More

    ಪತ್ರಿಕೆಗಳು ಸಮಾಜದ ಕಣ್ಣುಗಳು

    ಕೊಡೇಕಲ್: ಸಮಾಜದಲ್ಲಿನ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಮೂಲಕ ತಕ್ಕ ನ್ಯಾಯ ಒದಗಿಸಿಕೊಡುತ್ತಿರುವ ಪತ್ರಿಕೆಗಳು ಸಮಾಜದ ಕಣ್ಣುಗಳಿದ್ದಂತೆ ಎಂದು ಗುಲ್ಬರ್ಗ ವಿಶ್ವವಿದ್ಯಾಲಯ ಸಮೂಹ ಮಾಧ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಕೆ.ಎಂ. ಕುಮಾರಸ್ವಾಮಿ ಹೇಳಿದರು.

    ನಾರಾಯಣಪುರದ ಈಶ್ವರ ದೇವಸ್ಥಾನದ ಮಂಗಲ ಭವನದಲ್ಲಿ ಹುಣಸಗಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಮಂಗಳವಾರ ಆಯೋಜಿಸಿದ್ದ ಪತ್ರಿಕಾ ದಿನ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಪತ್ರಿಕೋದ್ಯಮ ಸುಲಭದ ಮಾತಲ್ಲ. ಇದು ಗಂಭೀರವಾದ ವೃತ್ತಿ. ವೈಚಾರಿಕತೆ ಅಳವಡಿಸಿಕೊಂಡು ಹೋಗುವ ಅಗತ್ಯವಿದೆ. ದೇಶದ ಪ್ರಗತಿಯಲ್ಲಿ ಪತ್ರಿಕೆಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದರು.

    ಯುವ ಮುಖಂಡ ರಾಜಾ ವೇಣುಗೋಪಾಲ ನಾಯಕ ಉದ್ಘಾಟಿಸಿ ಮಾತನಾಡಿ, ತಮ್ಮ ವರದಿಗಳ ಮೂಲಕ ಆಡಳಿತ ಯಂತ್ರವನ್ನು ಎಚ್ಚರಗೊಳಿಸುತ್ತಿರುವ ವರದಿಗಾರರು ಸಮಾಜಕ್ಕೆ ಬೇಕಿದೆ. ಹುಣಸಗಿಯಲ್ಲಿ ಆದಷ್ಟು ಬೇಗ ಪತ್ರಿಕಾ ಭವನ ಕಟ್ಟಡ ಕಾಮಗಾರಿ ಆರಂಭಿಸುವ ಕುರಿತು ತಂದೆಯವರಾದ ಶಾಸಕ ರಾಜಾ ವೆಂಕಟಪ್ಪ ನಾಯಕ ಜತೆ ಚರ್ಚಿಸುವುದಾಗಿ ಭರವಸೆ ನೀಡಿದರು.

    ಬಸವ ಪೀಠಾಧಿಪತಿ ಶ್ರೀ ವೃಷಭೇಂದ್ರ ಅಪ್ಪ ಸಾನ್ನಿಧ್ಯ ವಹಿಸಿದ್ದರು. ತಾಲೂಕು ಅಧ್ಯಕ್ಷ ಭೀಮಸೇನರಾವ ಕುಲಕರ್ಣಿ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತನಾಡಿದರು. ಜಿಪಂ ಮಾಜಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ್ ವಜ್ಜಲ್, ಉದ್ಯಮಿ ಚಂದ್ರಶೇಖರ ದಂಡಿನ್, ಸಂಘದ ಕಾರ್ಯಕಾರಿಣಿ ಸದಸ್ಯ ರಾಘವೇಂದ್ರ ಜಹಾಗೀರದಾರ, ಕಸಾಪ ತಾಲೂಕು ಅಧ್ಯಕ್ಷ ವೆಂಕಟಗಿರಿ ದೇಶಪಾಂಡೆ, ಅರಣ್ಯಾಧಿಕಾರಿ ಯಶವಂತ ರಾಠೋಡ್, ಡಿ.ಬಿ. ವಡವಡಗಿ, ಗ್ರಾಪಂ ಉಪಾಧ್ಯಕ್ಷ ಅಂದಾನಪ್ಪ, ಗುಡದಪ್ಪ ಆಕಳವಾಡಿ ಇತರರಿದ್ದರು.

    ಸರ್ಕಾರಿ ಪ್ರೌಢಶಾಲಾ ಮಕ್ಕಳು ಪ್ರಾರ್ಥನಾ ಗೀತೆ ಹಾಡಿದರು. ಅಮರಯ್ಯ ಸ್ವಾಮಿ ಜಾಲಿಬೆಂಚಿ ನಿರೂಪಣೆ ಮಾಡಿದರು. ಪವನ ದೇಶಪಾಂಡೆ ಸ್ವಾಗತಿಸಿದರು. ಬಸವರಾಜ ಶಾರದಳ್ಳಿ ವಂದಿಸಿದರು.

    ಸನ್ಮಾನ ಸ್ವೀಕರಿಸಿದ ಸಾಧಕರು
    ವಿವಿಧ ಕ್ಷೇತ್ರಗಳ ಸಾಧಕರಾದ ಡಾ.ಎಂ.ಬಿ. ಕೋರಿ, ಮಾನಪ್ಪ ಕಮತಗಿ, ಆಯಿಷಾ ಸುಮಯಾ, ತಯಬ್ ಮಹ್ಮದ್ ಡೆಕ್ಕನ್ ಅವರಿಗೆ ಕರುನಾಡ ಸಿರಿ, ಮಾಧ್ಯಮ ಕ್ಷೇತ್ರದಲ್ಲಿ ದಿ.ಗೋಪಾಲರಾವ ಕುಲಕರ್ಣಿ ಸ್ಮಾರಕ ಪ್ರಶಸ್ತಿಯನ್ನು ಪತ್ರಕರ್ತ ಎಂ.ಚಂದ್ರಶೇಖರ ಅವರಿಗೆ ಪ್ರದಾನ ಮಾಡಲಾಯಿತು. ಬಸವಸಾಗರ ಜಲಾಶಯದ ಅಣೆಕಟ್ಟು ವಿಭಾಗದಲ್ಲಿ ಸೇವೆ ಸಲ್ಲಿಸಿರುವ ನರಸಿಂಹಾಚಾರ್ಯ ಕೊಳ್ಳಿ, ಇರ್ಷಾದ್ ಪಾಷಾ ಅವರನ್ನು ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts