More

    ಪಂಚಭೂತಗಳಲ್ಲಿ ಲೀನರಾದ ನಾಗನಗೌಡ

    ಪಂಚಭೂತಗಳಲ್ಲಿ ಲೀನರಾದ ನಾಗನಗೌಡ

    ಯಾದಗಿರಿ: ಹೃದಯಾಘಾತದಿಂದ ಭಾನುವಾರ ವಿಧಿವಶರಾದ ಮಾಜಿ ಶಾಸಕ ನಾಗನಗೌಡ ಕಂದಕೂರ ಅವರ ಅಂತ್ಯಕ್ರಿಯೆ ಸೋಮವಾರ ಸಂಜೆ 5.30ಕ್ಕೆ ಗುರುಮಠಕಲ್ ತಾಲೂಕಿನ ಕಂದಕೂರ ಗ್ರಾಮದ ಅವರ ತೋಟದಲ್ಲಿ ವೀರಶೈವ-ಲಿಂಗಾಯತ ಧರ್ಮದ ವಿಧಿ-ವಿಧಾನಗಳಂತೆ ಅಂತ್ಯಕ್ರಿಯೆ ಜರುಗಿಸಲಾಯಿತು.

    ಬೆಳಗ್ಗೆಯಿಂದಲೇ ಕಂದಕೂರಿಗೆ ಗುರುಮಠಕಲ್ ಕ್ಷೇತ್ರ ಸೇರಿ ಯಾದಗಿರಿ, ಕಲಬುರಗಿ, ರಾಯಚೂರು, ಗಂಗಾವತಿ ಹಾಗೂ ಸಿಂಧನೂರು ನಗರಗಳಿಂದ ಸಾವಿರಾರು ಜನ ಆಗಮಿಸಿ ಅಗಲಿದ ಜನನಾಯಕನ ಅಂತಿಮ ದರ್ಶನ ಪಡೆದುಕೊಂಡರು. ಗ್ರಾಮದ ಸಕರ್ಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ನಾಗನಗೌಡ ಅವರ ಪಾಥರ್ಿವ ಶರೀರ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿತ್ತು.

    ಹುಟ್ಟು ಹೋರಾಟಗಾರರಾಗಿದ್ದ ನಾಗನಗೌಡ ಕಂದಕೂರ ನಡೆದು ಬಂದ ಹಾದಿ ಹಾಗೂ ಎಪಿಎಂಸಿ, ಜಿಪಂ ಸದಸ್ಯ ಮತ್ತು ಗುರುಮಠಕಲ್ ಶಾಸಕರಾಗಿ ಅವರು ಕೈಗೊಂಡ ಅಭಿವೃದ್ಧಿ ಕಾರ್ಯಗಳ ಬಗ್ಗೆ ನೆನೆದ ಜನತೆ ಕ್ಷಣಕಾಲ ಕಣ್ಣೀರಾದರು. ನಾಗನಗೌಡರು ಅಧಿಕಾರದಲ್ಲಿ ಇರದಿದ್ದರೂ ಸಾಮಾನ್ಯರಲ್ಲಿ ಸಾಮಾನ್ಯನಾಗಿ ನಡೆದು ಬಂದ ಹಾದಿಯೇ ವೈಶಿಷ್ಟೃ ಎಂಬುದಕ್ಕೆ ಕಂದಕೂರರ ಅಂತಿಮ ದರ್ಶನ ಪಡೆದುಕೊಳ್ಳಲು ಗ್ರಾಮಕ್ಕೆ ಬಂದಿದ್ದ ಲಕ್ಷಾಂತರ ಜನ ಸಾಕ್ಷಿ ಎಂಬಂತಿತ್ತು.

    ಮಧ್ಯಾಹ್ನ ಶಾಲಾ ಆವರಣದಿಂದ ಹೂಮಾಲೆಗಳಿಂದ ಶೃಂಗರಿಸಲಾದ ವಾಹನದಲ್ಲಿ ನಾಗನಗೌಡ ಅವರ ಪಾಥರ್ಿವ ಶರೀರವನ್ನು ಮೆರವಣಿಗೆ ಮೂಲಕ ಅವರ ತೋಟಕ್ಕೆ ಕೊಂಡೊಯ್ಯಲಾಯಿತು. ಸುಮಾರು ಮೂರ್ನಾಲ್ಕು ಕಿ.ಮೀಟರ್ ಉದ್ದಕ್ಕೂ ಸೇರಿದ್ದ ಜನಸಾಗರ ಕಂದಕೂರ ಅಮರ್ ಹೈ, ಮತ್ತೊಮ್ಮೆ ಹುಟ್ಟಿ ಬನ್ನಿ ಅಪ್ಪಾಜೀ ಎಂಬ ಘೋಷಣೆ ಮೂಲಕ ಗೌರವ ಸಲ್ಲಿಸಿದರು.

    ಗ್ರಾಮದಲ್ಲಿ ಸೇರಿದ್ದ ಕಂದಕೂರ ಅಭಿಮಾನಿಗಳ ಜನಸಾಗರ ಕಂಡು ಪುತ್ರರೂ ಆದ ಶಾಸಕ ಶರಣಗೌಡ ಕಂದಕೂರ ಹಾಗೂ ಸಹೋದರ ಮಲ್ಲಿಕಾಜರ್ುನ (ರಾಜುಗೌಡ)ಕಂದಕೂರ ಕಣ್ಣೀರಿನ ಕಟ್ಟೆಯೊಡದಿತ್ತು. ಇಡೀ ಕ್ಷೇತ್ರಕ್ಕೆ ಯಜಮಾನನಂತಿದ್ದ ಹಿರಿಯ ಜೀವಿಯನ್ನು ಕಳೆದುಕೊಂಡ ಅವರ ಒಡನಾಡಿಗಳು ನೋವು ಹೇಳ ತೀರದಂತಿತ್ತು.
    ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ, ಸೋಮವಾರ ಕಂದಕೂರ ಗ್ರಾಮಕ್ಕೆ ನಾಗನಗೌಡ ಕಂದಕೂರ ಅಂತಿಮ ದರ್ಶನ ಪಡೆದರು. ಶಾಸಕ ಶರಣಗೌಡರ ಹೆಗಲ ಮೇಲೆ ಕೈ ಹಾಕಿ ಸಾಂತ್ವಾನ ಹೇಳಿದರು.

    ಈ ವೇಳೆ ಮಾಧ್ಯಮದವರ ಜತೆ ಮಾತನಾಡಿ, ನಾಗನಗೌಡರು ಅನುಭವಿ ರಾಜಕಾರಣಿಯಾಗಿದ್ದವರು. ಅವರು ಅಗಲಿಕ ನಮ್ಮ ಕುಟುಂಬಕ್ಕೆ ಆಘಾತ ತಂದಿದೆ. ಶರಣಗೌಡರು ಇವತ್ತು ಅವರ ಜಾಗ ತುಂಬಿಸಿದ್ದು, ಅವರಿಗೆ ರಾಜಕೀಯ ಭವಿಷ್ಯವಿದೆ. ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರು ಶರಣಗೌಡರ ಜತೆ ದೂರವಾಣಿ ಮೂಲಕ ಮಾತಾಡಿ, ಧೈರ್ಯ ತುಂಬಿದ್ದಾರೆ. ಅವರಿಗೆ ವಯಸ್ಸಿನ ಸಮಸ್ಯೆಯಿಂದ ಇಲ್ಲಿಗೆ ಬರೋಕೆ ಆಗಿಲ್ಲ. ನಮ್ಮ ತಂದೆ ಕುಮಾರಸ್ವಾಮಿ ಸಹ ಕಂದಕೂರಿಗೆ ಬರುವವರಿದ್ದರು. ಆದರೆ, ಮಂಡ್ಯ ಜಿಲ್ಲೆ ಕೆರೆಗೋಡು ಪ್ರತಿಭಟನೆಗಾಗಿ ಹೋಗುತ್ತಿದ್ದು, ಇನ್ನೆರಡು ದಿನಗಳಲ್ಲಿ ಯಾದಗಿರಿಗೆ ಆಗಮಿಸಲಿದ್ದಾರೆ ಎಂದರು. ನಾಗನಗೌಡ ಅವರು ದೇವೆಗೌಡರ ಕಾಲದಿಂದಲೂ ಪಕ್ಷಕ್ಕಾಗಿ ದುಡಿದಿದ್ದಾರೆ. ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ ಎಂದು ಪ್ರಾಥರ್ಿಸುವೆ. ಶಾಸಕ ಶರಣಗೌಡ ಸಹ ತಂದೆಯ ಹಾದಿಯಲ್ಲಿ ಹೋಗುತ್ತಿದ್ದಾರೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts