More

    ನ್ಯಾಕ್ ಸಮಿತಿ ತಂಡದಿಂದ ಪರಿಶೀಲನೆ


    ಮಡಿಕೇರಿ : ಯಡೂರು ಗ್ರಾಮದ ಸರ್ಕಾರಿ ಬಿಟಿಸಿಜಿ ಪ್ರಥಮ ದರ್ಜೆ ಕಾಲೇಜಿಗೆ ಬುಧವಾರ ಮತ್ತು ಗುರುವಾರ ಎರಡು ದಿನಗಳ ಕಾಲ ನ್ಯಾಕ್ ಸಮಿತಿಯ ಅಧ್ಯಕ್ಷ ಡಾ. ಮುರಳೀಧರ್ ಚಂದೇಕರ್, ಸದಸ್ಯ ರಾಜ್‌ಕುಮಾರ್ ಕೊಥಾರಿ ಹಾಗೂ ಎಸ್. ಮರಿಯಾ ಜಾನ್ ನೇತೃತ್ವದ ತಂಡ ಭೇಟಿ ನೀಡಿ ಐದು ವರ್ಷಗಳ ಕಾಲೇಜಿನ ಪ್ರಗತಿಯನ್ನು ಪರಿಶೀಲಿಸಿದರು.

    ರಾಷ್ಟ್ರೀಯ ಮೌಲ್ಯಾಂಕನ ಸಂಸ್ಥೆ(ನ್ಯಾಕ್) ತಂಡ ಭಾರತದ ಉನ್ನತ ಶಿಕ್ಷಣ ಸಂಸ್ಥೆಗಳ ಮೌಲ್ಯಮಾಪನ ಮಾಡಿ, ಪ್ರತಿಯೊಂದು ಸಂಸ್ಥೆಗೆ ಗ್ರೇಡ್ ನೀಡುವ ಅಧಿಕೃತ ಸಂಸ್ಥೆಯಾಗಿದೆ. ಐದು ವರ್ಷಗಳಿಗೊಮ್ಮೆ ಕಾಲೇಜನ್ನು ಮೌಲ್ಯಮಾಪನಕ್ಕೆ ಒಳಪಡಿಸುತ್ತದೆ.

    ಕಾಲೇಜಿನ ಶೈಕ್ಷಣಿಕ ಪ್ರಗತಿ, ಮೂಲಸೌಕರ್ಯಗಳು, ಸಂಶೋಧನೆ ಮತ್ತು ಸಮುದಾಯದೊಂದಿಗಿನ ಸಹಭಾಗಿತ್ವ, ಮೌಲ್ಯಮಾಪನ ಪದ್ಧತಿ ಇತ್ಯಾದಿಗಳನ್ನೊಳಗೊಂಡಂತೆ ಏಳು ವಿಷಯಗಳನ್ನು ಪರಿಶೀಲಿಸಲಾಯಿತು ಎಂದು ಸಮಿತಿಯ ಅಧ್ಯಕ್ಷರು ಸುದ್ದಿಗಾರರಿಗೆ ತಿಳಿಸಿದರು.


    ಕಾಲೇಜಿನ ಎಲ್ಲ ಬೋಧಕ, ಬೋಧಕೇತರ ಸಿಬ್ಬಂದಿ, ಹಳೆಯ ವಿದ್ಯಾರ್ಥಿಗಳು, ಪೋಷಕರು ಪ್ರಸ್ತುತ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮತ್ತು ವಿಶ್ವ ವಿದ್ಯಾಲಯದ ಅಧಿಕಾರಿಗಳೊಂದಿಗೆ ನ್ಯಾಕ್ ತಂಡವು ಸಂವಾದ ನಡೆಸಿತು. ಕಾಲೇಜಿನ ಪ್ರಾಂಶುಪಾಲ ಕೆ.ಎಸ್. ಧನಲಕ್ಷ್ಮೀ, ನ್ಯಾಕ್ ಸಂಚಾಲಕ ಎಂ.ಎಸ್. ಶಿವಮೂರ್ತಿ, ಪ್ರಾಧ್ಯಾಪಕರಾದ ಡಾ. ಕೆ.ಎನ್. ಕುಸುಮಾ, ಎಂ.ಎಂ. ಸುನೀತಾ ತಂಡಕ್ಕೆ ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts