More

    ನೈಪುಣ್ಯತೆ, ಅವಿರತ ಶ್ರಮದಿಂದ ರ್ಯಾಂಕ್

    ಚಿತ್ರದುರ್ಗ: ಗುಣಮಟ್ಟದ ಶಿಕ್ಷಣ, ಶಿಕ್ಷಕರ ನೈಪುಣ್ಯತೆಯ ಬೋಧನೆ, ವಿದ್ಯಾರ್ಥಿಗಳ ಅವಿರತ ಶ್ರಮದಿಂದ ಮಾತ್ರ ರ್ಯಾಂಕ್ ಪಡೆಯಲು ಸಾಧ್ಯ ಎಂದು ದೇವರಾಜ್ ಅರಸ್ ಶಿಕ್ಷಣ ಸಂಸ್ಥೆ ಸಿಇಒ ಎಂ.ಸಿ.ರಘುಚಂದನ್ ಸಲಹೆ ನೀಡಿದರು.

    ದೇವರಾಜ್ ಅರಸ್ ಶಿಕ್ಷಣ ಸಂಸ್ಥೆ, ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯದಿಂದ ವಿದ್ಯಾಲಯದಲ್ಲಿ ಬುಧವಾರ ನಡೆದ ಮಧುರ ಕ್ಷಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

    ಜ್ಞಾನಾರ್ಜನೆ ಎಂಬುದೇ ಪವಿತ್ರ, ಶ್ರೇಷ್ಠವಾದುದು. ಶಿಕ್ಷಕ ವೃತ್ತಿಯ ಪಾವಿತ್ರ್ಯತೆ ಕಾಪಾಡಿಕೊಳ್ಳಬೇಕು. ನಿರ್ದಿಷ್ಟ ಗುರಿಯೊಂದಿಗೆ ವಿದ್ಯಾರ್ಥಿಗಳು ಹೆಜ್ಜೆ ಇಡಬೇಕು. ಬಿ.ಕಾಂ ಅಂತಿಮ ಪದವಿ ಪರೀಕ್ಷೆಯಲ್ಲಿ ಕವಿತಾ ಪ್ರಥಮ ರ್ಯಾಂಕ್ ಪಡೆದು ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಪಿಯುಸಿಯಲ್ಲಿ ರಾಜ್ಯಕ್ಕೆ 6ನೇ ರ್ಯಾಂಕ್, ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಪರಿಣಾಮ ಅವರಿಗೆ ಉಚಿತ ಶಿಕ್ಷಣ ನೀಡಿದ್ದೇವೆ ಎಂದರು.

    ರಾಜಸ್ಥಾನ, ಮಧ್ಯಪ್ರದೇಶ, ತೆಲಂಗಾಣ ಸೇರಿ ದೇಶದ ವಿವಿಧ ರಾಜ್ಯಗಳಿಂದ ವಿದ್ಯಾರ್ಥಿಗಳು ಇಲ್ಲಿಗೆ ಬಂದು ನಮ್ಮ ಸಂಸ್ಥೆಯಲ್ಲಿ ಶಿಕ್ಷಣ ಪಡೆದು, ಹಲವೆಡೆ ಉನ್ನತ ಉದ್ಯೋಗ ಪಡೆಯುತ್ತಿರುವುದು ಸಂಸತದ ವಿಚಾರ ಎಂದು ಹೇಳಿದರು.

    ಪ್ರಾಂಶುಪಾಲ ಡಾ.ಜಿ.ಈ.ಭೈರಸಿದ್ದಪ್ಪ, ಆರ್.ಎಸ್.ರಾಜು, ಡಾ.ಬಿ.ಸಿ.ಅನಂತರಾಮು, ಎಂ.ವಿ.ಗೋವಿಂದರಾಜು, ಡಾ.ಕೆ.ಪಿ.ನಾಗಭೂಷಣ, ಸ್ವಾಲೇಹ ಬೇಗಂ, ಕಲ್ಪನಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts