More

    ನ.10ರಂದು ಕಡೇನಂದಿಹಳ್ಳಿ ಪುಣ್ಯಾಶ್ರಮದಲ್ಲಿ ಮಹಾಮಂಗಲ ಕಾರ್ಯಕ್ರಮ: ಶ್ರೀ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯ

    ಶಿಕಾರಿಪುರ: ತಾಲೂಕಿನ ಶ್ರೀ ಮಳೆಮಲ್ಲೇಶ್ವರ ಕ್ಷೇತ್ರ ಕಡೇನಂದಿಹಳ್ಳಿ ಶ್ರೀ ಗುರು ರೇವಣಸಿದ್ಧೇಶ್ವರ ಪುಣ್ಯಾಶ್ರಮದಲ್ಲಿ 108 ದಿನಗಳ ಕಾಲ ನಡೆದುಕೊಂಡು ಬಂದ ಒಂದು ಕೋಟಿ ಶಿವಪಂಚಾಕ್ಷರಿ ಮಹಾಮಂತ್ರದ ಜಪಯಜ್ಞ, ದುರ್ಗಾ ಸಪ್ತಶತಿ ಪಾರಾಯಣ ಪೂಜೆ, ಶ್ರೀ ಬೃಹಸ್ಪತಿ ಹೋಮ ಮತ್ತಿತರ ಧಾರ್ಮಿಕ ವಿಧಿ ವಿಧಾನಗಳ ಮಹಾಮಂಗಲ ಕಾರ್ಯಕ್ರಮ ನ.10ರಂದು ನೆರವೇರಲಿದೆ.
    ನ.2ರಿಂದ 10ರ ವರೆಗೆ ನಡೆಯುವ ಧಾರ್ಮಿಕ ಕಾರ್ಯಗಳಿಗೆ ಬೆಕ್ಕಿನಕಲ್ಮಠದ ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿ ನ.1ರಂದು ಚಾಲನೆ ನೀಡುವರು. ಶಿವಮೊಗ್ಗ ಜಿಲ್ಲಾ ಮಲೆನಾಡು ವೀರಶೈವ ಲಿಂಗಾಯತ ಮಠಾಧೀಶರ ಪರಿಷತ್‌ನ ಎಲ್ಲ ಶ್ರೀಗಳು ಭಾಗವಹಿಸುವರು. 10ರಂದು ಬೆಳಗ್ಗೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೋಮದ ಪೂರ್ಣಾಹುತಿ ನೆರವೇರಿಸುವರು. ಶ್ರೀ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ನಡೆಯುವ ಧರ್ಮ ಸಭೆಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸುವರು. ದುಗ್ಲಿ-ಕಡೇನಂದಿಹಳ್ಳಿ ಕ್ಷೇತ್ರದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸುವರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಶುಭ ಹಾರೈಸುವರು.
    ಶಿವಪಂಚಾಕ್ಷರಿ ಬರಹ ಪುಸ್ತಕವನ್ನು ಗುಡಗಿನಕೊಪ್ಪದ ಲಿಂಗಪ್ಪ ಶರಣರು ಬಿಡುಗಡೆ ಮಾಡುವರು. ನ.2ರಿಂದ 9ರ ವರೆಗೆ ಪ್ರತಿದಿನ ಸಂಜೆ 4.30ರಿಂದ ಶಿವಪಂಚಾಕ್ಷರಿ ಹೋಮ ಮತ್ತು ಸಂಜೆ 7ರಿಂದ ಪಂ.ಶೇಖರಯ್ಯ ಸ್ವಾಮಿಗಳಿಂದ ಮಹಾತಪಸ್ವಿ ಶ್ರೀಮದುಜ್ಜಯಿನಿ ಜಗದ್ಗುರು ಸಿದ್ದಲಿಂಗ ಭಗವತ್ಪಾದರ ಪುರಾಣ ಪ್ರವಚನ ಹಾಗೂ ಧರ್ಮ ಸಮಾರಂಭ ನಡೆಯಲಿದೆ.
    ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮಹನೀಯರಿಗೆ ಪ್ರತಿದಿನ ಗುರುರಕ್ಷೆ ನೀಡಲಾಗುವುದು. ಹೋಳಿನ ಹಂಪೇಶ್ವರ ಮಠದ ವೀರಭದ್ರ ಶಿವಾಚಾರ್ಯರು, ಹಾರನಹಳ್ಳಿ(ಜಕ್ಕಲಿ) ವಿಶ್ವಾರಾಧ್ಯ ಶಿವಾಚಾರ್ಯರು, ರಾಮಘಟ್ಟ ರೇವಣಸಿದ್ಧ ಶಿವಾಚಾರ್ಯರು, ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯರು, ಚನ್ನಗಿರಿ ಕೇದಾರ ಶಿವಶಾಂತವೀರ ಶಿವಾಚಾರ್ಯರು, ಸುಳ್ಳದ ಶಿವಸಿದ್ಧರಾಮ ಶಿವಾಚಾರ್ಯರು, ಸಿಂಧನೂರು-ಕನ್ನೂರಿನ ಸೋಮನಾಥ ಶಿವಾಚಾರ್ಯರು, ಕಾರ್ಜುವಳ್ಳಿ ಸದಾಶಿವ ಶಿವಾಚಾರ್ಯರು ಸಮಾರಂಭದ ನೇತೃತ್ವ ವಹಿಸುವರು.
    ನಿತ್ಯ ಉಪನ್ಯಾಸ:
    ಪ್ರತಿದಿನ ಸಮಾರಂಭದಲ್ಲಿ ವಿವಿಧ ವಿಷಯಗಳ ಕುರಿತು ಉಪನ್ಯಾಸ ನಡೆಯಲಿದೆ. ಹಿರಿಯೂರಿನ ರಾಘವೇಂದ್ರ ಡಿ.ಎಸ್., ಯುವಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ, ಉಡುಪಿಯ ಚೈತ್ರಾ ಕುಂದಾಪುರ, ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್, ಸವಣೂರಿನ ಡಾ. ಗುರುಪಾದಯ್ಯ ವೀ. ಸಾಲಿಮಠ, ಬೆಂಗಳೂರಿನ ಹಾರಿಕಾ ಮಂಜುನಾಥ್, ಕಡೇನಂದಿಹಳ್ಳಿ ನಾಗರಾಜ ಹುಲ್ಲಿನಕೊಪ್ಪ ಉಪನ್ಯಾಸ ನೀಡುವರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts