More

    ಪತ್ನಿ- ಪುತ್ರಿಯನ್ನು ಕೊಂದವನಿಗೆ ಜೀವಾವಧಿ ಶಿಕ್ಷೆ

    ದಾವಣಗೆರೆ: ಪತ್ನಿ ಹಾಗೂ ಮಗಳನ್ನು ಹತ್ಯೆಗೈದು, ನೇಣು ಹಾಕಿ ಪ್ರಕರಣದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಅಪರಾಧಿಗೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಸೋಮವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
    ಮಾಯಕೊಂಡ ಗ್ರಾಮದ ನಾಗರಾಜ ಶಿಕ್ಷೆಗೆ ಗುರಿಯಾದ ಅಪರಾಧಿ. ಮೂರು ವರ್ಷದ ಹಿಂದೆ ಶಿಲ್ಪಾರನ್ನು ಮದುವೆಯಾಗಿದ್ದ ನಾಗರಾಜ, ಇತರರೊಂದಿಗೆ ಮಾತನಾಡುವುದನ್ನು ತಪ್ಪಾಗಿ ಗ್ರಹಿಸಿ ಪತ್ನಿ ಶೀಲದ ಬಗ್ಗೆಶಂಕಿಸುತ್ತಿದ್ದ. ಇದೇ ಕಾರಣಕ್ಕೆ ಪ್ರಶ್ನಿಸಿ ಗಲಾಟೆ ಮಾಡುತ್ತಿದ್ದ.
    2018ರ ಏಪ್ರಿಲ್ 19ರಂದು ಬೆಳಗಿನ ಜಾವ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಹಗ್ಗದಿಂದ ಪತ್ನಿಯ ಕುತ್ತಿಗೆ ಬಿಗಿದು ಹತ್ಯೆ ಮಾಡಿ, ಶವವನ್ನು ನೇಣು ಹಾಕಿ ಆತ್ಮಹತ್ಯೆ ಎಂಬಂತೆ ಸೃಷ್ಟಿಸಲು ಯತ್ನಿಸಿದ್ದ. ಅಲ್ಲದೆ ಎರಡು ವರ್ಷದ ಮಗಳು ಕೃತಿಕಾಳನ್ನು ಸಾಕಿ ಸಲುಹುವ ಜವಾಬ್ದಾರಿಯಿಂದ ನುಣುಚಿಕೊಳ್ಳಲು ನೇಣು ಹಾಕಿ ಕೊಲೆ ಮಾಡಿದ್ದ. ನಂತರ ಮನೆಯ ಹಿಂಬಾಗಿಲಿನಿಂದ ಹೋಗಿ ಮನೆಯಲ್ಲಿದ್ದ ಸಾಕ್ಷೃಗಳನ್ನು ನಾಶಪಡಿಸಿದ್ದ.
    ತನಿಖಾಧಿಕಾರಿ ಗುರುಬಸವರಾಜ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಆರ್.ಎನ್. ಪ್ರವೀಣ್ ಕುಮಾರ್, ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದರು. ಸರ್ಕಾರದ ಪರ ಸರ್ಕಾರಿ ಅಭಿಯೋಜಕ ಕೆ.ಜಿ. ಜಯಪ್ಪ ವಕಾಲತ್ತು ನಡೆಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts