More

    ನ್ಯಾಯ ಸಮ್ಮತ, ನಿಷ್ಪಕ್ಷಪಾತ ಚುನಾವಣೆಗೆ ಜಿಲ್ಲಾಧಿಕಾರಿ ಕರೆ

    ಬಾಗಲಕೋಟೆ: ನಿಷ್ಪಕ್ಷಪಾತ, ಪಾರದರ್ಶಕವಾಗಿ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸಲು ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ.ಎಂ ಕರೆ ನೀಡಿದರು.

    ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಚುನಾವಣಾ ಆಯೋಗದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವದರ ಜೊತೆಗೆ ಚುನಾವಣೆಗೆ ಸಂಬAದಿಸಿದAತೆ ನೋಡಲ್ ಅಧಿಕಾರಿಗಳಿಗೆ ಅವರ ಸಮಿತಿಯ ಹೊಣೆಗಾರಿಕೆ ಮತ್ತು ತಮ್ಮ ಜವಾಬ್ದಾರಿಗಳ ಕುರಿತು ಸಂಪೂರ್ಣ ಅರಿವಿರಬೇಕು. ಅಂದಾಗ ಮಾತ್ರ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದರು.

    ಸಾರ್ವಜನಿಕರು ವಿವಿಧ ಕೌಟುಂಬಿಕ ಕಾರ್ಯಕ್ರಮಗಳಾದ ಮದುವೆ, ಗೃಹ ಪ್ರವೇಶ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಬಟ್ಟೆ ಖರೀದಿ, ಆಭರಣಗಳ ಖರೀದಿಗಾಗಿ ಮತ್ತು ರೈತರು ದನ ಕರಗಳನ್ನು ಖರೀದಿ ಹಾಗೂ ಮಾರಾಟ, ಬೆಳೆಗಳ ಮಾರಾಟ ಮತ್ತು ಸಾರ್ವಜನಿಕರು ಗೃಹ ನಿರ್ಮಾಣಕ್ಕಾಗಿ ಅವಶ್ಯಕ ವಸ್ತುಗಳ ಖರೀದಿ ಸಲುವಾಗಿ ತೆಗೆದುಕೊಂಡು ಹೋಗುವ ಹಣದ ಬಗ್ಗೆ ಮಾಹಿತಿಯನ್ನು ಸಂಬಂಧಪಟ್ಟ ಅಧಿಕಾರಿ, ಸಿಬ್ಬಂದಿಯವರಿಗೆ ಸೂಕ್ತ ದಾಖಲೆಗಳನ್ನು ನೀಡಿ ಸಹಕರಿಸಬೇಕು. ೫೦ ಸಾವಿರ ರೂ. ಮೇಲ್ಪಟ್ಟ ಹಣವನ್ನು ದಾಖಲೆ ಇಲ್ಲದೇ ಸಾಗಾಟ ಮಾಡುವಂತಿಲ್ಲ ಎಂದು ತಿಳಿಸಿದರು.

    ಬ್ಯಾಂಕ್‌ಗಳಲ್ಲಿ ಹಣ ಡ್ರಾ, ವರ್ಗಾವಣೆ ಹಾಗೂ ಸಾಗಾಟದಂತ ಪ್ರಕರಣಗಳ ಮೇಲೆ ಹೆಚ್ಚಿನ ನಿಗಾವಹಿಸಿ, ಲಕ್ಷಗಿಂತ ಹೆಚ್ಚಿನ ಹಣದ ಚಟುವಟಿಕೆಗಳು ನಡೆದಲ್ಲಿ ತಕ್ಷಣ ಮಾಹಿತಿ ನೀಡುವಂತೆ ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚಿಸಿದರು. ಹೆಚ್ಚಿನ ಹಣ ವರ್ಗಾವಣೆಯ ಸಂಶಯಾಸ್ಪದ ಬ್ಯಾಂಕ್ ಖಾತೆಗಳಿದ್ದಲ್ಲಿ ಅವುಗಳ ಮಾಹಿತಿಯನ್ನು ಐಟಿ ಇಲಾಖೆಗೆ ತಿಳಿಸಬೇಕು.

    ದಕ್ಷತೆ ಹಾಗೂ ಚುರುಕಿನಿಂದ ಕಾರ್ಯನಿರ್ವಹಿಸಲು ಎಸ್‌ಎಸ್‌ಟಿ ಮತ್ತು ಎಫ್‌ಎಸ್‌ಟಿ ತಂಡಗಳ ಕಾರ್ಯನಿರ್ವಹಣೆ ತಿಳಿಸಿದ ಚುನಾವಣಾಧಿಕಾರಿಗಳು ಚುನಾವಣಾ ಪ್ರಚಾರಕ್ಕಾಗಿ ಅಕ್ರಮ ಹಣ, ಸಾಮಗ್ರಿ ಸರಬರಾಜು ಮಾಡುವುದನ್ನು ತಡೆಗಟ್ಟಲು ಪ್ರತಿ ಚೆಕ್ಪೋಸ್ಟ್ನಲ್ಲಿ ಶೋಧ ಕಾರ್ಯ ನಡೆಯುತ್ತಿದ್ದು, ಚೆಕ್‌ಪೋಸ್ಟನಲ್ಲಿ ಬರುವ ವಾಹನವನ್ನು ತಪಾಸಣೆ ಮಾಡಿ ಚುನಾವಣೆ ಕುರಿತು ಅಕ್ರಮ ವಸ್ತು, ಹಣ ಇದ್ದರೆ ವಶಕ್ಕೆ ತೆಗೆದುಕೊಳ್ಳಬೇಕು. ಹಾಗೂ ಇಡೀ ಸಂಗತಿಯಯನ್ನು ವಿಡಿಯೋ ರೆಕಾರ್ಡ ಮಾಡಿ ವರದಿಯನ್ನು ಸಲ್ಲಿಸುವಂತೆ ತಿಳಿಸಿದರು.

    ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಯುಕೆಪಿ ಮಹಾ ವ್ಯವಸ್ಥಾಪಕ ರಮೇಶ ಕಳಸದ, ಜಿ.ಪಂ ಮುಖ್ಯ ಯೋಜಾಧಿಕಾರಿ ಪುನಿತ್, ಜಂಟಿ ಕೃಷಿ ನಿರ್ದೇಶಕ ಎಲ್.ಎಸ್.ಕಳ್ಳೇನ್ನವರ, ಇಲಾಖೆಯ ಉಪನಿರ್ದೇಶಕ ಎಲ್.ಐ.ರೂಢಗಿ, ಎನ್‌ಐಸಿಯ ಗಿರಯಾಚಾರ, ರೇಷ್ಮೇ ಇಲಾಖೆಯ ಉಪನಿರ್ದೇಶಕ ಎಸ್.ಎಚ್.ಕೋರೆ, ಲೀಡ್ ಬ್ಯಾಂಕ್ ಮ್ಯಾನೇಜರ ಮದುಸೂಧನ ಸೇರಿದಂತೆ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts