More

    ಪಠ್ಯ ರದ್ದತಿ ಖಂಡಿಸಿ ಪ್ರತಿಭಟನೆ

    ಕಲಬುರಗಿ: ಪಠ್ಯಪುಸ್ತಕದಿಂದ ಹೋರಾಟಗಾರರು ಹಾಗೂ ಪ್ರವಾದಿಗಳು, ಜೀಸಸ್ ಚರಿತ್ರೆಯನ್ನು ರದ್ದುಗೊಳಿಸಲಾಗಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
    ಕೋವಿಡ್-19 ಹಿನ್ನೆಲೆಯಲ್ಲಿ ಪಠ್ಯಗಳನ್ನು ಕಡಿತಗೊಳಿಸುವ ನೆಪದಲ್ಲಿ 7ನೇ ತರಗತಿಯಿಂದ ಹತ್ತನೇ ತರಗತಿವರೆಗಿನ ಸಮಾಜ ವಿಜ್ಞಾನ ವಿಷಯದಲ್ಲಿನ ಸಂವಿಧಾನ, ಮಹಿಳಾ, ದಲಿತ ಕಾರ್ಮಿಕ ಚಳುವಳಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಹಜರತ್ ಟಿಪ್ಪು ಸುಲ್ತಾನ್ ಸೇರಿದಂತೆ ಜನಪರ ಆಶಯಗಳನ್ನು ಒಳಗೊಂಡ ಪಠ್ಯ ಕೈಬಿಡಲಾಗಿದೆ. ಈ ಕುರಿತು ಈಗಾಗಲೇ ಶಿಕ್ಷಣ ತಜ್ಞರು, ಪ್ರಗತಿಪರ ಚಿಂತಕರು ಆಕ್ಷೇಪಿಸಿದ್ದಾರೆ ಎಂದರು.
    ಕೋವಿಡ್ ನೆಪದಲ್ಲಿ ಸಮಪರವಾದ ಆಶಯಗಳನ್ನು ಒಳಗೊಂಡ ಪಠ್ಯಗಳನ್ನು ಕೈಬಿಡಲಾಗಿದೆ. ಸಕರ್ಾರ ಕೈಬಿಟ್ಟಿರುವ ಪಠ್ಯಗಳನ್ನು ಒಮ್ಮೆ ಅವಲೋಕಿಸಿದರೆ ಉದ್ದೇಶಪೂರ್ವಕವಾಗಿ ಸಂವಿಧಾನ ಚಳುವಳಿಗೆ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನಿಗೆ ಸಂಬಂಧಿಸಿದ ಪಠ್ಯಗಳನ್ನು ಕೈಬಿಟ್ಟಿದೆ ಎಂದು ದೂರಿದರು.
    ಟಿಪ್ಪು ಸುಲ್ತಾನ್ ವಿಚಾರ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರು ಒಂದು ಜಾತಿ, ವರ್ಗಕ್ಕೆ ಸೀಮಿತರಲ್ಲ. ಬಿಜೆಪಿ ರಾಜಕೀಯ ಲಾಭಕ್ಕಾಗಿ ಈ ಕ್ರಮಕ್ಕೆ ಮುಂದಾಗಿದೆ. ಇತಿಹಾಸ ಬದಲಾವಣೆ ಆಗಬಾರದು. ಜನರ ದಾರಿ ತಪ್ಪಿಸಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.
    ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಿ ಉತ್ತಮ ನಾಗರಿಕನ್ನಾಗಿಸುವ ನಿಟ್ಟಿನಲ್ಲಿ ಪಠ್ಯಗಳನ್ನು ಮರು ರೂಪಿಸುವ ಮೌಖಿಕ ಚಚರ್ೆಗಳು ಆರಂಭವಾಗುತ್ತಿರುವಾಗಲೇ ಪಠ್ಯ ಕೈಬಿಟ್ಟಿರುವುದನ್ನು ನೋಡಿದರೆ ಆತಂಕವುಂಟು ಮಾಡುತ್ತಿದೆ. ಇದು ಶಿಕ್ಷಣದ ಮೂಲ ಉದ್ದೇಶವನ್ನೇ ಪ್ರಶ್ನಿಸುವಂತಿದೆ ಎಂದು ಆಕ್ಷೇಪಿಸಿದರು.
    ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ್ ನೆಲೋಗಿ, ದಕ್ಷಿಣ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಧರ್ಮರಾಜ ಬಿ. ಹೇರೂರ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಈರಣ್ಣ ಝಳಕಿ, ಕುಪೇಂದ್ರ ಬರಗಾಲಿ, ಕಾಶೀನಾಥ ಮರತೂರು, ನಾಗೀಂದ್ರಪ್ಪ ಪೂಜಾರಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts