಿ ಎ.ಎಚ್. ಕಬ್ಬಿಣಕಂತಿಮಠ ಸ್ವಾಗತಿಸಿದರು. ಖಜಾಂಚಿ ನಿರಂಜನ ಹೇರೂರ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts