More

    ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಿ

    ಶನಿವಾರಸಂತೆ: ದಿನ ಪತ್ರಿಕೆಗಳನ್ನು ಮಕ್ಕಳು ಪ್ರತಿ ನಿತ್ಯ ಓದುವ ಮೂಲಕ ದೇಶ- ವಿದೇಶಗಳಲ್ಲಿ ನಡೆಯುವ ಪ್ರಚಲಿತ ವಿದ್ಯಮಾನಗಳ ಬಗ್ಗೆ ತಿಳಿದುಕೊಳ್ಳಬಹುದು ಎಂದು ಶನಿವಾರಸಂತೆ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ದಿನೇಶ್ ಹೇಳಿದರು.


    ಅಂಕನಹಳ್ಳಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ರೋಟರಿ ಕ್ಲಬ್ ವತಿಯಿಂದ ನಂ.1 ಕನ್ನಡ ದಿನಪತ್ರಿಕೆ ‘ವಿಜಯವಾಣಿ’ಯನ್ನು ಕನ್ನಡ ರಾಜ್ಯೋತ್ಸವ ಪ್ರಯುಕ್ತ ವಿತರಿಸಿ ಮಾತನಾಡಿ, ರೋಟರಿ ಕ್ಲಬ್‌ನಿಂದ ವಿವಿಧ ಸಮಾಜಮುಖಿ ಕೆಲಸಗಳು ನಡೆ ಯತ್ತಿವೆ. ಅದರಲ್ಲಿ ಈ ರೀತಿಯ ವಿಭಿನ್ನ ಕಾರ್ಯ ಕ್ರಮ ಹಮ್ಮಿ ಕೊಂಡಿರುವುದು ಶ್ಲಾಘನೀಯ. ಮಕ್ಕಳು ಪಠ್ಯದೊಂದಿಗೆ ದಿನಪತ್ರಿಕೆಗಳನ್ನು ಓದುವುದರಿಂದ ಸ್ಪರ್ಧಾತ್ಮಕ ಪರಿಕ್ಷೆಗಳಿಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು.


    ಶನಿವಾರಸಂತೆ ರೋಟರಿ ಕ್ಲಬ್ ವಲಯ ಅಧ್ಯಕ್ಷ ಕೆ.ಪಿ.ಜಯಕುಮಾರ್ ಮಾತನಾಡಿ, ರೋಟರಿ ಕ್ಲಬ್ ಈಗಾಗಲೇ ಅನೇಕ ಸಾಮಾಜಿಕ ಕೆಲಸಗಳನ್ನು ಮಾಡುವ ಮೂಲಕ ಜನಮನ್ನಣೆಗಳಿಸುತ್ತಿದೆ ಎಂದರು. ಕಾರ್ಯದರ್ಶಿ ಮೋಹನ್‌ಕುಮಾರ್, ರೋಟರಿ ಸದಸ್ಯರಾದ ಸುದೀಪ್, ಶಿಭು, ಯೋಗೇಶ್, ಚಂದ್ರಕಾಂತ್, ದಿನೇಶ್, ಅಂಕನಹಳ್ಳಿ ಪ್ರೌಢಶಾಲೆ ಪ್ರಭಾರ ಮುಖ್ಯ ಶಿಕ್ಷಕ ದೇವರಾಜ್, ಶಿಕ್ಷಕ ಶಿವಕುಮಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts