More

    ನ.7ರಿಂದ ಚಿಕ್ಕಮಗಳೂರಲ್ಲಿ ಶ್ರೀರಾಮ ಸೇನೆಯಿಂದ ದತ್ತಮಾಲಾ ಅಭಿಯಾನ

    ಚಿಕ್ಕಮಗಳೂರು: ದತ್ತಮಾಲಾ ಅಭಿಯಾನ ನ.7ರಿಂದ 7 ದಿನಗಳ ಕಾಲ ನಡೆಯಲಿದ್ದು ನ.13 ರಂದು ಶ್ರೀ ಗುರು ದತ್ತಾತ್ರೇಯ ಪೀಠದಲ್ಲಿ ಸಮಾರೋಪ ಕಾರ್ಯಕ್ರಮ ಜರುಗಲಿದೆ ಎಂದು ಶ್ರೀರಾಮಸೇನೆ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಹೇಳಿದರು.

    ನಾಡಿನ ಪ್ರಮುಖ ಸಾಧು ಸಂತರು, ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಅಂದು ದತ್ತಪೀಠಕ್ಕೆ ತೆರಳಿ ದತ್ತ ಪಾದುಕೆ ದರ್ಶನ ಮಾಡಲಾಗುವುದು. ಶ್ರೀ ಗುರು ದತ್ತಾತ್ರೇಯ ಹೋಮ, ಪೂಜೆ ಹಾಗೂ ಸಾಧು ಸಂತರ ಸಾನ್ನಿಧ್ಯದಲ್ಲಿ ಧಾರ್ವಿುಕ ಸಭೆ, ಪ್ರಸಾದ ವಿನಿಯೋಗ ನಡೆಯಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಹಿಂದುಗಳ ಪವಿತ್ರ ಯಾತ್ರಾ ಕೇಂದ್ರ ದತ್ತಪೀಠವನ್ನು ಇಸ್ಲಾಮೀಕರಣದಿಂದ ವಿಮುಕ್ತಿಗೊಳಿಸಲು ಕೈಗೊಂಡಿರುವ ಹೋರಾಟದ ಭಾಗವಾಗಿ ಕಳೆದ 17 ವರ್ಷಗಳಿಂದ ಶ್ರೀರಾಮ ಸೇನೆಯಿಂದ ದತ್ತಮಾಲಾ ಅಭಿಯಾನದ ಮೂಲಕ ಅವಿರತ ಹೋರಾಟ ಮಾಡಲಾಗುತ್ತಿದೆ. ದತ್ತಪೀಠ ವಿವಾದವನ್ನು ರಾಜ್ಯ ಸರ್ಕಾರವೇ ಬಗೆಹರಿಸಬೇಕು ಎಂದು ಸುಪ್ರೀಂ ಕೋರ್ಟ್ ಕಳೆದ ವರ್ಷವೇ ತೀರ್ಪು ನೀಡಿದ್ದರೂ ಈವರೆಗೂ ಕ್ರಮ ಕೈಗೊಂಡಿಲ್ಲ. ಗೋರಿಗಳನ್ನು ಅಲ್ಲಿಂದ 14 ಕಿಮೀ ದೂರದ ನಾಗೇನಹಳ್ಳಿ ಬಾಬಾಬುಡನ್ ದರ್ಗಾಕ್ಕೆ ಸ್ಥಳಾಂತರಿಸಿ ದತ್ತಪೀಠವನ್ನು ಹಿಂದುಗಳಿಗೆ ಬಿಟ್ಟುಕೊಡಬೇಕೆಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು.

    ಶ್ರೀರಾಮ ಸೇನೆ ಮುಖಂಡರು ಮಂಗಳವಾರ ದತ್ತಪೀಠಕ್ಕೆ ಭೇಟಿ ನೀಡಿದ ಸಂದರ್ಭ ಗಂಧದ ಬಾವಿಯೊಳಗಿನ ಮಣ್ಣನ್ನು ಬಗೆದು ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಒಂದೆಡೆ ಯಥಾಸ್ಥಿತಿ ಕಾಪಾಡಬೇಕೆಂದು ಸುಪ್ರಿಂ ಕೋರ್ಟ್ ಆದೇಶವಿದ್ದರೆ ಮತ್ತೊಂದೆಡೆ ಮಣ್ಣನ್ನು ಮಾರಾಟ ಮಾಡಲು ಅವಕಾಶ ನೀಡಿದ್ದೀರಿ? ಗುಹೆ ಕುಸಿಯಬೇಕಾ, ಪರಿಸರ ಹಾಳಾಗಬೇಕಾ, ಅರುಂಧತಿ ಗಂಗೆ ಬಾವಿಯನ್ನು ನಾವು ಪೂಜಿಸುತ್ತೇವೆ. ನೀವು ಹಾಳು ಮಾಡುತ್ತಿರುವುದೇಕೆ? ಎಂದು ಗಂಗಾಧರ ಕುಲಕರ್ಣಿ ಜಿಲ್ಲಾಡಳಿತವನ್ನು ಪ್ರಶ್ನೆ ಮಾಡಿದರು. ಬಾವಿಯಿಂದ ಒಂದು ಹಿಡಿ ಮಣ್ಣು ಕೂಡ ಹೊರಗೆ ಹೋಗದಂತೆ ಎಚ್ಚರಿಕೆ ವಹಿಸಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts